ಫಾರಿನ್ ಪ್ಲೇಯರ್ RCB ಕ್ಯಾಪ್ಟನ್ – ಮ್ಯಾಕ್ಸಿ & ಜಾಕ್ಸ್ ಗೆ ಗುಡ್ ನ್ಯೂಸ್
RTM ಕಾರ್ಡ್ ನಲ್ಲಿ ಉಳಿಯೋದ್ಯಾರು? 

ಫಾರಿನ್ ಪ್ಲೇಯರ್ RCB ಕ್ಯಾಪ್ಟನ್ – ಮ್ಯಾಕ್ಸಿ & ಜಾಕ್ಸ್ ಗೆ ಗುಡ್ ನ್ಯೂಸ್RTM ಕಾರ್ಡ್ ನಲ್ಲಿ ಉಳಿಯೋದ್ಯಾರು? 

ಕೌಂಟ್​ಡೌನ್ ಬಿಗಿನ್ಸ್. ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಆಕ್ಷನ್​ಗೆ ಇನ್ನೊಂದೇ ವಾರ ಬಾಕಿ. ಯಾವ ತಂಡಕ್ಕೆ ಯಾರು ಕ್ಯಾಪ್ಟನ್ ಆಗ್ತಾರೆ? ಸ್ಟಾರ್ ಆಟಗಾರರು ಎಷ್ಟು ಕೋಟಿಗೆ ಬಿಡ್ ಆಗ್ತಾರೆ? ಆರ್​ಸಿಬಿ ಫ್ರಾಂಚೈಸಿಯ ಸಾರಥ್ಯ ಯಾರ ಹೆಗಲಿಗೆ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗ್ಲಿದೆ. ಅದ್ರಲ್ಲೂ 18ನೇ ಸೀಸನ್​ಗೆ ಕಪ್ ಹೊಡಿಲೇಬೇಕು ಅಂತಾ ಪಣ ತೊಟ್ಟಿರೋ ಬೆಂಗಳೂರು ಫ್ರಾಂಚೈಸಿ ಹೊಸ ಸ್ಟ್ರಾಟಜಿಯೊಂದಿಗೆ ಅಖಾಡಕ್ಕಿಳಿಯಲಿದೆ. ಹರಾಜಿಗೂ ಮುನ್ನ ಮೂವರನ್ನ ಮಾತ್ರ ರಿಟೇನ್ ಮಾಡಿಕೊಂಡಿರೋ ತಂಡ ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದೆ. ಅದ್ರಲ್ಲೂ ಈ ಐವರು ವಿದೇಶಿ ಪ್ಲೇಯರ್ಸ್ ಟಾರ್ಗೆಟ್ ಆಗಿದ್ದಾರೆ. ಅಷ್ಟಕ್ಕೂ ಯಾರು ಆ ವಿದೇಶಿ ಪ್ಲೇಯರ್ಸ್? ಬೆಂಗಳೂರು ಪರ ಕಣಕ್ಕಿಳಿಯೋ ಫಾರಿನರ್ಸ್ ಗೆ ಏನು ಪ್ಲಸ್? ಯಾವ ಸ್ಲಾಟ್​ನಲ್ಲಿ ಸ್ಟ್ರೆಂಥ್ ಆಗಬಲ್ಲರು? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ತ್ರಿಮೋಕ್ಷಿ ಮಧ್ಯೆ ಚಿಗುರಿದ ಪ್ರೀತಿ? – BBK ನಲ್ಲಿ ಮತ್ತೊಂದು ಲವ್‌ ಸ್ಟೋರಿ

2025ರ ಐಪಿಎಲ್​ಗೂ ಮುನ್ನ ಇದೇ ತಿಂಗಳ 24 ಮತ್ತು 25 ರಂದು ಸೌದಿ ಅರೇಬಿಯಾದಲ್ಲಿ ಮೆಗಾ ಹರಾಜು ನಡೆಯಲಿದೆ. ಈ ಬಾರಿಯ ಆಕ್ಷನ್​ನಲ್ಲಿ ದಾಖಲೆಯ ಮೊತ್ತದಲ್ಲಿ ಆಟಗಾರರು ಮಾರಾಟವಾಗೋದು ಪಕ್ಕಾ.  ಅದ್ರಲ್ಲೂ ರಿಷಭ್ ಪಂತ್, ಶ್ರೇಯಸ್‌ ಅಯ್ಯರ್, ಕೆ.ಎಲ್.ರಾಹುಲ್, ಆ‌ರ್.ಅಶ್ವಿನ್ ಮತ್ತು ಯುಜ್ವೇಂದ್ರ ಚಹಲ್ ಖರೀದಿಗೆ ದೊಡ್ಡ ಫೈಟ್ ನಡೆಯಲಿದೆ. ಈಗಾಗ್ಲೇ ಈ ಐದೂ ಆಟಗಾರರು ₹2 ಕೋಟಿ ರೂಪಾಯಿ ಮೂಲ ಬೆಲೆಯನ್ನು ಹೊಂದಿದ್ದಾರೆ. ಮೊಹಮ್ಮದ್ ಶಮಿ ಅವರೂ ₹2ಕೋಟಿ ಮೂಲ ಬೆಲೆ ಹೊಂದಿದ್ದಾರೆ. ಎಡಗೈ ವೇಗಿ ಅರ್ಷದೀಪ್ ಸಿಂಗ್ ಸಹ ಇಷ್ಟೇ ಮೌಲ್ಯ ಹೊಂದಿದ್ದಾರೆ. ಗರಿಷ್ಠ ₹2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರರಲ್ಲಿ ಖಲೀಲ್ ಅಹ್ಮದ್, ಮುಕೇಶ್ ಕುಮಾರ್, ವೆಂಕಟೇಶ ಅಯ್ಯರ್, ಆವೇಶ್ ಖಾನ್, ದೀಪಕ್ ಚಾಹರ್, ಇಶಾನ್ ಕಿಶನ್ ಮತ್ತು ಭುವನೇಶ್ವರ ಕುಮಾರ್, ಮೊಹಮ್ಮದ್ ಸಿರಾಜ್ ಸೇರಿದಂತೆ ಸಾಕಷ್ಟು ಪ್ಲೇಯರ್ಸ್ ಇದ್ದಾರೆ. ಅಲ್ದೇ ವಿದೇಶಿ ಪ್ಲೇಯರ್ಸ್ ಕೂಡ ಭರ್ಜರಿ ಡಿಮ್ಯಾಂಡ್ ಗಿಟ್ಟಿಸಿಕೊಂಡಿದ್ದಾರೆ. ಹರಾಜಿಗೂ ಮುನ್ನ ಯಾವುದೇ ವಿದೇಶಿ ಆಟಗಾರನನ್ನ ರಿಟೇನ್ ಮಾಡಿಕೊಳ್ಳದ ಬೆಂಗಳೂರು ತಂಡದ ಮಾಲೀಕರು ಹರಾಜಿನ ವೇಳೆ ಐವರು ವಿದೇಶಿ ಪ್ಲೇಯರ್ಸ್ ಮೇಲೆ ಕಣ್ಣಿಟ್ಟಿದ್ದಾರೆ.

ದಕ್ಷಿಣ ಆಫ್ರಿಕಾದ ಇಬ್ಬರು ಆಟಗಾರರು ಟಾರ್ಗೆಟ್!

ಆರ್‌ಸಿಬಿ ಮೂವರು ದೇಶೀಯ ಆಟಗಾರರನ್ನು ಉಳಿಸಿಕೊಂಡಿದೆ. ಆರ್‌ಸಿಬಿ ಒಬ್ಬನೇ ಒಬ್ಬ ವಿದೇಶಿ ಪ್ಲೇಯರ್‌ನನ್ನು ಉಳಿಸಿಕೊಂಡಿಲ್ಲ. ಹೀಗಾಗಿ ಹರಾಜಿನಲ್ಲಿ ವಿದೇಶಿ ಆಟಗಾರರಿಗೂ ಬಾಜಿ ಕಟ್ಟಬೇಕಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಸ್ಟಾರ್‌ ಆಟಗಾರರ ಮೇಲೆ ಆರ್‌ಸಿಬಿ ಕಣ್ಣಿಟ್ಟಿದೆ. ಆರ್‌ಸಿಬಿ ಹರಾಜಿನಲ್ಲಿ ಇಬ್ಬರು ದಕ್ಷಿಣ ಆಫ್ರಿಕಾದ ಆಟಗಾರರನ್ನ ಟಾರ್ಗೆಟ್‌ ಮಾಡಲಿದೆ. ಈ ಪಟ್ಟಿಯಲ್ಲಿರೋ ಮೊದಲ ಹೆಸರೇ ಕ್ವಿಂಟನ್‌ ಡಿಕಾಕ್‌. ಡಿಕಾಕ್​ರನ್ನ ಲಕ್ನೋ ಸೂಪರ್‌ ಜೈಂಟ್ಸ್ ಹರಾಜಿಗೆ ಬಿಟ್ಟಿದೆ. ಲೆಫ್ಟ್‌ ಹ್ಯಾಂಡೆಡ್‌ ಬ್ಯಾಟರ್‌ ಆಗಿರೋ ಡಿಕಾಕ್ ಅಬ್ಬರಿಸಬಲ್ಲರು. ಹೀಗಾಗಿ ಡಿಕಾಕ್​ರನ್ನ ತಂಡಕ್ಕೆ ಸೇರಿಸಿಕೊಳ್ಳೋ ಪ್ಲ್ಯಾನ್​ನಲ್ಲಿದೆ.  ಹಾಗೇ ದಕ್ಷಿಣ ಆಫ್ರಿಕಾ ತಂಡದ ಎಡಗೈ ಆರಂಭಿಕ ಆಟಗಾರ ರಿಯಾನ್ ರಿಕಲ್ಟನ್ ಅವರಿಗೂ ಸಹ ಬಾಜಿ ಕಟ್ಟಬಹುದು. ಚುಟುಕು ಫಾರ್ಮೆಟ್‌ನಲ್ಲಿ ಆಡಿದ 103 ಪಂದ್ಯಗಳಲ್ಲಿ 2675 ರನ್‌ ಸಿಡಿಸಿದ್ದಾರೆ.  ಆರ್​ಸಿಬಿಗೆ ಬಂದ್ರೆ ವಿರಾಟ್ ಕೊಹ್ಲಿ ಜೊತೆ ಉತ್ತಮ ಇನ್ನಿಂಗ್ಸ್ ಆರಂಭಿಸೋ ಕೆಪಾಸಿಟಿ ಇವ್ರಲ್ಲಿದೆ.

ಇಂಗ್ಲೆಂಡ್ ನ ಜೋಸ್ ಬಟ್ಲರ್ ಮತ್ತು ಫಿಲ್ ಸಾಲ್ಟ್ ಮೇಲೆ ಕಣ್ಣು!

ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ಮೂಲಕ ಸೈ ಎನಿಸಿಕೊಂಡಿರುವ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಹಾಗೂ ಫಿಲ್ ಸಾಲ್ಟ್‌ ಮೇಲೆ ಆರ್‌ಸಿಬಿ ಕಣ್ಣು ಇಟ್ಟಿದೆ. ಈ ಇಬ್ಬರೂ ಆಟಗಾರರು ವಿಕೆಟ್‌ ಕೀಪರ್ ಬ್ಯಾಟರ್‌ ಹಾಗೂ ಆರಂಭಿಕ ಆಟಗಾರರಿಗೆ ತಂಡಕ್ಕೆ ಬಲ ತುಂಬ ಬಲ್ಲರು. ಫಿಲ್‌ ಸಾಲ್ಟ್‌ 34 ಟಿ20 ಪಂದ್ಯಗಳಲ್ಲಿ 38.77ರ ಸರಾಸರಿಯಲ್ಲಿ 1047 ರನ್‌ ಸಿಡಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 3 ಅರ್ಧಶತಕಗಳು ಸೇರಿವೆ. ರಾಜಸ್ಥಾನ ರಾಯಲ್ಸ್‌ ತಂಡದಿಂದ ಹೊರಬಿದ್ದಿರೋ ಬಟ್ಲರ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಬಟ್ಲರ್ ಈಗಾಗಲೇ ಐಪಿಎಲ್‌ನಲ್ಲಿ ಏಳು ಶತಕ ಸಿಡಿಸಿದ್ದಾರೆ.

ಆಸ್ಟ್ರೇಲಿಯಾ ಆಟಗಾರ ಜೋಶ್ ಇಂಗ್ಲಿಸ್ ಯಾರ ಪಾಲು?

ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಜೋಶ್‌ ಇಂಗ್ಲಿಷ್‌ ಅವರ ಮೇಲೂ ಬೆಂಗಳೂರು ಫ್ರಾಂಚೈಸಿ ಟಾರ್ಗೆಟ್ ಮಾಡಿದೆ. ವಿಕೆಟ್‌ ಕೀಪರ್ ಆಗಿಯೂ ಒಳ್ಳೆ ಎಕ್ಸ್​ಪೀರಿಯನ್ಸ್ ಇದೆ. ಅಲ್ಲದೆ ಕ್ಲಾಸಿಕ್ಕಾಗಿ ಬ್ಯಾಟಿಂಗ್ ಮಾಡಬಲ್ಲರು. ಅಲ್ದೇ ಸಾಕಷ್ಟು ಲೀಗ್‌ಗಳಲ್ಲೂ ತಮ್ಮ ಬ್ಯಾಟಿಂಗ್ ಪವರ್​ನ ಪ್ರೂವ್ ಮಾಡಿದ್ದಾರೆ. ಕಳೆದ ಸೆಪ್ಟೆಂಬರ್​ನಲ್ಲಿ ಸ್ಕಾಟ್ಲೆಂಡ್ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದರು. ಕೇವಲ 43 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ದಾಖಲೆ ಬರೆದಿದ್ದರು. ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ದಾಖಲೆ ಜೋಶ್ ಇಂಗ್ಲಿಸ್ ಪಾಲಾಗಿತ್ತು.

ಮ್ಯಾಕ್ಸಿ, ಜಾಕ್ಸ್ ಮತ್ತು ಸಿರಾಜ್ ಗೆ ಆರ್ ಟಿಎಂ ಕಾರ್ಡ್ ಬಳಕೆ!

2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ಗೆ ಆರ್​​​ಸಿಬಿ ಟೀಮ್​​​ ಮೊದಲು ರೀಟೈನ್​ ಮಾಡಿಕೊಂಡಿದ್ದು ವಿರಾಟ್​​ ಕೊಹ್ಲಿಯವ್ರನ್ನ. 2ನೇ ಆಯ್ಕೆ ರಜತ್​ ಪಾಟಿದಾರ್​​ ಮತ್ತು 3ನೇ ಆಯ್ಕೆಯಾಗಿ ಯಶ್​ ದಯಾಳ್​​ ಅವರನ್ನು ಉಳಿಸಿಕೊಂಡಿದೆ. ವಿರಾಟ್​ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿದ್ರೆ ರಜತ್​ ಪಾಟಿದಾರ್​ ಅವರಿಗೆ 11 ಕೋಟಿ ಮತ್ತು ಯಶ್​ ದಯಾಳ್​ ಅವರಿಗೆ 5 ಕೋಟಿ ನೀಡಿ ರೀಟೈನ್​ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್​​ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ. ಇಷ್ಟೇ ಅಲ್ದೇ ಇನ್ನೂ ಮೂವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಇದೆ. ಮೆಗಾ ಹರಾಜಿಗೂ ಮುನ್ನ ಆರ್​​ಸಿಬಿ ಮೂವರು ಆಟಗಾರರ ಮೇಲೆ ಆರ್​​ಟಿಎಂ ಕಾರ್ಡ್​ ಬಳಕೆ ಮಾಡಬಹುದು. ಆರ್​​ಟಿಎಂ ಕಾರ್ಡ್​ ಮೂಲಕ ಹರಾಜಿನ ಸಂದರ್ಭದಲ್ಲಿ ತಂಡಕ್ಕೆ ಸೇರಿಸಿಕೊಳ್ಳಬಹುದು. ಮೊಹಮ್ಮದ್ ಸಿರಾಜ್, ಗ್ಲೆನ್​ ಮ್ಯಾಕ್ಸ್​ವೆಲ್​ ಮತ್ತು ವಿಲ್​ ಜಾಕ್ಸ್​​ ಅವರನ್ನು ಬಿಡುಗಡೆ ಮಾಡಿದ್ದು, ಹರಾಜಿಗೂ ಮುನ್ನ ಈ ಮೂವರ ಮೇಲೆ ಆರ್​ಟಿಎಂ ಬಳಸಲು ಪ್ಲ್ಯಾನ್ ಮಾಡಿದೆ. ಯಾವುದೇ ಫ್ರಾಂಚೈಸಿ ಈ ಮೂವರ ಮೇಲೆ ಬಿಡ್​ ಮಾಡಿದ್ರೆ ಅಷ್ಟು ದುಡ್ಡು ಕೊಟ್ಟು ಆರ್​​ಸಿಬಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬಹುದು. ಹೀಗೆ ಸಿರಾಜ್​, ಮ್ಯಾಕ್ಸ್​ವೆಲ್​​, ವಿಲ್​ ಜಾಕ್ಸ್​​ ಅವರನ್ನು ಉಳಿಸಿಕೊಳ್ಳಲಿದೆ. ಅಲ್ಲಿಗೆ ಮ್ಯಾಕ್ಸಿ ಮತ್ತು ವಿಲ್ ಜಾಕ್ಸ್ ಕಮ್ ಬ್ಯಾಕ್ ಮಾಡಿದ್ರೆ ಉಳಿದ ವಿದೇಶಿ ಆಟಗಾರರನ್ನ ಹರಾಜಿನಲ್ಲಿ ಖರೀದಿ ಮಾಡ್ಬೇಕಾಗುತ್ತೆ.

ಒಟ್ನಲ್ಲಿ ಬೆಂಗಳೂರು ತಂಡಕ್ಕೆ ಕ್ಯಾಪ್ಟನ್, ಓಪನರ್, ವಿಕೆಟ್ ಕೀಪರ್, ಪಿನಿಶರ್, ಬೌಲರ್ ಹೀಗೆ ಎಲ್ಲಾ ಸ್ಲಾಟ್​ನಲ್ಲೂ ಆಟಗಾರರ ಅವಶ್ಯಕತೆ ಇದೆ. ಪಂಜಾಬ್ ಕಿಂಗ್ಸ್ ಬಿಟ್ರೆ ಪರ್ಸ್​ನಲ್ಲಿ ಅತೀ ಹೆಚ್ಚು ಮೊತ್ತ ಹಣವನ್ನ ಹೊಂದಿದೆ. ಹೀಗಾಗಿ ಸ್ಟಾರ್ ಪ್ಲೇಯರ್ಸ್ ತಂಡಕ್ಕೆ ಬರೋದಂತೂ ಗ್ಯಾರಂಟಿ.

Shwetha M

Leave a Reply

Your email address will not be published. Required fields are marked *