ಪ್ರಿಯಾಂಕಾ ಚೋಪ್ರಾ ಧರಿಸಿದ್ದ ನೆಕ್ಲೇಸ್ ಬೆಲೆ ₹204 ಕೋಟಿ – ಪಿಗ್ಗಿ ಸ್ಟೈಲ್ ಗೆ ಫ್ಯಾಷನ್ ಪ್ರಿಯರು ಫಿದಾ!
ಸೆಲೆಬ್ರಿಟಿಗಳು ಏನ್ ಮಾಡಿದ್ರೂ ಸುದ್ದಿಯೇ. ಅದರಲ್ಲೂ ಉಡುಗೆ, ತೊಡುಗೆಗಳ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತವೆ. ಡ್ರೆಸ್, ಬ್ಯಾಗ್, ಸ್ಯಾಂಡಲ್ಸ್, ಜ್ಯುವೆಲ್ಸ್ ವಿಚಾರವಾಗಿಯೂ ಆಗಾಗ ಸದ್ದು ಮಾಡ್ತಾರೆ. ಇದೀಗ ಪ್ರಿಯಾಂಕಾ ಗಾಂಧಿ ಧರಿಸಿದ್ದ ನೆಕ್ಲೇಸ್ ಒಂದು ಸಿಕ್ಕಾಪಟ್ಟೆ ಟ್ರೆಂಡ್ ನಲ್ಲಿದೆ. ಯಾಕಂದರೆ ಅದರ ಬೆಲೆ ಕೇಳಿದವರೆಲ್ಲಾ ಹುಬ್ಬೇರಿಸುತ್ತಿದ್ದಾರೆ.
ಇದನ್ನೂ ಓದಿ : ಆದಿಪುರುಷ್ ಟ್ರೈಲರ್ ರಿಲೀಸ್ – ರಾಮನಾಗಿ ಎಂಟ್ರಿಕೊಟ್ಟ ಪ್ರಭಾಸ್ ಲುಕ್ ನೋಡಿ ಅಭಿಮಾನಿಗಳಿಗೆ ಸಂತಸ
ಜಗತ್ತಿನ ಅತ್ಯಂತ ಪ್ರತಿಷ್ಠಿತ ಫ್ಯಾಷನ್ ಇವೆಂಟ್ ಆದ ‘ಮೆಟ್ ಗಾಲಾ’ದಲ್ಲಿ (MET GALA) ಪ್ರಿಯಾಂಕಾ ಚೋಪ್ರಾ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿಯ ಅವರ ಲುಕ್ ತುಂಬಾನೇ ದುಬಾರಿಯಾಗಿತ್ತು. ನಿಕ್ ಜೊನಾಸ್ ಜೊತೆಗಿನ ಪ್ರಿಯಾಂಕಾ ಗ್ರ್ಯಾಂಡ್ ಎಂಟ್ರಿ ಎಲ್ಲರ ಮನಗೆದ್ದಿದೆ. ಈ ಬಾರಿ ಪ್ರಿಯಾಂಕಾ ಚೋಪ್ರಾ ಉಡುಪಿನ ಬದಲು ನೆಕ್ಲೆಸ್ನಿಂದಾಗಿ ಭಾರಿ ಸುದ್ದಿಯಲ್ಲಿದ್ದಾರೆ. ಪ್ರಿಯಾಂಕಾ ಚೋಪ್ರಾ ಕಾರ್ಯಕ್ರಮದಲ್ಲಿ ಕಪ್ಪು ಉಡುಪಿನಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ವ್ಯಾಲೆಂಟಿನೋ ಅವರ ಡಿಸೈನರ್ ಉಡುಪನ್ನು ಧರಿಸಿ, ಪ್ರಿಯಾಂಕಾ ಪತಿ ನಿಕ್ ಜೋನಾಸ್ ಅವರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಬಿಳಿ ಕೈಗವಸು, ಎತ್ತರದ ಬನ್, ಬಲೂನ್ ಜಾಕೆಟ್ (Baloon Jacket) ಧರಿಸಿದ್ದ ಪ್ರಿಯಾಂಕಾ ತುಂಬಾ ರಾಯಲ್ ಆಗಿ ಕಾಣುತ್ತಿದ್ದರೂ ಅವರ ನೆಕ್ಲೆಸ್ ಎಲ್ಲರ ಗಮನ ಸೆಳೆಯಿತು.
ಜಗತ್ತಿನ ಹಲವಾರು ತಾರೆಗಳು ತಮ್ಮ ನೆಚ್ಚಿನ ಡಿಸೈಸರ್‌ಗಳ (Designer) ಡ್ರೆಸ್‌ಗಳನ್ನು ತೊಟ್ಟು ಮಿಂಚಿದ್ದಾರೆ. ಭಾರತದಿಂದ ಅಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ಇಶಾ ಅಂಬಾನಿ ಮತ್ತು ನಟಾಶಾ ಪೂನ್‌ವಾಲಾ ಭಾಗವಹಿಸಿದ್ದರು. ಅಷ್ಟಕ್ಕೂ ಪ್ರಿಯಾಂಕಾ ಅವರ ನೆಕ್ಲೆಸ್ ಗಮನ ಸೆಳೆಯಲು ಕಾರಣ ಏನೆಂದರೆ, ಪ್ರಿಯಾಂಕಾ ಅವರು ಧರಿಸಿರುವ ಈ ನೆಕ್ಲೆಸ್, 11.6 ಕ್ಯಾರೆಟ್‌ನ ವಜ್ರದ ನೆಕ್ಲೆಸ್ ಆಗಿದೆ. ಇದರ ಬೆಲೆ ಸುಮಾರು 204 ಕೋಟಿ ರೂಪಾಯಿ! ಪ್ರಿಯಾಂಕಾ ಚೋಪ್ರಾ ಈ ಡ್ರೆಸ್‌ನೊಂದಿಗೆ ಭಾರವಾದ ನೆಕ್ಲೇಸ್ ಅನ್ನು ಧರಿಸಿದ್ದು, ಅದರ ವೆಚ್ಚವು ಸದ್ಯಕ್ಕೆ ಎಲ್ಲರ ಕಣ್ಣು ಕುಕ್ಕಿಸುತ್ತಿದೆ. ಇದು ಬಲ್ಗೇರಿಯ ವಜ್ರದ ನೆಕ್ಲೇಸ್ ಆಗಿದ್ದು, ಇದರ ಬೆಲೆ 25 ಮಿಲಿಯನ್ ಯುಎಸ್ ಡಾಲರ್ ಅಂದರೆ 204 ಕೋಟಿ ಎಂದು ಹೇಳಲಾಗಿದೆ. ಈ ನೆಕ್ಲೆಸ್‌ನಲ್ಲಿರುವ ವಜ್ರವು(ಬ್ಲೂ ಲಗುನಾ) ಕಂಪೆನಿ ತಯಾರಿಸಿದ ವಜ್ರದಲ್ಲಿಯೇ ಅತಿ ದೊಡ್ಡ ವಜ್ರವಾಗಿದೆ. ಇದುವರೆಗೆ ಕಂಪೆನಿಯಿಂದ ಮಾರಾಟವಾದ ಅತ್ಯಮೂಲ್ಯ ಆಭರಣ ಇದಾಗಿದೆ ಎಂದು ಇಂಟರ್‌ನ್ಯಾಷನಲ್ ಜೆಮಲಾಜಿಕಲ್ ಇನ್‌ಸ್ಟಿಟ್ಯೂಟ್ ವರದಿ ಮಾಡಿದೆ.