ಈ ಹೋಟೆಲ್‌ನಲ್ಲಿ ದೋಸೆ ತಿಂದ್ರೆ ಸಿಗುತ್ತೆ ಕೈತುಂಬಾ ದುಡ್ಡು! –  ಗರಿಗರಿಯಾದ ದೋಸೆ ತಿನ್ನಲು ಷರತ್ತು ಅನ್ವಯ

ಈ ಹೋಟೆಲ್‌ನಲ್ಲಿ ದೋಸೆ ತಿಂದ್ರೆ ಸಿಗುತ್ತೆ ಕೈತುಂಬಾ ದುಡ್ಡು! –  ಗರಿಗರಿಯಾದ ದೋಸೆ ತಿನ್ನಲು ಷರತ್ತು ಅನ್ವಯ

ದೋಸೆ ಎಲ್ಲರ ಅಚ್ಚುಮೆಚ್ಚಿನ ತಿಂಡಿ. ಅನೇಕರಿಗೆ ಈ ತಿಂಡಿಯೇ ಬೆಳಗ್ಗಿನ ಹೊತ್ತಲ್ಲಿ ಬೇಕು. ಹೆಚ್ಚು ಮಸಾಲೆ ಇಲ್ಲದ ಮೃದುವಾದ ಮತ್ತು ಗರಿಗರಿಯಾದ ದೋಸೆಯು ಆಹಾರ ಪ್ರಿಯರಿಗೆ ಬಾಯಲ್ಲಿ ನೀರೂರಿಸುವ ಉಪಹಾರವಾಗಿದೆ. ಹೀಗಾಗಿಯೇ ಕೆಲವರಿಗೆ ಮುಂಜಾನೆ ತಿಂಡಿಗೆ, ಸ್ಕೂಲ್‌, ಆಫೀಸ್‌ಗೆ ಹೋಗುವಾಗ ಲಂಚ್‌ ಬಾಕ್ಸ್‌ಗೂ ಇದೇ ತಿಂಡಿ ಬೇಕು. ಅಷ್ಟೇ ಅಲ್ಲದೇ ಇನ್ನೂ ಒಂದು ಬೇಕು ಅಂತಾ ಅಮ್ಮನ ಕೈಯಲ್ಲಿ ದೋಸೆ ಮಾಡಿಸಿಕೊಂಡು 5 ರಿಂದ 6 ದೋಸೆ ತಿನ್ನುತ್ತಾರೆ. ಇನ್ನು ದೋಸೆ ತಿನ್ನೋ ಚಾಲೆಂಜ್‌ ಮಾಡಿದ್ರೆ? ಅಬ್ಬಾಬ್ಬಾ ಅಂತಾ 10 ದೋಸೆ ತಿನ್ನಬಹುದು. ಇಲ್ಲೊಂದು ಹೊಟೇಲ್‌ನಲ್ಲಿ ದೋಸೆ ತಿನ್ನೋ ಚಾಲೆಂಜ್‌ ಇಟ್ಟಿದ್ದಾರೆ. ದೋಸೆ ತಿಂದವರಿಗೆ ಭರ್ಜರಿ ಬಹುಮಾನವನ್ನು ಹೋಟೆಲ್‌ ಮಾಲೀಕರು ಘೋಷಿಸಿದ್ದಾರೆ.

ಎಷ್ಟೋ ಜನ ದೋಸೆ ತಿನ್ನಲು ಇಷ್ಟಪಡುತ್ತಾರೆ. ಕೆಲವರಿಗಂತೂ ಮೂರು ಹೊತ್ತು ದೋಸೆ ಬೇಕೇ ಬೇಕು. ಅಷ್ಟರ ಮಟ್ಟಿಗೆ ದೋಸೆ ಅಚ್ಚುಮೆಚ್ಚಾಗಿರುತ್ತದೆ. ಪಿಜಿ, ರೂಮ್‌ಗಳಲ್ಲಿ ಇರುವವರಿಗೆ ದೋಸೆ ತಿನ್ನಬೇಕಾದರೆ ಹೋಟೆಲ್‌ಗಳಿಗೆ ತೆರಳುತ್ತಾರೆ. ಬಹುತೇಕ ಹೋಟೆಲುಗಳಲ್ಲಿ ನೀವು ಹಣ ಕೊಟ್ಟು ದೋಸೆ ತಿನ್ನಬೇಕು.. ಆದರೆ ಈ ಹೋಟೆಲಿನಲ್ಲಿ ದೋಸೆ ತಿಂದರೆ ಅವರೇ ನಿಮಗೆ ದುಡ್ಡು ಕೊಡುತ್ತಾರೆ!

ಇದನ್ನೂ ಓದಿ: ದೇವರೇ.. ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು..! – ದೇವಿ ಮುಂದೆ ಭಕ್ತನ ಹೀಗೊಂದು ಬೇಡಿಕೆ

ಹೌದು, ದೆಹಲಿಯ ಹೋಟೆಲೊಂದು ಅಂತಹ ವಿಶೇಷ ದೋಸೆ ಚಾಲೆಂಜ್ ಆಯೋಜಿಸಿದೆ. ಇಲ್ಲಿ 6 ಅಡಿ ಉದ್ದದ ದೋಸೆ ತಿಂದರೆ 11,000 ರೂಪಾಯಿ ಬಹುಮಾನವಾಗಿ ಕೊಡುತ್ತಾರೆ. ಈ ಕುರಿತು Instagram ಬ್ಲಾಗರ್ @pestolicious ಸವಿ ದೋಸೆ ಚಾಲೆಂಜ್ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಹೊಸದಿಲ್ಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ದೋಸೆ ಫ್ಯಾಕ್ಟರಿ ಎಂಬ ಪ್ರಸಿದ್ಧ ದೋಸೆ ರೆಸ್ಟೋರೆಂಟ್‌ನಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ವೈರಲ್‌ ಆದ ವಿಡಿಯೋದಲ್ಲಿ 6 ಅಡಿ ಉದ್ದದ ಈ ದೋಸೆಯ ಮೇಕಿಂಗ್ ಅನ್ನು ಸಹ ತೋರಿಸಲಾಗಿದೆ. ಅಲ್ಲಿ ಏಕಕಾಲಕ್ಕೆ ಮೂರು ದೊಡ್ಡ ದೋಸೆಗಳನ್ನು ತಯಾರಿಸಲಾಯಿತು. ಚೀಸ್ ಜೊತೆಗೆ, ವಿವಿಧ ರೀತಿಯ ಮಸಾಲೆಗಳನ್ನು ಸಹ ಇದಕ್ಕೆ ಸೇರಿಸಲಾಗುತ್ತದೆ. ನಂತರ ಈ ಬೃಹತ್ ದೋಸೆಯನ್ನು ಸಾಂಬಾರ್ ಮತ್ತು ಚಟ್ನಿಯೊಂದಿಗೆ ಬಡಿಸಲಾಗುತ್ತದೆ. ಆದರೆ, ಈ ದೋಸೆಯನ್ನು ಒಬ್ಬ ವ್ಯಕ್ತಿ  ಮಾತ್ರ ಸಂಪೂರ್ಣವಾಗಿ ತಿಂದು ಖಾಲಿ ಮಾಡಬೇಕು. ಪೂರ್ತಿ ತಿಂದರೆ ಮಾತ್ರ 11,000 ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ. ಇದು ರೆಸ್ಟೋರೆಂಟ್‌ನ ನಿಯಮವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ಈ ವಿಡಿಯೋಗೆ ನೆಟಿಜನ್‌ಗಳು ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ಏಕಾಂಗಿಯಾಗಿ ತಿನ್ನಲು ತೀವ್ರ ಹಿಂಜರಿಕೆಯಾಗುತ್ತದೆ ಎಂದಿದ್ದಾರೆ. ಬೇರೊಬ್ಬರು ಇದೊಂದು ಸದವಕಾಶ ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬರು, ‘ಅಮ್ಮ ಅಡುಗೆ ಮನೆಯಲ್ಲಿ ದೋಸೆ ಒಯ್ಯುವಾಗ ನಾನು ತವಾದಿಂದ ನೇರವಾಗಿ 20-25 ದೋಸೆ ತಿನ್ನುತ್ತೇನೆ ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಈ ರೀತಿ ಫುಡ್ ಚಾಲೆಂಜ್ ಹಾಕಿ ಜನರ ಆರೋಗ್ಯ ಹಾಳು ಮಾಡಬೇಡಿ’ ಎಂದೂ ಮತ್ತೊಬ್ಬ ಗ್ರಾಹಕರು ಕಳವಳ ವ್ಯಕ್ತಪಡಿಸಿದ್ದಾರೆ.

ವೈರಲ್ ಆಗಿರುವ ಈ ವಿಡಿಯೋಗೆ ನೆಟಿಜನ್‌ಗಳು ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ಏಕಾಂಗಿಯಾಗಿ ತಿನ್ನಲು ತೀವ್ರ ಹಿಂಜರಿಕೆಯನ್ನು ವ್ಯಕ್ತಪಡಿಸಿದರು. ಇದು ಒಳ್ಳೆಯ ಅವಕಾಶ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಬಳಕೆದಾರ. ನೀವು ಹಣವನ್ನು ಇಟ್ಟುಕೊಳ್ಳಿ.. ದೋಸೆ ಅನೇಕ ಜನರ ನೆಚ್ಚಿನ ಉಪಹಾರವಾಗಿದೆ.

suddiyaana