ಫಾರಿನ್ ಪ್ಲೇಯರ್ಸ್ ಕೈ ಕೊಟ್ಟಿದ್ರಿಂದ ಯಾವ ಟೀಂಗೆ ಹೆಚ್ಚು ನಷ್ಟ?
ಬಟ್ಲರ್, ರಬಾಡ ಇಲ್ಲದೇ GT ಗೆಲ್ಲುತ್ತಾ?

ಫಾರಿನ್ ಪ್ಲೇಯರ್ಸ್ ಕೈ ಕೊಟ್ಟಿದ್ರಿಂದ ಯಾವ ಟೀಂಗೆ ಹೆಚ್ಚು ನಷ್ಟ?ಬಟ್ಲರ್, ರಬಾಡ ಇಲ್ಲದೇ GT ಗೆಲ್ಲುತ್ತಾ?

ಐಪಿಎಲ್‌ನ ಪ್ಲೇ ಆಫ್ ಹಂತದಲ್ಲಿ 8 ಮಂದಿ ವಿದೇಶಿ ಆಟಗಾರರು ತಮ್ಮ ತಂಡಗಳನ್ನು ತೊರೆದಿದ್ದಾರೆ. ಇದ್ರಿಂದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೆ ಹೆಚ್ಚಿನ ನಷ್ಠ ಉಂಟಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೂಡ ಪ್ಲೇಆಫ್‌ನಲ್ಲಿ ಆಡುವುದಿಲ್ಲ. ಪಂಜಾಬ್ ಕಿಂಗ್ಸ್ ತಂಡದಿಂದಲೂ ಸ್ಟಾರ್ ಆಟಗಾರ ನಿರ್ಗಮಿಸಲಿದ್ದಾರೆ. ಇದ್ರಿಂದ  ಪ್ಲೇ ಆಫ್‌ನಲ್ಲಿ ಒಂದಷ್ಟು ಎಫೆಕ್ಟ್ ಆಗಲಿದೆ.

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿಲ್ ಜ್ಯಾಕ್ಸ್, ರಯಾನ್ ರಿಕಲ್ಟನ್ ಮತ್ತು ಕಾರ್ಬಿನ್ ಬಾಷ್ ಪ್ಲೇಆಫ್‌ನಲ್ಲಿ ಇರುವುದಿಲ್ಲ. ವಿಲ್ ಜ್ಯಾಕ್ಸ್ ಇಂಗ್ಲೆಂಡ್ ಏಕದಿನ ಸರಣಿಗಾಗಿ ತವರಿಗೆ ಮರಳಿದ್ದಾರೆ. ರಯಾನ್ ರಿಕಲ್ಟನ್ ಮತ್ತು ಕಾರ್ಬಿನ್ ಬಾಷ್ ಕೂಡ ಇಂಗ್ಲೆಂಡ್‌ಗೆ ಹಿಂತಿರುಗಲಿದ್ದಾರೆ. ಈ ಇಬ್ಬರೂ ದಕ್ಷಿಣ ಆಫ್ರಿಕಾದ ಆಟಗಾರರು WTC ಫೈನಲ್‌ನಲ್ಲಿ ಆಡಲಿದ್ದಾರೆ. ಜೂನ್ 11 ರಿಂದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ WTC ಫೈನಲ್ ಪಂದ್ಯ ನಡೆಯಲಿದೆ. ಮುಂಬೈ ಇಂಡಿಯನ್ಸ್ ತಂಡವು ವಿಲ್ ಜಾಕ್ಸನ್ ಬದಲಿಗೆ ಜಾನಿ ಬೈರ್‌ಸ್ಟೋವ್, ರಿಕಲ್ಟನ್ ಬದಲಿಗೆ ರಿಚರ್ಡ್ ಗ್ಲೀಸನ್ ಮತ್ತು ಕಾರ್ಬಿನ್ ಬಾಷ್ ಬದಲಿಗೆ ಚರಿತ್ ಅಸಲಂಕಾ ಅವರನ್ನು ಸೇರಿಸಿಕೊಂಡಿದೆ.

 ಆರ್‌ಸಿಬಿಗೆ ಕೈ ಕೊಟ್ಟ ಇಬ್ಬರು ಆಟಗಾರರು

ಆರ್‌ಸಿಬಿಯ ಇಬ್ಬರು ಆಟಗಾರರು ಪ್ಲೇಆಫ್‌ನಲ್ಲಿ ಕಾಣಿಸುವುದಿಲ್ಲ.  ಬೆಥೆಲ್ ಮತ್ತು ಲುಂಗಿ ಎನ್‌ಗಿಡಿ ಆರ್‌ಸಿಬಿ ಬಿಟ್ಟಿದ್ದಾರೆ.  ಆರ್‌ಸಿಬಿ ತಂಡವು ಜಾಕೋಬ್ ಬೆಥೆಲ್ ಮತ್ತು ಲುಂಗಿ ಎನ್‌ಗಿಡಿ ಬದಲಿಗೆ ಟಿಮ್ ಸೀಫರ್ಟ್ ಮತ್ತು ಬ್ಲೆಸ್ಸಿಂಗ್ ಮುಜರ್‌ಬಾನಿ  ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಆದಾಗ್ಯೂ, ತಂಡದ ಮತ್ತೊಬ್ಬ ವಿದೇಶಿ ತಾರೆ ಜೋಶ್ ಹ್ಯಾಜಲ್‌ವುಡ್ ಫಿಟ್ ಆಗಿದ್ದಾರೆ. ಇದರಿಂದ ಆರ್‌ಸಿಬಿಗೆ ಸ್ವಲ್ಪ ಧೈರ್ಯ ಬಂದಿದೆ.

GTಗೆ ಕೈ ಕೊಟ್ಟ ಬಟ್ಲರ್, ರಬಾಡ   

ಗುಜರಾತ್ ಟೈಟಾನ್ಸ್: ಗುಜರಾತ್ ತಂಡ ಪ್ಲೇಆಫ್‌ನಲ್ಲಿ ತಮ್ಮ ಪ್ರಮುಖ ಆಟಗಾರರಾಗಿರುವ ಜೋಸ್ ಬಟ್ಲರ್ ಮತ್ತು ಕಗಿಸೊ ರಬಾಡ ಅವರ ಅನುಪಸ್ಥಿತಿಯಲ್ಲಿ ಮುನ್ನಡೆಯಲಿದೆ. ಈ ಇಬ್ಬರು ಆಟಗಾರರು ಇಂಗ್ಲೆಂಡ್ ಏಕದಿನ ಸರಣಿಗಾಗಿ ಬಟ್ಲರ್ ಮರಳಿದ್ದಾರೆ. ಕಗಿಸೊ ರಬಾಡ WTC ಫೈನಲ್‌ಗಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಸೇರಿಕೊಳ್ಳಲಿದ್ದಾರೆ.

ದಕ್ಷಿಣ ಆಫ್ರಿಕಾದ ವೇಗಿ ಮಾರ್ಕೊ ಜಾನ್ಸೆನ್ ಪಂಜಾಬ್ ಕಿಂಗ್ಸ್ ತೊರೆದು ತಮ್ಮ ರಾಷ್ಟ್ರೀಯ ತಂಡವನ್ನು ಸೇರಿದ್ದಾರೆ. ಆದಾಗ್ಯೂ, ಈ ವಿದೇಶಿ ಆಟಗಾರ ಅದ್ಭುತ ಲಯದಲ್ಲಿದ್ದು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ತಂಡದಲ್ಲಿ ಕಾಣಿಕೆ ಕೊಡುವ ಆಟಗಾರನಾಗಿದ್ದಾರೆ. ಇದೀಗ ಅವರ ಅನುಪಸ್ಥಿತಿ ಪಂಜಾಬ್‌ಗೆ ಕಾಡಲಿದೆ. ಒಟ್ನಲ್ಲಿ ವಿದೇಶಿ ಆಟಗಾರರ ಈ  ನಾಲ್ಕು ತಂಡಕ್ಕೆ ಪ್ಲೇ ಆಫ್‌ ಟೈಂನಲ್ಲೇ ಕೈ ಕೊಟ್ಟಿದ್ದು, ತಂಡದೇ ಮೇಲೆ ಎಫೆಕ್ಟ್ ಬೀಳುವ ಸಾಧ್ಯತೆ ಹೆಚ್ಚಿದೆ.

Kishor KV