ಖುಷಿಯಲ್ಲಿ ಕೇಕ್ ತಿಂದ್ರೆ ಖತಂ! – ಕಲರ್, ಕೆಮಿಕಲ್ ತರುತ್ತೆ ಕ್ಯಾನ್ಸರ್ಖುಷಿಯಲ್ಲಿ ಕೇಕ್ ತಿಂದ್ರೆ ಖತಂ! – ಕಲರ್, ಕೆಮಿಕಲ್ ತರುತ್ತೆ ಕ್ಯಾನ್ಸರ್
ಮಕ್ಕಳ ಜೀವ ತಿನ್ನುತ್ತೆ ಈ ಡೆಡ್ಲಿ ಸ್ವೀಟ್

ಖುಷಿಯಲ್ಲಿ ಕೇಕ್ ತಿಂದ್ರೆ ಖತಂ! – ಕಲರ್, ಕೆಮಿಕಲ್ ತರುತ್ತೆ ಕ್ಯಾನ್ಸರ್ಖುಷಿಯಲ್ಲಿ ಕೇಕ್ ತಿಂದ್ರೆ ಖತಂ! – ಕಲರ್, ಕೆಮಿಕಲ್ ತರುತ್ತೆ ಕ್ಯಾನ್ಸರ್ಮಕ್ಕಳ ಜೀವ ತಿನ್ನುತ್ತೆ ಈ ಡೆಡ್ಲಿ ಸ್ವೀಟ್

ನಾವು ಹಣಕ್ಕೆ ಕೋಡೋ ಇಂಪಾರ್ಟೆಂಟ್ ನಮ್ಮ ಆರೋಗ್ಯಕ್ಕೆ ಕೊಡಲ್ಲ.. ಸಿಕ್ಕ ಸಿಕ್ಕಲ್ಲಿ ಏನ್ ಬೇಕಾದ್ರೂ ಅದ್ದನ್ನ ಗುಳುಂ ಸ್ವಾಹ ಮಾಡುತ್ತೇವೆ.. ಅದ್ರಿಂದ ನಮ್ಮ ಆರೋಗ್ಯಕ್ಕೆ ಏನ್ ಆಗುತ್ತೆ.. ಆ ಆಹಾರದಲ್ಲಿ ಯಾವೆಲ್ಲಾ ಕಿಮಿಕಲ್ ಇದೆ ಅನ್ನೋದನ್ನ ನಾವು ನೋಡದೆ ತಿನ್ನೋಕೆ ಹೋಗ್ತೀವಿ.. ಮಕ್ಕಳಿಂದ ಹಿಡಿದು ದೊಡ್ಡವರಿಗೂ ಕೂಡ ರೋಡ್ ಸೈಡ್ ಹಾಗೂ ಬ್ರೆಡ್ ಐಟಂಗಳನ್ನ ಇಷ್ಟಪಡ್ತಾರೆ. ಅದ್ರಲ್ಲೂ ನಾವು  ತಿನ್ನೋ ಕೇಕ್ ಎಷ್ಟು ಅಪಾಯಕಾರಿ ಅನ್ನೋದನ್ನ ನೀವು ಕೇಳಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತಿರಾ.. ಹಾಗಿದ್ರೆ ಕೇಕ್ನಲ್ಲಿ ಏನೆಲ್ಲಾ ಅಂಶ ಇರುತ್ತೆ..? ಅದನ್ನ ತಿಂದ್ರೆ ಏನ್ ಆಗುತ್ತೆ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಯಾವ್ದೋ ಸ್ವಿಚ್‍‍ಗೆ ಇನ್ಯಾವ್ದೋ ಬಲ್ಬ್ ಆನ್ ಆಯ್ತಾ? – ಜಗದೀಶ್‌ ಆಟಕ್ಕೆ ಮನೆ ಮಂದಿ ಫುಲ್‌ ಸುಸ್ತು!

ನಿಜಕ್ಕೂ ನಾವು ತಿನ್ನೋ ಕೆಲ ಆಹಾರದಿಂದಲೇ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಎಫೆಕ್ಟ್ ಆಗುತ್ತೆ. ಕೆಲ ವಿಷಕಾರಿ ಅಂಶಗಳು ನಮ್ಮ ದೇಹ ಸೇರಿ ಪ್ರಾಣ ಕೂಡ ತೆಗೆಯತ್ತೆ. ಜನ್ರನ್ನ ಸೆಳೆಯೋಕೆ ಹಾಕಿಕೋ ಬಣ್ಣ, ಟೆಸ್ಟ್ ಬರಲಿ ಅನ್ನೋಕೆ ಹಾಕಿಕೋ ಕೆಲ ಕೆಮಿಕಲ್ ಸಾಕಷ್ಟು ಅಪಾಯಕಾರಿ.. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಗೋಬಿಮಂಚೂರಿ, ಕಬಾಬ್ ತಯಾರಿಕೆಯಲ್ಲಿ ಬಳಸುವ ಕೆಂಪು ಬಣ್ಣವನ್ನು ಬ್ಯಾನ್ ಮಾಡಿತ್ತು. ಅದ್ರಿಂದ ಜನರ ಆರೋಗ್ಯದ ಮೇಲೆ ಎಫೆಕ್ಟ್ ಆಗುತಿತ್ತು.. ಈಗ ಕೆೇಕ್ನಲ್ಲಿರೋ ಹಾನಿಕಾರಕ ಅಂಶದ ಬಗ್ಗೆ ಕೇಳಿದ್ರೆ ನಿಜಕ್ಕೂ ಭಯ ಆಗುತ್ತೆ..

ಈ ಮಗುವನ್ನ ಒಮ್ಮೆ ನೋಡಿ.. ನೋಡೋಕೆ ಎಷ್ಟು ಮುದ್ದು ಮುದ್ದಾಗಿ ಇದೆ ಅಲ್ವಾ..ಕೇಕ್ ತಿಂದು ಈ  5 ವರ್ಷದ ಧೀರಜ್ ಸಾವನ್ನಪ್ಪಿದ್ದಾನೆ.. ಈ ಬಾಲಕನ ತಂದೆ ಬಾಲರಾಜ್ ಹಾಗೂ ತಾಯಿ ನಾಗಲಕ್ಷ್ಮೀ ಸ್ಥಿತಿ ಗಂಭೀರವಾಗಿ ಆಸ್ಪತ್ರೆ ಪಾಲಾಗಿದ್ರು. ಹಳಸಿದ ಕೇಕ್ ತಿಂದು ಈ ಘಟನೆ ನಡೆದಿದೆ.  ಕೆಲ ತಿಂಗಳ ಹಿಂದೆ ಪಂಜಾಬ್ನಲ್ಲೂ ಸಹ ಒಂದು ಮಗು ಕೇಕ್ ತಿಂದು ಸಾವನ್ನಪ್ಪಿತ್ತು. ಅದಕ್ಕೆ ಕೇಕ್ ತಿನ್ನೋ ಮುಂಚೆ ನೀವು ಸಾಕಷ್ಟು ಬಾರಿ ಯೋಚನೆ ಮಾಡಬೇಕು.

 ರೆಡ್ ವೆಲ್ವೆಟ್ ಮತ್ತು ಬ್ಲಾಕ್ ಫಾರೆಸ್ಟ್ ಕೇಕ್ ಡೇಂಜರ್..!

ಹೌದು. ರೆಡ್ ವೆಲ್ವೆಟ್ ಮತ್ತು ಬ್ಲ್ಯಾಕ್ ಫಾರೆಸ್ಟ್ ಸೇರಿದಂತೆ ಜನಪ್ರಿಯ ಕೇಕ್ ಪ್ರಭೇದಗಳಲ್ಲಿ ಹಾನಿಕಾರಕ ಪದಾರ್ಥಗಳು ಪತ್ತೆಯಾಗಿವೆ .. ರಾಜ್ಯಾದ್ಯಂತ ಕೇಕ್ಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಪದಾರ್ಥಗಳನ್ನು ಬಳಸಲಾಗುತ್ತಿದೆ ಎಂಬ ಶಂಕೆಯಿಂದಾಗಿ 235 ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಇವುಗಳಲ್ಲಿ 12 ಮಾದರಿಗಳಲ್ಲಿ ಅಲೂನಾ ರೆಡ್, ಸನ್ಸೆಟ್ ಯೆಲ್ಲೋ, ಪೊನ್ಸೆಯು 4ಆರ್ ಮತ್ತು ಕಾರ್ಮೋಸಿನ್ನಂತಹ ಹಾನಿಕಾರಕ ಅಂಶಗಳು ಕಂಡುಬಂದಿವೆ.  ಈ ಕೃತಕ ಬಣ್ಣಗಳು ಕೇವಲ ಕ್ಯಾನ್ಸರ್ ತರುವುದು ಮಾತ್ರವಲ್ಲದೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳನ್ನು ಕೂಡ ತಂದುಕೊಡುವ ಸಾಧ್ಯತೆ ಇರುತ್ತದೆ.

ಕೇಕ್ ತಿಂದ್ರೆ ಖತಂ..!

ಅಲೂನಾ ರೆಡ್ – ಇದನ್ನು ಸೇವಿಸುವುದರಿಂದ ಅಲರ್ಜಿ, ಅಸ್ತಮಾ, ಜೀರ್ಣಾಂಗ ವ್ಯವಸ್ಥೆಯ ತೊಂದರೆಗಳು ಮತ್ತು ತಲೆನೋವು ಬರುತ್ತದೆ.

ಸನ್ಸೆಟ್ ಯೆಲ್ಲೋ – ಸನ್ಸೆಟ್ ಯೆಲ್ಲೋ ಅಲರ್ಜಿ, ಅತಿಯಾದ ಚಟುವಟಿಕೆ, ಕ್ರೊಮೊಸೋಮ್ ಹಾನಿ, ಥೈರಾಯಿಡ್ ತೊಂದರೆಗಳು ಮತ್ತು ಮಾನಸಿಕ ಒತ್ತಡವನ್ನು ತಂದುಕೊಡುತ್ತದೆ.

ಪೊನ್ಸೆಯು 4ಆರ್ – ಪೊನ್ಸೆಯು 4ಆರ್ ಅಲರ್ಜಿ, ಅಸ್ತಮಾದ ಜೊತೆಗೆ ಮಕ್ಕಳಲ್ಲಿ ನಡವಳಿಕೆಯ ಬದಲಾವಣೆಗಳನ್ನು ತರುತ್ತದೆ.

ಟಾರ್ಟ್ರಾಜಿನ್ – ಟಾರ್ಟ್ರಾಜಿನ್  ಚರ್ಮದ ಮೇಲಿನ ದದ್ದುಗಳು, ಉಸಿರಾಟ ತೊಂದರೆಗಳು, ಮೈಗ್ರೇನ್, ಮಾನಸಿಕ ಒತ್ತಡ, ಮಾನಸಿಕ ಖಿನ್ನತೆ, ದೃಷ್ಟಿ ಸಮಸ್ಯೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು ಕಾಣಿಸಿಕೊಳ್ಳುವಂತೆ ಮಾಡುತ್ತದೆ.

ಕೇಕ್‌ಗೆ ಬಳಸಲಾಗುತ್ತೆ ಜೀವ ತೆಗೆಯೋ ಕೆಮಿಕಲ್ಸ್

ಕೆೇವಲ ಬಣ್ಣ ಮಾತ್ರ ಅಲ್ಲ ಕೇಕ್‌ ಬಳಕೆಯಲ್ಲಿ ಸಾಕಷ್ಟು ಕೆಮಿಕಲ್ಸ್ ಗಳನ್ನ ಬಳ ಸಲಾಗುತ್ತೆ. ಅದು ಮನುಷ್ಯನ ಜೀವದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತೆ..

ಕೇಕ್‌ನಲ್ಲಿ ಕೆಮಿಕಲ್..!

ಆಸ್ಪರ್ಟೇಮ್ (Aspartame), 2 ನಿಯೋಟೇಮ್ (Neotame ), 3 ಸ್ಯಾಕ್ರರಿನ್ (Saccharin  ), 4 ಸುಕ್ರಲೋಸ್ (Sucralose ).. ಈ ನಾಲ್ಕು ಕೆಮಿಕಲ್‌ಗಳನ್ನ ಸಕ್ಕರೆ ಬದಲಾಗಿ ಬಳಸಲಾಗುತ್ತೆ.

ಈ ನಾಲ್ಕು ಕೆಮಿಕಲ್‌ಗಳನ್ನ ಸಕ್ಕರೆ ಬದಲಾಗಿ ಬಳಸಲಾಗುತ್ತೆ.. ಇದನ್ನ ತಂಪು ಪಾನಿಯ ಮತ್ತು ಕೇಕ್‌ಗಳನ್ನ ಬಳಸಲಾಗುತ್ತೆ.. ಇದನ್ನ ಕಡಿಮೆ ಪ್ರಮಾಣದ ಬದಲು ಹೆಚ್ಚು ಪ್ರಮಾಣದಲ್ಲಿ ಬಳಕೆ ಆಗುತ್ತೆ. ಇದನ್ನ ಬಳಸುವುದಿಂದ ಕರ್ಚು ಕಡಿಮೆ. 10 ಕೆಜಿ ಸಕ್ಕರೆ ಬಳಸುವ ಜಾಗದಲ್ಲಿ ಈ ಕೆಮಿಕಲ್‌ಗಳನ್ನ ಅರ್ಧ ಕೆಜಿ ಬಳಸಿದ್ರೆ ಸಾಕು.. ಹೀಗಾಗಿ ಹೆಚ್ಚು ಲಾಭ ಬರುವುದರಿಂದ ಕೇಕ್ ತಯಾರಿಕರು ಇದನ್ನ ಹೆಚ್ಚಾಗಿ ಬಳಸುತ್ತಾರೆ. ಇದರಿಂದ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತೆ.

ಕೇಕ್‌ ತಿನ್ನೋದ್ರಿಂದ ಜೀವಕ್ಕೆ ಆಪತ್ತು ಬರುತ್ತೆ.. ಸಣ್ಣ ಸಣ್ಣ ಖುಷಿಗಾಗಿ ದೊಡ್ಡ ಬೆಲೆ ತರಬೇಕಾಗುತ್ತೆ.. ಇದಕ್ಕೆ ದೊಡ್ಡ ಉದಾಹರಣೆ ಕೆಲ ದಿನಗಳ ಹಿಂದೆ ಮೃತಪಟ್ಟ ಮಗು.. ಹೀಗಾಗಿ ಸಾಕಷ್ಟು ಎಚ್ಚರಿಕೆಯಿಂದ ಇರಿ.. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ.

Shwetha M