ಕತಾರ್ ಫುಟ್​ಬಾಲ್ ವಿಶ್ವಕಪ್: ‘ಬೇಕೇ ಬೇಕು.. ಬೀಯರ್ ಬೇಕು’
ಕತಾರ್ ಬೀಯರ್ ಬ್ಯಾನ್ ವಿರುದ್ಧ ಕೂಗಾಟ - ಫುಟ್​ಬಾಲ್ ವಿಶ್ವಕಪ್ ಮೊದಲ ಪಂದ್ಯದಲ್ಲೇ ರೊಚ್ಚಿಗೆದ್ದ ಫ್ಯಾನ್ಸ್

ಕತಾರ್ ಫುಟ್​ಬಾಲ್ ವಿಶ್ವಕಪ್: ‘ಬೇಕೇ ಬೇಕು.. ಬೀಯರ್ ಬೇಕು’ಕತಾರ್ ಬೀಯರ್ ಬ್ಯಾನ್ ವಿರುದ್ಧ ಕೂಗಾಟ - ಫುಟ್​ಬಾಲ್ ವಿಶ್ವಕಪ್ ಮೊದಲ ಪಂದ್ಯದಲ್ಲೇ ರೊಚ್ಚಿಗೆದ್ದ ಫ್ಯಾನ್ಸ್

ಕತಾರ್​​ನಲ್ಲಿ ಆರಂಭವಾಗಿರೋ ಫುಟ್​ಬಾಲ್ ವಿಶ್ವಕಪ್​ನಲ್ಲಿ ಸ್ಟೇಡಿಯಂನಲ್ಲಿ ಮದ್ಯಪಾನ ನಿಷೇಧಿಸಿರೋದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ನಿನ್ನೆ ಕತಾರ್ ಮತ್ತು ಈಕ್ವೆಡಾರ್ ಮಧ್ಯೆ ನಡೆದ ಮೊದಲ ಪಂದ್ಯದ ವೇಳೆ ಈಕ್ವೆಡಾರ್ ಅಭಿಮಾನಿಗಳು ‘ನಮಗೆ ಬೀಯರ್ ಬೇಕು.. ನಮಗೆ ಬೀಯರ್ ಬೇಕು’ ಅಂತಾ ಘೋಷಣೆ ಕೂಗಿದ್ದಾರೆ. ವಿಶ್ವಕಪ್ ಫುಟ್​​ಬಾಲ್ ಪಂದ್ಯಾವಳಿಗಳು ನಡೆಯೋ ಎಲ್ಲಾ ಎಂಟು ಸ್ಟೇಡಿಯಂಗಳಲ್ಲೂ ಬೀಯರ್ ಸೇರಿದಂತೆ ಎಲ್ಲಾ ಮಾದರಿಯ ಮದ್ಯಪಾನ ಮಾರಾಟ ಮತ್ತು ಸೇವನೆಯನ್ನ ನಿಷೇಧಿಸಿ ಕತಾರ್ ರಾಜಮನೆತನ ಆದೇಶ ಹೊರಡಿಸಿತ್ತು. ಸ್ಟೇಡಿಯಂನಲ್ಲಿ ಮದ್ಯಪಾನ ಸೇವನೆ ನಿಷೇಧದ  ನಿರ್ಧಾರ ಸಾಕಷ್ಟು ಚರ್ಚೆಗೆ ಕೂಡ ಗ್ರಾಸವಾಗಿತ್ತು. ಅದ್ರಲ್ಲೂ ನಿನ್ನೆ ಟೂರ್ನಿಯ ಮೊದಲ ಪಂದ್ಯದ ವೇಳೆಯೇ ಈಕ್ವೆಡಾರ್ ಅಭಿಮಾನಿಗಳು ಸ್ಟೇಡಿಯಂನಲ್ಲಿ ಬೀಯರ್ ನೀಡುವಂತೆ ಘೋಷಣೆ ಕೂಗಿದ್ದು, ಈ ವಿಡಿಯೋ ಫುಲ್ ವೈರಲ್ ಆಗಿದೆ.

ಇದನ್ನ ಓದಿ: ಟೀಮ್ ಇಂಡಿಯಾದಲ್ಲಿ ಮೇಜರ್ ಸರ್ಜರಿ – ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನ ವಜಾಗೊಳಿಸಿದ ಬಿಸಿಸಿಐ

ಅಷ್ಟಕ್ಕೂ ಕತಾರ್​ನ ಫುಟ್​ಬಾಲ್​ ಸ್ಟೇಡಿಯಂಗಳಲ್ಲಿ ಮದ್ಯಪಾನ ನಿಷೇಧಿಸಿರೋದು ಯಾಕೆ ಅನ್ನೋ ಪ್ರಶ್ನೆ ಈಗ ಎಲ್ಲರನ್ನೂ ಕಾಡ್ತಿದೆ. ಟೂರ್ನಿ ಆರಂಭವಾಗೋಕೆ ಕೇವಲ ಎರಡು ದಿನಗಳ ಹಿಂದೆ ಕತಾರ್ ರಾಜಮನೆತನ ಇಂಥದ್ದೊಂದು ನಿರ್ಧಾರಕ್ಕೆ ಬಂದಿತ್ತು. ವಿಶ್ವಕಪ್ ಫುಟ್​ಬಾಲ್ ಪಂದ್ಯ ವೀಕ್ಷಿಸೋಕೆ ವಿವಿಧ ದೇಶಗಳ ಜನರು ಸ್ಟೇಡಿಯಂಗೆ ಆಗಮಿಸುತ್ತಾರೆ. ಹೀಗಾಗಿ ಯಾರಿಗೂ ಕೂಡ ಪಂದ್ಯ ವೀಕ್ಷಣೆ ವೇಳೆ ಸಮಸ್ಯೆ ಆಗಬಾರದು. ಈ ನಿಟ್ಟಿನಲ್ಲಿ ಸ್ಟೇಡಿಯಂನಲ್ಲಿ ಮದ್ಯಪಾನ ನಿಷೇಧಿಸಲಾಗಿದೆ ಅಂತಾ ಕತಾರ್ ರಾಜಮನೆತನ ಸ್ಪಷ್ಟನೆ ನೀಡಿದೆ. ಆದ್ರೆ, ಇಂಥದ್ದೊಂದು ನಿರ್ಧಾರಕ್ಕೆ ಇನ್ನೂ ಹಲವು ಕಾರಣಗಳಿವೆ ಅನ್ನೋ ಮಾತುಗಳು ಕೂಡ ಕೇಳಿ ಬರ್ತಿವೆ. ಹೇಳಿಕೇಳಿ ಕತಾರ್ ಮುಸ್ಲಿಂ ರಾಷ್ಟ್ರ. ಕುರಾನ್ ಪ್ರಕಾರ ಮುಸ್ಲಿಮರು ಮದ್ಯಪಾನ ಮಾಡುವಂತಿಲ್ಲ. ಇದೀಗ ತಮ್ಮ ಪದ್ಧತಿಯನ್ನ ಜಾಗತಿಕ ಮಟ್ಟದ ಕ್ರೀಡಾಕೂಡದ ವೇಳೆಯೂ ಅನುಸರಿಸೋ ನಿಟ್ಟಿನಲ್ಲಿ ಸ್ಟೇಡಿಯಂನಲ್ಲಿ ಮದ್ಯಪಾನ ನಿಷೇಧಿಸಲಾಗ್ತಿದೆ ಅಂತಾ ಹೇಳಲಾಗ್ತಿದೆ. ಅಷ್ಟೇ ಅಲ್ಲ, ಈ ಮೂಲಕ ಪಾಶ್ಚಿಮಾತ್ಯರಿಗೆ ಪರೋಕ್ಷವಾಗಿ ಸೆಡ್ಡು ಹೊಡೆಯೋ ನಿಟ್ಟಿನಲ್ಲಿ ಇಟ್ಟಿರೋ ನಡೆ ಅಂತಾನೂ ವಿಶ್ಲೇಷಿಸಲಾಗ್ತಿದೆ.

ಕತಾರ್ ಫುಟ್​ಬಾಲ್ ವಿಶ್ವಕಪ್​ ಪಂದ್ಯದ ವೇಳೆ ಕೇವಲ ಮದ್ಯಪಾನ ಮಾತ್ರ ಇನ್ನೂ ಕೆಲ ವಿಚಾರಗಳಿಗೂ ನಿಷೇಧ ಹೇರಲಾಗಿದೆ. ನಿಷೇಧದ ಪಟ್ಟಿ ಹೀಗಿದೆ ನೋಡಿ.

ಕತಾರ್​​ನಲ್ಲಿ ಏನೆಲ್ಲಾ ನಿಷೇಧ?

  • ಕತಾರ್​ನಲ್ಲಿ ಸೆಕ್ಸ್ ಟಾಯ್ಸ್ ಬಳಸುವಂತಿಲ್ಲ
  • ಸೆಕ್ಸ್ ಟಾಯ್ಸ್ ಸಮೇತ ಸಿಕ್ಕಿಬಿದ್ದಲ್ಲಿ ಕಠಿಣ ಶಿಕ್ಷೆ
  • ಭಾರಿ ದಂಡ ಮತ್ತು ಜೈಲು ಶಿಕ್ಷೆ ಕೂಡ ನೀಡಲಾಗುತ್ತೆ
  • ಯಾವುದೇ ಕಾರಣಕ್ಕೂ ಕತಾರ್​ನಲ್ಲಿ ಪೋರ್ಕ್ ತಿನ್ನುವಂತಿಲ್ಲ
  • ಮುಸ್ಲಿಂ ದೇಶವಾಗಿರೋದ್ರಿಂದ ಕತಾರ್​ನಲ್ಲಿ ಪೋರ್ಕ್ ನಿಷೇಧ
  • ಕತಾರ್​ಗೆ ತೆರಳೋ ವೇಳೆ ಧಾರ್ಮಿಕ ಪುಸ್ತಕ ಕೊಂಡೊಯ್ಯುವಂತಿಲ್ಲ
  • ಕುರಾನ್, ಬೈಬಲ್, ಭಗವದ್ಗೀತೆ ಸೇರಿ ಧಾರ್ಮಿಕ ಗ್ರಂಥ ನಿಷೇಧ
  • ಟೂರ್ನಿ ಅಂತ್ಯವಾಗೋವರೆಗೆ ಇ-ಸಿಗರೇಟ್ ಬಳಸುವಂತಿಲ್ಲ

ಹೀಗೆ ಸಾಲು ಸಾಲು ನಿಷೇಧಗಳಿಂದಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಫುಟ್​ಬಾಲ್ ಅಭಿಮಾನಿಗಳು ಈಗ ತೀವ್ರ ಅಸಮಾಧಾನ ಹೊರ ಹಾಕುತ್ತಿದ್ದಾರೆ. ನಾಲ್ಕು ವರ್ಷಕ್ಕೊಮ್ಮೆ ನಡೆಯೋ ವಿಶ್ವಕಪ್ ಟೂರ್ನಿ ವೇಳೆ ಬಿಂದಾಸ್ ಆಗಿ ಎಂಜಾಯ್ ಮಾಡೋಣ ಅಂದುಕೊಂಡಿದ್ದವರು ಕತಾರ್​ನಲ್ಲಿ ನಿಷೇಧಗಳ ಪಟ್ಟಿ ಕಂಡು ಕೆಂಡವಾಗಿದ್ದಾರೆ.

suddiyaana