ಮೊಬೈಲ್ ನಲ್ಲಿ ಸೆರೆಯಾಯ್ತು ಹಾರುವ ವಿಚಿತ್ರ ಹಾವು – ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್!

ಮೊಬೈಲ್ ನಲ್ಲಿ ಸೆರೆಯಾಯ್ತು ಹಾರುವ ವಿಚಿತ್ರ ಹಾವು – ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್!

ಹಾವುಗಳು ಅಂದ್ರೆ ಸಾಕು ಮೈ ಜುಂ ಅನ್ನುತ್ತೆ. ಕೆಲವರು ಪ್ಲ್ಯಾಸ್ಟಿಕ್ ಹಾವನ್ನ ಕಂಡ್ರೂ ಭಯ ಪಡ್ತಾರೆ. ಆದ್ರೆ ಇದೇ ಉರಗಗಳ ಬಗ್ಗೆ ಯಾರಿಗೂ ತಿಳಿಯದೇ ಇರುವ ಅನೇಕ ವಿಚಾರಗಳಿವೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹಾವುಗಳು ಹಾಲನ್ನ ಕುಡಿಯುತ್ತವೆ ಎಂದು ತೋರಿಸಲಾಗುತ್ತದೆ. ವಾಸ್ತವವಾಗಿ ಹಾವುಗಳು ಎಂದಿಗೂ ಕೂಡ ಹಾಲನ್ನು ಕುಡಿಯುವುದಿಲ್ಲ.

ಇದನ್ನೂ ಓದಿ : ಡೆಲಿವರಿ ರೋಬೋಟ್​ಗಳಿಗೂ ದಾರಿ ಬಿಡಿ – ಸ್ಪೆಷಲ್ ಗೆಸ್ಟ್ ಗಳಿಗಾಗಿ ಹೊಸ ಟ್ರಾಫಿಕ್ಸ್ ರೂಲ್ಸ್ ರೆಡಿ..!

ಪ್ರಪಂಚದಲ್ಲಿರುವ ಸುಮಾರು ಎರಡೂವರೆ ಸಾವಿರ ಪ್ರಭೇದದ ಹಾವುಗಳಲ್ಲಿ ಯಾವ ಹಾವುಗಳು ಕೂಡ ಹಾಲನ್ನು ಸೇವಿಸುವುದಿಲ್ಲ. ಹಾಗೆಯೇ ಭೂಮಿ ಮೇಲೆ ಜೀವಿಸುತ್ತಿರುವ ಪ್ರತಿ ಹಾವುಗಳು ಕೂಡ ವಿಷಕಾರಿ ಆಗಿರುವುದಿಲ್ಲ. ನಿಮಗೆ ಆಶ್ಚರ್ಯವೆನಿಸಬಹುದು ಈ ಎರಡೂವರೆ ಸಾವಿರ ಪ್ರಭೇದದ ಹಾವುಗಳಲ್ಲಿ ಕೇವಲ ನಾಲ್ಕು ಜಾತಿ ಹಾವುಗಳು ಮಾತ್ರ ವಿಷಕಾರಿಯಾಗಿರುತ್ತವೆ.

ರಸೆಲ್ ವೈಪರ್, ಕಿಂಗ್ ಕೋಬ್ರಾ ಮತ್ತು ನಾಗರಹಾವುಗಳು ಮಾತ್ರ ಅತ್ಯಂತ ವಿಷಕಾರಿ ಹಾವುಗಳಾಗಿವೆ.  ಕಿಂಗ್ ಕೋಬ್ರಾ ಹಾಗೂ ಕೇರೆ ಹಾವುಗಳು ಬದ್ಧ ವೈರಿಗಳಾಗಿವೆ. ಈ ಹಾವುಗಳು ನೀರಿನಲ್ಲಿ, ಪೊಟರೆಯಲ್ಲಿ, ಭೂಮಿಯೊಳಗೆ ಹಾಗೂ ಎಲ್ಲ ಕಡೆಯೂ ಕೂಡ ಕಾಣಸಿಗುತ್ತವೆ ಮತ್ತು ಹಾವುಗಳು ಹಿಮಪಾತವಾಗುವ ಪ್ರದೇಶಗಳಲ್ಲಿ ಕೂಡ ಕಾಣುವುದು ವಿಶೇಷ.

ಸಾಮಾನ್ಯವಾಗಿ ಹಾವುಗಳು ಅಂದ್ರೆ ತೆವಳುತ್ತಾ ಹೋಗುತ್ತವೆ ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿರೋ ಈ ಹಾವು ಎಲ್ಲರ ಗಮನ ಸೆಳೆಯುತ್ತಿದೆ. ರಸ್ತೆಯಲ್ಲಿದ್ದ ಈ ಹಾವು ವ್ಯಕ್ತಿಯೊಬ್ಬ ಹತ್ತಿರ ಹೋದಾಗ ಚಂಗನೆ ಹಾರಿ ಗುಡ್ಡದ ಕಡೆ ಹೋಗಿದೆ. ಈ ವಿಡಿಯೋ ಕಳೆದ ವರ್ಷವೇ ಅಪ್​ಲೋಡ್ ಆಗಿದ್ದರೂ ಕೂಡ ಈಗ ಸಖತ್ ವೈರಲ್ ಆಗಿದೆ.

suddiyaana