ಗುಜರಾತ್ ಚುನಾವಣೆ – ಜೈ ಮೋದಿ ಎಂದವರಿಗೆ ಕೌಂಟರ್ ಕೊಟ್ಟ ಕೇಜ್ರಿವಾಲ್
ನಮಗೆ ಯಾರೊಂದಿಗೂ ದ್ವೇಷವಿಲ್ಲ ಯಾರನ್ನು ಬೇಕಾದರೂ ಬೆಂಬಲಿಸಬಹುದು

ಗುಜರಾತ್ ಚುನಾವಣೆ – ಜೈ ಮೋದಿ ಎಂದವರಿಗೆ ಕೌಂಟರ್ ಕೊಟ್ಟ ಕೇಜ್ರಿವಾಲ್ನಮಗೆ ಯಾರೊಂದಿಗೂ ದ್ವೇಷವಿಲ್ಲ ಯಾರನ್ನು ಬೇಕಾದರೂ ಬೆಂಬಲಿಸಬಹುದು

ಗಾಂಧಿನಗರ: ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪಂಚಮಹಲ್ ಜಿಲ್ಲೆಯ ಹಲೋಲ್ ನಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಕೆಲವು ಯುವಕರು ಪ್ರಧಾನಮಂತ್ರಿ ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಅರವಿಂದ್ ಕೇಜ್ರಿವಾಲ್, ಯಾರಿಗೆ ಬೇಕಾದರೂ ಬೆಂಬಲವಾಗಿ ಘೋಷಣೆಗಳನ್ನು ಕೂಗಬಹುದು. ಆದರೆ ಅವರೇನು ಅವರ ಮಕ್ಕಳಿಗೆ ಶಾಲೆಗಳನ್ನು ನಿರ್ಮಿಸುತ್ತಾರಾ?. ಉಚಿತ ವಿದ್ಯುತ್ ಒದಗಿಸುತ್ತಾರಾ? ಎಂದು ಪ್ರಶ್ನಿಸಿದರು. ಅಲ್ಲದೇ ಪ್ರಧಾನಿ ಮೋದಿ ಪರ ಘೋಷಣೆಗಳನ್ನು ಕೂಗುವವರ ಹೃದಯವನ್ನು ಮುಂದೊಂದು ದಿನ ಆಪ್ ಗೆಲ್ಲಲಿದೆ ಎಂದು ಹೇಳಿದರು.

ಇದನ್ನೂ ಓದಿ: ಅಧಿಕಾರದಿಂದ ಹೊರಹಾಕಲ್ಪಟ್ಟವರು ಮತ್ತೆ ಅಧಿಕಾರಕ್ಕೆ ಬರಲು ಯಾತ್ರೆ ನಡೆಸುತ್ತಿದ್ದಾರೆ –  ಪ್ರಧಾನಿ ಮೋದಿ

“ಕೆಲ ಸ್ನೇಹಿತರು ‘ಮೋದಿ, ಮೋದಿ’ ಎಂದು ಕೂಗುತ್ತಿದ್ದಾರೆ, ನೀವು ಯಾರನ್ನು ಬೇಕಾದರೂ ಬೆಂಬಲಿಸಿ ಘೋಷಣೆಗಳನ್ನು ಕೂಗಬಹುದು ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಆದರೆ ಕೇಜ್ರಿವಾಲ್ ನಿಮಗಾಗಿ ಶಾಲೆಗಳನ್ನು ಮಾಡುತ್ತಾರೆ. ಮಕ್ಕಳೇ, ನೀವು ಎಷ್ಟು ಘೋಷಣೆಗಳನ್ನು ಕೂಗಿದರೂ, ಕೇಜ್ರಿವಾಲ್ ನಿಮಗಾಗಿ ಉಚಿತ ವಿದ್ಯುತ್ ಅನ್ನು ನೀಡುತ್ತಾರೆ,” ಎಂದು ಅರವಿಂದ್ ಕೇಜ್ರಿವಾಲ್ ಸರಳವಾಗಿ ಹೇಳಿದರು.

ನಮಗೆ ಯಾರೊಂದಿಗೂ ದ್ವೇಷವಿಲ್ಲ. ನೀವು ಯಾರನ್ನು ಬೇಕಾದರೂ ಬೆಂಬಲಿಸಿ ಘೋಷಣೆಗಳನ್ನು ಕೂಗಬಹುದು, ಆದರೆ ಮುಂದೊಂದು ದಿನ ನಿಮ್ಮ ಮನಸ್ಸನ್ನು ಗೆದ್ದು ನಮ್ಮ ಪಕ್ಷಕ್ಕೆ ಕರೆತರುತ್ತೇವೆ. ಅಲ್ಲದೇ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ನಿರುದ್ಯೋಗಿಗಳಾಗಿದ್ದು, ತಮ್ಮ ಪಕ್ಷದ ಉದ್ಯೋಗ ಖಾತರಿಯನ್ನು ನೀಡುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಮಾಸಿಕ 3,000 ರೂಪಾಯಿ ನಿರುದ್ಯೋಗ ಭತ್ಯೆಯನ್ನು ನೀಡುವುದಾಗಿ ಪುನರುಚ್ಚರಿಸಿದರು.

 

suddiyaana