ಕತಾರ್ ವಿಶ್ವಕಪ್: ಫುಟ್ಬಾಲ್ ಸ್ಟಾರ್ಗಳ ಟ್ಯಾಟೂ ಕ್ರೇಜ್!
ದೇಹದಲ್ಲಿ ಏಸುಕ್ರಿಸ್ತ, ಸಿಂಹ, ಓಂ ನಮಃ ಶಿವಾಯ!
ಯುವಕರಿಗೆ ಟ್ಯಾಟೋ ಹಾಕಿಸಿಕೊಳ್ಳೋದು ಅಂದ್ರೆ ಅದೇನೋ ಕ್ರೇಜ್. ಚಿತ್ರ ವಿಚಿತ್ರ ಟ್ಯಾಟೂಗಳನ್ನ ಮೈಯಲ್ಲಿ ಹಾಕಿಸ್ಕೊಂಡು, ಶೋ ಮಾಡಿಕೊಂಡು ಓಡಾಡುತ್ತಾ ಇರುತ್ತಾರೆ. ಈಗ ಕತಾರ್ನಲ್ಲಿ ನಡೀತಿರೋ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲೂ ಆಟಗಾರರ ಟ್ಯಾಟೂ ಕಣ್ಣು ಕುಕ್ಕುವಂತೆ ಮಾಡ್ತಿದೆ. ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ, ಬ್ರೆಜಿಲ್ನ ನೈಮಾರ್ ಸೇರಿದಂತೆ ಸ್ಟಾರ್ ಆಟಗಾರರ ದೇಹದಲ್ಲಿ ನಾನಾ ನಮೂನೆಯ ಟ್ಯಾಟೂ ಮಿಂಚುತ್ತಿದೆ.
ಮೆಸ್ಸಿ ಯೇಸುಕ್ರಿಸ್ತನ ಹಚ್ಚೆ:
ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ತಮ್ಮ ಭುಜದ ಮೇಲೆ ಯೇಸುಕ್ರಿಸ್ತನ ಹಚ್ಚೆ ಹಾಕಿಸಿಕೊಂಡಿದ್ದಾರೆ. ಜೊತೆಗೆ ತಾಯಿ, ಪತ್ನಿ, ಮಕ್ಕಳ ಹೆಸರನ್ನು ಕೂಡ ಹಚ್ಚೆ ಹಾಕಿಸಿಕೊಂಡಿದ್ದಾರೆ. ಮೆಸ್ಸಿ ಸೊಂಟದ ಬಳಿ ತುಟಿಯ ಟ್ಯಾಟೋ ಕೂಡ ಕಂಡುಬಂದಿದೆ.
ನೈಮಾರ್ 40 ಹಚ್ಚೆ:
ಬ್ರೆಜಿಲ್ನ ಸ್ಟಾರ್ ಆಟಗಾರ ನೈಮಾರ್ ಅಂತೂ ತಮ್ಮ ದೇಹದಲ್ಲಿ ಒಟ್ಟು 40 ಹಚ್ಚೆಗಳನ್ನು ಹಾಕಿಸ್ಕೊಂಡಿದ್ದಾರೆ. ಕೈಯಲ್ಲಿ ತಾಯಿ ಮತ್ತು ಸಹೋದರಿಯ ಟ್ಯಾಟೂವನ್ನ ನೈಮಾರ್ ಹಾಕಿಸಿಕೊಂಡಿದ್ದಾರೆ.
ಹಚ್ಚೆಗಳ ರಾಜ:
ಡಚ್ ಫುಟ್ಬಾಲ್ ಆಟಗಾರ ಮೆಂಫಿಸ್ ಡಿಪ್, ಬೆನ್ನಿನ ಮೇಲೆ ಸಿಂಹದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇವರನ್ನ ಹೆಚ್ಚೆಗಳ ರಾಜ ಅಂತಾನೆ ಕರೆಯಲಾಗುತ್ತೆ.
ಓಂ ನಮಃ ಶಿವಾಯ:
ಇಂಗ್ಲೆಂಡ್ ಫುಟ್ಬಾಲ್ ತಂಡದ ಆಟಗಾರ ಥಿಯೋ ವಾಲ್ಕಾಟ್, ಹಿಂದೂ ಧರ್ಮದಿಂದ ಪ್ರಭಾವಿತರಾಗಿದ್ದಾರೆ. ಹೀಗಾಗಿ ತಮ್ಮ ಬೆನ್ನಿನ ಮೇಲೆ ಓಂ ನಮಃ ಶಿವಾಯ ಅಂತಾ ಹಚ್ಚೆ ಹಾಕಿಸಿಕೊಂಡಿದ್ದಾರೆ.