ಕಿಂಗ್ ಕೊಹ್ಲಿ ವಿರಾಟ್ ರೂಪಕ್ಕೆ ಕೌಂಟ್‌ಡೌನ್ – ಟೀಮ್ ಇಂಡಿಯಾಕ್ಕೆ ಅಫ್ಘಾನಿಸ್ತಾನ್ ತಂಡದಿಂದ ಗೂಗ್ಲಿ ಚಾಲೆಂಜ್

ಸೂಪರ್ 8 ಹಂತದ ಮೊದಲ ಮ್ಯಾಚ್‌ಗೆ ಟೀಮ್ ಇಂಡಿಯಾ ರೆಡಿಯಾಗಿದೆ. ಅಫ್ಘಾನಿಸ್ತಾನ್ ತಂಡದ ಎದುರು ಕಾದಾಟಕ್ಕೆ ಭಾರತದ ಸಜ್ಜಾಗಿದೆ. ಈ ಪಂದ್ಯವು ಎರಡೂ ತಂಡಗಳಿಗೂ ತುಂಬಾನೇ ಇಂಪಾರ್ಟೆಂಟ್. ಉಭಯ ತಂಡಗಳು ಮುಂಬರುವ ಪಂದ್ಯಗಳಲ್ಲಿ ಬಾಂಗ್ಲಾದೇಶ್ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಎದುರಿಸಬೇಕಿದೆ. ಹೀಗಾಗಿ ಮೊದಲ ಪಂದ್ಯದಲ್ಲೇ ಗೆಲುವಿನ ಖಾತೆ ತೆರೆದ್ರೆ, ನಂತರದ ಪಂದ್ಯಗಳ ಬಗ್ಗೆ ಟೆನ್ಷನ್ ಅಂತೂ ಇರೋದಿಲ್ಲ.
ಇದನ್ನೂ ಓದಿ:IND Vs AFG.. ಯಾರು ಸ್ಟ್ರಾಂಗ್? – ಸೂಪರ್ 8 ಸುತ್ತಿನಲ್ಲಿ ಗೆದ್ರೆ LUCK
ಟಿ20 ಕ್ರಿಕೆಟ್ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ತಂಡಗಳು ಒಟ್ಟು 8 ಬಾರಿ ಮುಖಾಮುಖಿಯಾಗಿದೆ. ಈ ವೇಳೆ 7 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿದೆ. ಹೀಗಾಗಿ ಟೀಮ್ ಇಂಡಿಯಾ ಆಫ್ಟನ್ನರ ವಿರುದ್ಧ ಭರ್ಜರಿ ಜಯ ದಾಖಲಿಸುವ ನಿರೀಕ್ಷೆಯಿದೆ.
ಅಫ್ಘನ್ಗಿಂತ ಬಲಿಷ್ಠವಾಗಿರೋ ಟೀಮ್ ಇಂಡಿಯಾ ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ, ಒಂದು ವಿಚಾರ ಗಮನಿಸಲೇಬೇಕು. ಅಫ್ಘನ್ ತಂಡ ಸುಲಭಕ್ಕೆ ಶರಣಾಗೋ ಜಾಯಮಾನದ್ದಲ್ಲ. ಇಂಡಿಯಾ ಬ್ಯಾಟ್ಸ್ಮನ್ಗಳಿಗಂತೂ ಅಫ್ಘನ್ ಬೌಲರ್ಸ್ ಟಫ್ ಫೈಟ್ ನೀಡಲು ವರ್ಕೌಟ್ ಮಾಡ್ತಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪರ್ಫಾಮೆನ್ಸ್ ನೀಡಿರುವ ಬೌಲರ್ ಫರೂಕಿ, ಗರಿಷ್ಠ ವಿಕೆಟ್ ಟೇಕರ್ ಆಗಿದ್ದಾರೆ. ಹೊಸ ಬಾಲ್ನೊಂದಿಗೆ ಪವರ್ ಪ್ಲೇನಲ್ಲಿ ಫರೂಕಿ ಬಿರುಗಾಳಿಯಂತಾ ಪರ್ಫಾಮೆನ್ಸ್ ನೀಡ್ತಿದ್ದಾರೆ. ಭರ್ಜರಿ ಫಾರ್ಮ್‌ನಲ್ಲಿರೋ ಲೆಫ್ಟ್ ಆರ್ಮ್ ಪೇಸರ್, ಆರಂಭಿಕರಾಗಿ ಕಣಕ್ಕಿಳಿಯುತ್ತಿರೋ ರೋಹಿತ್, ಕೊಹ್ಲಿಯನ್ನ ಟಾರ್ಗೆಟ್ ಮಾಡೋದಂತೂ ಸತ್ಯ. ಫರೂಕಿ ಪರ್ಫಾಮೆನ್ಸ್ ಒಂದೆಡೆಯಾದ್ರೆ, ಲೆಫ್ಟ್ ಆರ್ಮ್ ಪೇಸರ್ಗಳನ್ನ ಕೊಹ್ಲಿ-ರೋಹಿತ್ ಹೇಗೆ ಎದುರಿಸ್ತಾರೆ ಅನ್ನೋದನ್ನೂ ನೋಡಬೇಕಿದೆ. ಮಿಡಲ್ ಓವರ್ಗಳಲ್ಲಿ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಕೂಡಾ ಕಾಡಲಿದ್ದಾರೆ. ಸ್ಪಿನ್ಗೆ ನೆರವಾಗೋ ಪಿಚ್ನಲ್ಲಿ ರಶೀದ್ರ ಗೂಗ್ಲಿ ಎಸೆತಗಳನ್ನ ಎದುರಿಸೋದು ನಿಜಕ್ಕೂ ಟಫ್ ಟಾಸ್ಕ್. ಹೀಗಾಗಿ ಇಂಡಿಯಾ ಎಚ್ಚರಿಕೆಯ ಆಟವಾಡಬೇಕಿದೆ.
ಇವತ್ತು ಟೀಮ್ ಇಂಡಿಯಾ ಫ್ಯಾನ್ಸ್ ಕಾಯ್ತಿರೋದು ಕಿಂಗ್ ಕೊಹ್ಲಿಯ ವಿರಾಟ್ ಪ್ರದರ್ಶನಕ್ಕಾಗಿ. ಯಾಕೆಂದ್ರೆ, ಕೊಹ್ಲಿಗೆ ಸೆಟ್‌ಬ್ಯಾಕ್ಸ್, ಕಮ್‌ಬ್ಯಾಕ್‌ಗಳು ಹೊಸದಲ್ಲ. ಈ ಹಿಂದೆ ಹಲವು ಬಾರಿ ವಿರಾಟ್ ಫಿನಿಕ್ಸ್ನಂತೆ ಎದ್ದು ಬಂದಿದ್ದಾರೆ. ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ಟೀಂ ಇಂಡಿಯಾ ಆಡಿದ ಎಲ್ಲಾ ಮಹತ್ವದ ಟೂರ್ನಿಗಳಲ್ಲೂ, ಕೊಹ್ಲಿಯೇ ಟಾಪ್ ಸ್ಕೋರರ್ ಆಗಿದ್ದಾರೆ. ಇವತ್ತೂ ಕೂಡಾ ತಮ್ಮ ಹಳೆಯ ಖದರ್‌ಗೆ ಕೊಹ್ಲಿ ಮರಳಲಿದ್ದಾರೆ ಅಂತ ಕ್ರಿಕೆಟ್ ದಿಗ್ಗಜರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಅವರ ಫಾರ್ಮ್ ಬಗ್ಗೆ ಆತಂಕ ಪಡಬೇಕಿಲ್ಲ. ಸುಂಟರಾಳಿ ಬೀಸುವ ಮುನ್ನ ಪ್ರಶಾಂತತೆ ಆವರಿಸಿರುತ್ತೆ. ಅದರಂತೆ ಈಗ ಸೈಲಂಟಾಗಿರೋ ಕೊಹ್ಲಿ, ಮುಂದಿನ ಪಂದ್ಯಗಳಲ್ಲಿ ಅಬ್ಬರಿಸಲಿದ್ದಾರೆ ಅಂತ ಮಾಜಿ ಆಟಗಾರ ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.