ತಲೆ ಕೆಟ್ಟ ಸೈಮ್ ತೊಟ್ಟಿಲಾಟ – ಪಾಕ್ ಕ್ರಿಕೆಟಿಗರಿಂದಲೇ ಛೀಮಾರಿ
ಫೀಡಿಂಗ್ ಬಾಟೆಲ್ ಬೇಕಿತ್ತಾ ಮಗನೇ!

ಕ್ರಿಕೆಟ್ ಜಗತ್ತನ್ನೇ ಆಳಿದ ಲೆಜೆಂಡರಿ ಸ್ಟಾರ್ಗಳೆಲ್ಲಾ ವೈಭವ್ ಸೂರ್ಯವಂಶಿಯನ್ನ ಜನರೇಷನಲ್ ಟ್ಯಾಲೆಂಟ್ ಅಂತಾ ಬಾಯ್ತುಂಬಾ ಹಾಡಿ ಹೊಗಳ್ತಿದ್ದಾರೆ. ಜಸ್ಟ್ 15 ವರ್ಷಕ್ಕೇ ಇಂಥಾ ಸಾಧನೆ ಮಾಡೋದು ಪವಾಡವೇ. ಆದ್ರೆ ಇಂಥಾ ವಂಡರ್ ಬಾಯ್ ಬಗ್ಗೆ ಮೊನ್ನೆ ಏಷ್ಯನ್ ಗೇಮ್ಸ್ ಫೈನಲ್ನಲ್ಲಿ ಪಾಕಿಸ್ತಾನದ ಆಲ್ರೌಂಡರ್ ಸೈಮ್ ಅಯೂಬ್ ಅಣಕ ಮಾಡಿದ್ದ. ಸೂರ್ಯವಂಶಿ ವಿಕೆಟ್ ತೆಗ್ದು ತೊಟ್ಟಿಲು ತೂಗೋ ಥರ ಸೆಲೆಬ್ರೇಟ್ ಮಾಡಿದ್ದ. ಅದೇ ಸೈಮ್ ಸೊಕ್ಕಿಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೇ ಛೀಮಾರಿ ಹಾಕಿದ್ದಾರೆ. ಸೋಶಿಯಲ್ ಮೀಡಿಯಾ ತುಂಬೆಲ್ಲಾ ಟ್ರೋಲ್ ಮಾಡ್ತಿದ್ದಾರೆ. ತೊಟ್ಟಿಲು ತೂಗಿದ್ದವನೇ ಈಗ ಫೀಡಿಂಗ್ ಬಾಟೆಲ್ನಲ್ಲಿ ಹಾಲು ಕುಡಿಯುವಂತಾಗಿದೆ.
ಇದನ್ನೂ ಓದಿ : IND Vs WI ಹೊಡಿಬಡಿ ಧಮಾಕ – X -Factor ಪ್ಲೇಯರ್ಸ್ ಯಾರೆಲ್ಲಾ?
ಐಸಿಸಿ ವಿಶ್ವಕಪ್ಗಳಾಯ್ತು.. ಏಷ್ಯಾಕಪ್ ಆಯ್ತು.. ಈಗ ಏಷ್ಯನ್ ಗೇಮ್ಸ್.. ಹೀಗೆ ಎಲ್ಲೇ ಹೋದ್ರೂ ಭಾರತವೇ ಬಾಸ್.. ಪಾಕಿಸ್ತಾನ ಪಂಕ್ಚರ್. ಪ್ರತೀ ಬಾರಿಯೂ ಭಾರತ ಗೆದ್ದು ಮೇಲೆ ಮೇಲೆ ಹೋಗ್ತಿದ್ರೆ ಪಾಕಿಸ್ತಾನ ಸೋತು ಸೋತು ಮಣ್ಣು ಮುಕ್ತಾಯಿದೆ. ಸೋಲೋದನ್ನೇ ಹ್ಯಾಬಿಟ್ ಮಾಡ್ಕೊಂಡಿರೋ ಪಾಕ್ ಪ್ಲೇಯರ್ಗಳ ಕುಚೇಷ್ಟೆ ಮಾತ್ರ ಕಮ್ಮಿಯಾಗಿಲ್ಲ. ಮೊನ್ನೆ ವೈಭವ್ ಸೂರ್ಯವಂಶಿಯನ್ನ ಕೆಣಕಿದ ಸೈಮ್ ಅಯೂಬ್ಗೆ ಸೋಶಿಯಲ್ ಮೀಡಿಯಾದಲ್ಲೇ ಚಳಿ ಬಿಡಿಸ್ತಿದ್ದಾರೆ. ಌಂಡ್ ಪಾಕಿಸ್ತಾನ ತಂಡದ ಮರ್ಯಾದೆ ಮತ್ತಷ್ಟು ಹರಾಜಾಗಿದೆ.
ಪ್ರಸ್ತುತ ಪಾಕಿಸ್ತಾನ ಕ್ರಿಕೆಟ್ನ ಬಿಲ್ಡಪ್ ಹೆಂಗಿದೆ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಈ ವಿಡಿಯೋ ನೋಡಿ. ವರ್ಷಗಳು ಕಳೀತಿವೆ ಟೂರ್ನಮೆಂಟ್ಸ್ ಚೇಂಜ್ ಆಗ್ತಿವೆ ಆದ್ರೆ ಕಪಾಳಮೋಕ್ಷ ಮಾತ್ರ ನಿಂತಿಲ್ಲ. ಪ್ರತೀ ಸಲ ಭಾರತದ ಮುಂದೆ ಬಂದು ಸೋಲುವ ಪಾಕಿಸ್ತಾನ ಮತ್ತೆ ಏನೂ ಆಗೇ ಇಲ್ಲ ಅನ್ನೋ ಥರ ರೆಡಿ ಆಗ್ತಿದ್ದಾರೆ.
ಇನ್ನು ಪಂದ್ಯದ ವೇಳೆ ವೈಭವ್ ಸೂರ್ಯವಂಶಿ ವಿಕೆಟ್ ತೆಗೆದಿದ್ದ ಸೈಮ್ ಅಯೂಬ್ ರೀತಿಯಲ್ಲೇ ಭಾರತದ ಬೌಲರ್ ರವಿ ಬಿಷ್ಣೋಯ್ ಕೂಡ ಬೇಬಿ ಕ್ರಾಡಲ್ ಸೆಲೆಬ್ರೇಷನ್ ಮಾಡಿದ್ದಾರೆ. ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಪಾಕ್ ಪ್ಲೇಯರ್ಗಳನ್ನ ತೊಟ್ಟಿಲು ತೂಗುತ್ತೀವಿ ಅನ್ನೋ ಥರ ಟಾಂಟ್ ಕೊಟ್ಟಿದ್ದಾರೆ. ಏಷ್ಯನ್ ಗೇಮ್ಸ್ ಫೈನಲ್ನಲ್ಲಿ ಭಾರತ ಗೆದ್ದ ಮೇಲೆ ಫ್ಯಾನ್ಸ್ ಕೂಡ ಸೈಮ್ಗೆ ಟಾಂಟ್ ಕೊಟ್ಟಿದ್ದಾರೆ. ತೊಟ್ಟಿಲು ತೂಗೋ ರೀತಿಯಲ್ಲಿ ಆಕ್ಷನ್ ಮಾಡ್ತಾ ನಾವು ಗೋಲ್ಡ್ ಗೆದ್ದಾಯ್ತು.. ನೀವು ಚೈಲ್ಡ್ ಚಪಾತಿಗಳು ಎನ್ನುವಂತೆ ಟಾಂಟ್ ಕೊಟ್ಟಿದ್ದಾರೆ.
ಇನ್ನು ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಹಾಗೂ ತಿಲಕ್ ವರ್ಮಾ ಬ್ಯಾಟಿಂಗ್ನಲ್ಲಿ ಪಾಕ್ ಬೌಲರ್ಗಳನ್ನ ಚೆಂಡಾಡಿದ್ರು. ಇದೇ ಕಾರಣಕ್ಕೆ ಅಭಿಷೇಕ್ ಮತ್ತು ತಿಲಕ್ ಇಬ್ರೂ ಸೈಮ್ ನ ಎತ್ತಿಕೊಂಡಿರೋ ಥರ ಫೋಟೋ ಎಡಿಟ್ ಮಾಡಿ ಸೈಮ್ ಬಾಯಿಗೆ ಫೀಡಿಂಗ್ ಬಾಟೆಲ್ ಇಟ್ಟಿದ್ದಾರೆ. ಸೂರ್ಯವಂಶಿ ಬೇಬಿ ಅಲ್ಲ ನೀನು ಅನ್ನೋ ಥರ ಕೌಂಟರ್ ಕೊಟ್ಟಿದ್ದಾರೆ. ಇದೆಲ್ಲದ್ರ ನಡುವೆ ಫೈನಲ್ ಪಂದ್ಯದ ಬಳಿಕ ಗೋಲ್ಡ್ ಗೆದ್ದ ಭಾರತದ ಆಟಗಾರರು ಮತ್ತು ಕಂಚಿನ ಪದಕ ಗೆದ್ದ ಶ್ರೀಲಂಕಾ ತಂಡದ ಆಟಗಾರರು ಜೆರ್ಸಿಗಳ ಮೇಲೆ ಜಾಕೆಟ್ ಹಾಕಿಕೊಂಡು ಪದಕ ಸ್ವೀಕಾರ ಮಾಡಿದ್ದಾರೆ. ಆದ್ರೆ ಪಾಕ್ ಪ್ಲೇಯರ್ಸ್ ಸೇಮ್ ಜೆರ್ಸಿಯಲ್ಲೇ ಇದ್ದಿದ್ದು ಕೂಡ ಟ್ರೋಲ್ ಆಗಿದೆ. ಜಾಕೆಟ್ ತಗೊಳ್ಳೋಕೂ ಬಿಕಾರಿಸ್ತಾನದ ಬಳಿಕ ಕಾಸಿಲ್ಲ ಅನ್ನೋ ರೀತಿ ಟ್ರೋಲ್ ಮಾಡಿದ್ದಾರೆ.
ಹೀಗೆ ರೀಲ್ಸ್ ಅಷ್ಟೇ ಅಲ್ಲದೇ ಥರಹೇವಾರಿ ಫೋಟೋಗಳನ್ನೂ ಎಡಿಟ್ ಮಾಡಿ ಪಾಕ್ ಪ್ಲೇಯರ್ಗಳ ಬೆವರಿಳಿಸಿದ್ದಾರೆ. ಸೈಮ್ ಅಯೂಬ್ ಫೀಡಿಂಗ್ ಬಾಟೆಲ್ ಬಾಯಿಗಿಟ್ಟುಕೊಂಡಿದ್ರೆ ಪಾಕ್ ಪ್ಲೇಯರ್ಗಳನ್ನೆಲ್ಲಾ ಭಾರತದ ಪ್ಲೇಯರ್ಸ್ ಮಕ್ಕಳಂತೆ ಎತ್ತಿಕೊಂಡಿರೋ ರೀತಿ ಎಡಿಟ್ ಮಾಡಿ ಟ್ರೋಲ್ ಮಾಡ್ತಿದ್ದಾರೆ.
ಹೀಗೆ ಕ್ರಿಕೆಟ್ ಜಗತ್ತಿನ ಮುಂದೆ ಮತ್ತೊಮ್ಮೆ ಮಾನ ಕಳ್ಕೊಂಡಿರೋ ಪಾಕಿಸ್ತಾನದ ಆಟಗಾರರಿಗೆ ಅಲ್ಲಿನ ಮಾಜಿ ಕ್ರಿಕೆಟಿಗರೇ ಬೆಂಡೆತ್ತುತ್ತಿದ್ದಾರೆ. ಅದ್ರಲ್ಲೂ ಸೈಮ್ ಅಯೂಬ್ ಹುಚ್ಚಾಟಕ್ಕೆ ಛೀಮಾರಿ ಹಾಕಿದ್ದಾರೆ. ಯೂಟ್ಯೂಬ್ ಶೋವೊಂದರಲ್ಲಿ ಮಾತನಾಡಿರುವ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಕಮ್ರಾನ್ ಅಕ್ಮಲ್, ನಮ್ಮ ಆಟಗಾರರು ಕೇವಲ ಸೋಶಿಯಲ್ ಮೀಡಿಯಾ ಪ್ರಚಾರಕ್ಕಾಗಿ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಸೈಮ್ ಅಯೂಬ್ ಏನೂ ಸಣ್ಣ ಮಗುವಲ್ಲ, ಮೊದಲು ಆತ ತನ್ನ ಪ್ರದರ್ಶನದ ಕಡೆ ಗಮನ ಹರಿಸಬೇಕು ಎಂದಿದ್ದಾರೆ. ಅಹಮದ್ ಶೆಹಜಾದ್ ಕೂಡ ಸೈಮ್ ಅಯೂಬ್ ವರ್ತನೆಗೆ ವಾರ್ನಿಂಗ್ ಕೊಟ್ಟಿದ್ದಾರೆ. ಮೈದಾನದಲ್ಲಿ ಬೇಕಾಬಿಟ್ಟಿ ಕಿರಿಕ್ ಹಾಗೂ ಅಣಕ ಮಾಡೋದು ಸರಿಯಲ್ಲ ಎಂದಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತನ್ವೀರ್ ಅಹ್ಮದ್ ಕೂಡ ಸೈಮ್ಗೆ ಚಳಿ ಬಿಡಿಸಿದ್ದಾರೆ. ಮೊದಲು ನಿಮ್ಮ ಪ್ರದರ್ಶನವನ್ನು ಸುಧಾರಿಸಿಕೊಳ್ಳಿ, ನಂತರ ಎದುರಾಳಿಗಳನ್ನು ಅಣಕಿಸಿ. ನೀವಿನ್ನೂ ಜಾಗತಿಕ ಕ್ರಿಕೆಟ್ನಲ್ಲಿ ಸೂಪರ್ ಸ್ಟಾರ್ ಆಗಿಲ್ಲ. ನಿಮ್ಮ ಆಟದಲ್ಲಿ ಸ್ಥಿರತೆಯೇ ಇಲ್ಲದಿರುವಾಗ, ನಿಮ್ಮ ಅರ್ಧ ವಯಸ್ಸಿನ ಯುವ ಬ್ಯಾಟರ್ ವಿರುದ್ಧ ಇಂತಹ ಉದ್ಧಟತನ ಒಳ್ಳೇದಲ್ಲ ಎಂದಿದ್ದಾರೆ.
ಒಟ್ನಲ್ಲಿ ಮೊದ್ಲೆಲ್ಲಾ ಭಾರತ-ಪಾಕ್ ಪಂದ್ಯಗಳು ಅಂದ್ರೆ ಗ್ರೇಟೆಸ್ಟ್ ರೈವಲ್ರಿ ಅಂತಿದ್ರು. ಯಾಕಂದ್ರೆ ಆನ್ಫೀಲ್ಡ್ನಲ್ಲಿ ನೆಕ್ ಟು ನೆಕ್ ಫೈಟ್ ಇರ್ತಿತ್ತು. ಌಂಡ್ ಫ್ಯಾನ್ಸ್ ನಡುವೆಯೂ ಅಂಥದ್ದೇ ಕ್ರೇಜ್ ಇರ್ತಿತ್ತು. ಸ್ಟಿಲ್ ಈಗ್ಲೂ ಕೂಡ ಅಭಿಮಾನಿಗಳು ಕಾದು ಕುಳಿತು ಇಂಡೋ-ಪಾಕ್ ಮ್ಯಾಚಸ್ ನೋಡ್ತಾರೆ. ಈವನ್ ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಪಂದ್ಯ ಕೂಡ ಭಾರತ-ಪಾಕ್ ಮೆನ್ಸ್ ಕ್ರಿಕೆಟ್ ಫೈನಲ್ ಪಂದ್ಯವೇ. ಭಾರತ ಮತ್ತು ಪಾಕಿಸ್ತಾನ ನಡುವಿನ ಪುರುಷರ ಕ್ರಿಕೆಟ್ ಫೈನಲ್ ಮತ್ತು ಹಾಕಿ ಸೆಮಿಫೈನಲ್ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಪಂದ್ಯಗಳಾಗಿವೆ. ಆದ್ರೆ ಪರ್ಫಾಮೆನ್ಸ್ ಅಂತಾ ಬಂದಾಗ ಇತ್ತೀಚಿನ ವರ್ಷಗಳಲ್ಲಿ ಒನ್ ಸೈಡೆಡ್ ಆಗ್ತಿದೆ. ಭಾರತ ಕಂಪ್ಲೀಟ್ ಡಾಮಿನೇಟ್ ಮಾಡಿದೆ. ಆದ್ರೆ ಪಾಕ್ ಆಟಗಾರರು ಮೈದಾನದಲ್ಲಿ ಆಟದಲ್ಲಿ ತಮ್ಮ ತಾಕತ್ತು ತೋರಿಸೋಕೆ ಆಗ್ದೇ ಈ ರೀತಿ ಹುಚ್ಚಾಟಗಳನ್ನ ಆಡಿ ಪಬ್ಲಿಸಿಟಿ ಗಿಮಿಕ್ ಮಾಡ್ತಿದ್ದಾರೆ. ಬಟ್ ಅದು ಅವ್ರಿಗೇ ಬ್ಯಾಕ್ಫೈರ್ ಆಗಿ ತಮ್ಮದೇ ಕ್ರಿಕೆಟರ್ಗಳಿಂದ ಛೀಮಾರಿ ಹಾಕಿಸಿಕೊಳ್ತಿದ್ದಾರೆ.

ನೋಡಿರಿ

