ಈ ದೇಶಗಳಿಗೆ ಹೋದ್ರೆ ಸರ್ಕಾರವೇ ದುಡ್ಡು ಕೊಡುತ್ತೆ!  – ಗಂಟುಮೂಟೆ ಕಟ್ಟೋಕು ಮೊದಲು ಈ ರೂಲ್ಸ್ ತಿಳ್ಕೊಳಿ!

ಈ ದೇಶಗಳಿಗೆ ಹೋದ್ರೆ ಸರ್ಕಾರವೇ ದುಡ್ಡು ಕೊಡುತ್ತೆ!  – ಗಂಟುಮೂಟೆ ಕಟ್ಟೋಕು ಮೊದಲು ಈ ರೂಲ್ಸ್ ತಿಳ್ಕೊಳಿ!

ಫಾರಿನ್ ಗೆ ಹೋಗ್ಬೇಕು.. ಅಲ್ಲೇ ನೆಲೆಸಿಬಿಡ್ಬೇಕು ಅಂತಾ ಹಲವರು ಕನಸು ಕಾಣ್ತಾರೆ.. ಆದ್ರೆ ಹೋಗೋದು ಹೇಗೆ? ಅದಕ್ಕೆ ದುಡ್ಡೆಲ್ಲಿದೆ ಎಂಬ ಪ್ರಶ್ನೆಗಳಿರುತ್ತವೆ.. ಅಲ್ಲದೆ ಚೆನ್ನಾಗಿ ಓದಿ, ಒಳ್ಳೆ ಕಂಪನಿಯಲ್ಲಿ ಕೆಲಸ ಮಾಡೋರಿಗೆ ಮಾತ್ರ ಈ ವಿದೇಶದ ಕನಸೆಲ್ಲಾ ಇರೋಕೆ ಸಾಧ್ಯ ಎಂದು ತಮ್ಮ ಕನಸುಗಳನ್ನು ಮುಚ್ಚಿಟ್ಟುಕೊಳ್ತಾರೆ.. ಆದ್ರೆ ನಿಮಗೆ ಕೆಲವೊಂದು ಉಚಿತ ಭಾಗ್ಯಗಳನ್ನು ಹೇಳ್ತೀನಿ.. ಅದೂ ವಿದೇಶದಲ್ಲಿ ಹೋಗಿ ನೆಲೆ ನಿಲ್ಲುವ ಉಚಿತ ಭಾಗ್ಯ.. ಇದನ್ನು ನಮ್ಮ ಸರ್ಕಾರ ಜಾರಿಗೊಳಿಸ್ತಿರೋದಲ್ಲ. ಬದಲಿಗೆ ಆ ದೇಶಗಳೇ ನೀಡುತ್ತಿರುವ ಮುಕ್ತ ಆಹ್ವಾನ.. ಹಾಗಂತ ಹೊರಟೇಬಿಡೋಣ ಅಂತಾ ಗಂಟು ಮೂಟೆ ಕಟ್ಟೋಕೆ ರೆಡಿಯಾಗ್ಬೇಡಿ.. ಮೊದಲು ಅಲ್ಲಿರುವ ಷರತ್ತುಗಳನ್ನು ಗಮನಿಸಿ..

ಇದನ್ನೂ ಓದಿ: ಈ ಹಳ್ಳಿಯಲ್ಲಿದೆ ವಿಚಿತ್ರ ರೂಲ್ಸ್!  – ಮದುವೆ ಆಗ್ಬೇಕಂದ್ರೆ ಸಸ್ಯಾಹಾರಿ ಆಗಿರಬೇಕು..!

ಜಗತ್ತು ಸುತ್ತಬೇಕು ಅನ್ನೋ ಕನಸು ಯಾರಿಗೆ ಇರೋದಿಲ್ಲ ಹೇಳಿ. ಆದರೂ ಅದೆಷ್ಟೋ ಜನರಿಗೆ ಆ ಕನಸು ಕನಸಾಗಿಯೇ ಉಳಿಯುತ್ತದೆ.  ಆದರೆ ಕೆಲವು ದೇಶಗಳು ಕೊಡುತ್ತಿರುವ ಆಫರ್ಗಳನ್ನು ನೋಡಿದ್ರೆ ನಾವೂ ಒಂದು ಕೈ ನೋಡೇ ಬಿಡೋಣ್ವ ಅಂತ ಅನ್ನಿಸಬಹುದು.. ಯಾಕಂದ್ರೆ ಆ ದೇಶಕ್ಕೆ ಹೋಗಿ ನೆಲೆಸಲು ಖರ್ಚಿನ ಬಗ್ಗೆ ಯೋಚನೆ ಮಾಡುವ ಅವಶ್ಯಕತೆ ಇಲ್ಲ. ಯಾಕಂದರೆ, ಅಲ್ಲಿ ಹೋಗಿ ನೆಲೆಸಿದ್ರೆ ಖರ್ಚು ಮಾಡಲು ಕೈ ತುಂಬಾ ಕಾಸು, ಓಡಾಡಲು ಕಾರನ್ನೂ ಅದೇ ದೇಶವೇ ಕೊಟ್ಟುಬಿಡುತ್ತೆ.. ಇಂತಹ ಆಫರ್ ನೀಡುತ್ತಿರುವ ರಾಷ್ಟ್ರಗಳ ಪೈಕಿ ಐರ್ ಲ್ಯಾಂಡ್ ದೇಶ ಕೂಡ ಒಂದು..

ತಮ್ಮ ದೇಶಕ್ಕೆ ಬಂದು  ಅಲ್ಲಿನ ಕಡಲ ನಡುವಿನ ದ್ವೀಪಗಳಲ್ಲಿ ವಾಸಿಸಲು ಬಯಸುವವರಿಗೆ ಐರ್ ಲ್ಯಾಂಡ್ ದೇಶ ಒಂದು ಬೆಸ್ಟ್ ಆಫರ್ ಮುಂದಿಟ್ಟಿದೆ. ದೇಶದ ಜನಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಐರಿಶ್ ಸರ್ಕಾರ ಈ ಅವಕಾಶ ನೀಡುತ್ತಿದೆ. ಇದು ‘ಲಿವಿಂಗ್ ಐಲ್ಯಾಂಡ್’ ನೀತಿಯ ಒಂದು ಭಾಗವಾಗಿದೆ. ಇದರಲ್ಲಿ ಐರ್ಲ್ಯಾಂಡ್ ದೇಶಕ್ಕೆ ಸೇರಿರುವ ನಿರ್ಜನವಾಗಿ ಉಳಿದಿರುವ ದ್ವೀಪಗಳಲ್ಲಿ ವಾಸಿಸುವ ಸಮುದಾಯಗಳನ್ನು ಬೆಂಬಲಿಸುವುದು ಮತ್ತು ಪುನರುಜ್ಜೀವನಗೊಳಿಸುವುದು ಸರ್ಕಾರದ ಉದ್ದೇಶ.., ದೇಶದ ಮುಖ್ಯ ಭೂಭಾಗದಿಂದ ಪ್ರತ್ಯೇಕವಾಗಿರುವ ದ್ವೀಪಗಳಿಗೆ ಮಾತ್ರ ಇದು ಅನ್ವಯಿಸುತ್ತಿದೆ . ಐರ್ಲೆಂಡ್ನ ಈ ಕಡಲಾಚೆಯ ದ್ವೀಪಗಳಲ್ಲಿ ನೆಲೆಸುವ ಹೊಸ ನಿವಾಸಿಗಳಿಗೆ ಅಲ್ಲಿನ ಸರ್ಕಾರ 80,000 ಯುರೋಗಳಷ್ಟು ಅಂದರೆ ಅಂದಾಜು 72 ಲಕ್ಷ ರೂಪಾಯಿಗಳನ್ನು ನೀಡುತ್ತದೆ. ಹಾಗಂತ ದುಡ್ಡು ಸಿಕ್ಕಿದ್ಮೇಲೆ ಜುಮ್ಮಂತ ಎಸ್ಕೇಪ್ ಆಗೋದಿಕ್ಕೆ ಆಗೋದಿಲ್ಲ.. ಅಷ್ಟೇ ಅಲ್ಲದೆ ಹೋದೋರಿಗೆಲ್ಲಾ ಈ ದುಡ್ಡು ಸಿಗೋದೂ ಇಲ್ಲ.. ಈ ಅವಕಾಶವನ್ನು ಬಳಸಿಕೊಳ್ಳುವ ಮೊದಲು ಕೆಲವೊಂದು ಷರತ್ತುಗಳನ್ನು ಗಮನಿಸಬೇಕು. ಅದರಲ್ಲಿ ಒಂದನೆಯದ್ದು ಅಲ್ಲಿ ನೆಲೆ ನಿಲ್ಲಲು ಬಯಸುವ ವ್ಯಕ್ತಿ ಐರ್ಲೆಂಡ್ನ  ಕಡಲಿನಲ್ಲಿರುವ 30 ದ್ವೀಪಗಳ ಪೈಕಿ ಒಂದರಲ್ಲಿ ಮನೆ ಖರೀದಿಸಬೇಕು. ಈ ಮನೆ ಅಥವಾ ಬಂಗಲೆಯನ್ನು 1993 ರ ಮೊದಲು ನಿರ್ಮಿಸಿರಬೇಕು ಮತ್ತು ಅದು ಎರಡು ವರ್ಷಗಳವರೆಗೆ ಖಾಲಿಯಾಗಿರಬೇಕು. ಇಂತಹ ಆಸ್ತಿಯನ್ನು ಖರೀದಿಸಿದರೆ ಮಾತ್ರ ಅದನ್ನು ನಿರ್ವಹಿಸಲು ಸರ್ಕಾರವು ಒದಗಿಸುವ 71 ಲಕ್ಷ ರೂಪಾಯಿಗಳನ್ನು ಬಳಸಬೇಕು. ಅಂದರೆ ಈ ಹಣವನ್ನು ಮನೆಯನ್ನ ನಿರ್ಮಿಸಲು ಮಾತ್ರ ಬಳಸಿಕೊಳ್ಳಬೇಕು.  ಈ ಷರತ್ತುಗಳಿಗೆ ಹೊಂದಾಣಿಕೆ ಯಾಗಿದ್ದರೆ ಮಾತ್ರ ಅಲ್ಲಿ ಉಳಿಯಲು ಅವಕಾಶವಿದೆ.. ಆಸ್ತಿ ಖರೀದಿಸುವ ದುಡ್ಡನ್ನು ನೀವೇ ಹೊಂದಿಸಿಕೊಳ್ಳಬೇಕು ಅಂತ ನೇರವಾಗಿ ಹೇಳಿಲ್ಲ ಅಷ್ಟೆ..

ಇನ್ನು ಇಂತದ್ದೇ ಆಫರ್ ಅನ್ನು ಉತ್ತರ ಸ್ಪೇನ್ ನ ಪೊಂಗಾ ಕೂಡ ನೀಡಿದೆ. ಉತ್ತರ ಸ್ಪೇನ್ ನ ಪರ್ವತ ಪ್ರದೇಶದಲ್ಲಿರುವ ಒಂದು ಸಣ್ಣ ಹಳ್ಳಿ ಪೊಂಗಾ. ಇದನ್ನು ನವವಿವಾಹಿತರಿಗೆ ಪೊಂಗಾ ಸ್ವರ್ಗ ಎನ್ನಬಹುದು. ಯುವ ಜೋಡಿಗಳಿಗೆ ಇಲ್ಲಿ ವಾಸಿಸಲು ಎಲ್ಲ ಅವಕಾಶಗಳನ್ನು ನೀಡಲಾಗುತ್ತದೆ. ಸುಮಾರು 3,600 ಡಾಲರ್ ಅಂದ್ರೆ 3 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಅಲ್ಲದೆ ಇಲ್ಲೇ ವಾಸಿಸುವ ವಿದೇಶಿಗಳಿಗೆ ಮಗು ಜನಿಸಿದ್ರೆ ಆ ಮಗುವಿಗೆ 3,600 ಡಾಲರ್ ನೀಡಲಾಗುತ್ತದೆ. ಇವರ ಉಳಿದ ಷರತ್ತುಗಳು ಸ್ಪಷ್ಟವಾಗಿಲ್ಲ..

ಇನ್ನು ವೆರ್ಮೊಂಟ್,,, ಯುನೈಟೆಡ್ ಸ್ಟೇಟ್ ನ  ಪರ್ವತದಲ್ಲಿರುವ ರಾಜ್ಯ ವೇರ್ಮೊಂಟ್ ಚೆಡ್ಡಾರ್ ಚೀಸ್ ಮತ್ತು ಪ್ರಸಿದ್ಧ ಬೆನ್ & ಜೆರ್ರಿ ಐಸ್ ಕ್ರೀಮ್ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ ಜನರನ್ನು ಸೆಳೆಯುತ್ತದೆ. ವೇರ್ಮೊಂಟ್ಗೆ ಬರುವ ಕೆಲಸಗಾರರಿಗೆ ಹಣದ ಸಹಾಯವನ್ನು ಅಲ್ಲಿನ ಸರ್ಕಾರ ನೀಡುತ್ತದೆ. ಈ ರಾಜ್ಯದ ರಿಮೋಟ್ ವರ್ಕರ್ ಗ್ರಾಂಟ್ ಪ್ರೋಗ್ರಾಂ ಅರ್ಜಿದಾರರಿಗೆ 2 ವರ್ಷಗಳವರೆಗೆ 10,000 ಡಾಲರ್ ಅಂದ್ರೆ 7.4 ಲಕ್ಷ ರೂಪಾಯಿ ನೀಡುತ್ತದೆ.

ಇದಲ್ಲದೆಅಮೆರಿಕಾದ ಅಲಾಸ್ಕಾ ಹೋಗಿ ನೆಲೆ ನಿಲ್ಲುತ್ತೀರಿ ಎಂದಾದ್ರೆ ಅಲ್ಲೂ ಹಣದ ಸಹಾಯ ಸಿಗುತ್ತದೆ. ಹಿಮ ಮತ್ತು ಚಳಿ ಇಲ್ಲಿನ ಅತಿದೊಡ್ಡ ಸವಾಲು. ಇದೇ ಕಾರಣಕ್ಕೆ ಜನರು ಇಲ್ಲಿಗೆ ಬರಲು ಹಿಂದೇಟು ಹಾಕ್ತಾರೆ. ಒಂದ್ವೇಳೆ ಅಲ್ಲಿ ವಾಸಿಸುವ ಮನಸ್ಸು ಮಾಡಿದ್ರೆ ವಾರ್ಷಿಕ 1.5 ಲಕ್ಷ ರೂಪಾಯಿ ಸರ್ಕಾರದಿಂದ ಸಿಗುತ್ತದೆ. ಒಂದು ವರ್ಷದವರೆಗೆ ಇಲ್ಲಿ ವಾಸ ಮಾಡುವುದು ಕಡ್ಡಾಯ.. ಜೊತೆಗೆ ಕೆಲ ಷರತ್ತುಗಳನ್ನು ಪಾಲಿಸಬೇಕು.

ಸ್ವಿಟ್ಜರ್ಲೆಂಡ್ ನ ಅಲ್ಬಿನೆನ್ (Albinen)ನಲ್ಲೂ ವಿಶೇಷ ಆಫರ್ ಒಂದಿದೆ.. ಈ ಆಲ್ಬಿನೆನ್ ಒಂದು ಸುಂದರವಾದ ಹಳ್ಳಿ. ಸುತ್ತಲೂ ಸುಂದರವಾದ ಸ್ವಿಸ್ ಪರ್ವತ ಇದನ್ನು ಆವರಿಸಿದೆ. ಈ ಗ್ರಾಮದಲ್ಲಿ ನೆಲೆಸಲು ಮುಂದಾಗುವ ಜನರಿಗೆ ಸರ್ಕಾರದಿಂದ ಹಣ ಸಹಾಯ ಸಿಗುತ್ತದೆ.  ವಯಸ್ಸು 45 ವರ್ಷಕ್ಕಿಂತ ಕೆಳಗಿದ್ದರೆ ವಾರ್ಷಿಕ 20 ಲಕ್ಷ ರೂಪಾಯಿ ಸಹಾಯಧನದ ರೂಪದಲ್ಲಿ ಸರ್ಕಾರ ನೀಡುತ್ತದೆ. ಅಲ್ಲಿ ಇಲ್ಲಿ ಹುಟ್ಟುವ ಪ್ರತಿ ಮಗುವಿಗೂ ಸರ್ಕಾರ ಹಣದ ಸಹಾಯ ಮಾಡುತ್ತದೆ. ಮಗುವಿಗೆ ಸರ್ಕಾರ 8 ಲಕ್ಷ ರೂಪಾಯಿ ನೀಡುತ್ತದೆ. ಸರ್ಕಾರದ ಎಲ್ಲ ಸೌಲಬ್ಯವನ್ನು ಉಚಿತವಾಗಿ ಪಡೆಯಬೇಕು ಎಂದಾದ್ರೆ ಅಲ್ಬಿನೆನ್ ನಲ್ಲಿ ಕನಿಷ್ಠ ಹತ್ತು ವರ್ಷವಾದ್ರೂ ವಾಸ ಮಾಡ್ಬೇಕು ಎಂಬ ಷರತ್ತಿದೆ.. ಅಂದಹಾಗೆ ಇಲ್ಲಿ ಒಂದು ಅಂಶವನ್ನು ಗಮನಿಸಲಬೇಕು.. ಇವೆಲ್ಲವೂ ಪ್ರಾಕೃತಿಕವಾಗಿ ಬದುಕೋಕೆ ಸವಾಲಿರುವ ಪ್ರದೇಶಗಳು ಮತ್ತು ಜನಸಂಖ್ಯೆ ಅತ್ಯಂತ ಕಡಿಮೆಯಿರುವ ಪ್ರದೇಶಗಳು.. ಇದೇ ಕಾರಣಕ್ಕಾಗಿ ಇಂತಹ ವಿಶೇಷ ಆಫರ್ ಕೊಟ್ಟು ಜನರನ್ನು ಕರೆಯುತ್ತಿವೆ ಅಲ್ಲಿನ ಸರ್ಕಾರಗಳು..

Shwetha M