1 ಪ್ಲೇಟ್ ಇಡ್ಲಿ ಬೆಲೆ ಜಸ್ಟ್ 315 ರೂ.! – ರಾಮೇಶ್ವರಂ ಕೆಫೆಯ ಇಡ್ಲಿ ಇಷ್ಟೊಂದು ಕಾಸ್ಟ್ಲಿ?

ಇದು ದುಬಾರಿ ದುನಿಯಾ. ತಿನ್ನೋ ಆಹಾರದಿಂದ ಹಿಡಿದು ಎಲ್ಲವೂ ಕಾಸ್ಟ್ಲಿಯಾಗಿದೆ. ಇದೀಗ ಇಲ್ಲೊಂದು ಕಡೆ ಇಡ್ಲಿಯ ದರ ಭಾರಿ ಚರ್ಚೆಗೆ ಗ್ರಾಸವಾಗಿದೆ. ಒಂದು ಪ್ಲೇಟ್ ಇಡ್ಲಿ ದರ ಕೇಳಿ ಗ್ರಾಹಕರೊಬ್ಬರು ಶಾಕ್ ಆಗಿದ್ದಾರೆ.
ಇದನ್ನೂ ಓದಿ: ತಂದೆ ICUನಲ್ಲಿದ್ರೂ ಭಾರತ ತಂಡ ಸೇರಿದ ರಿಂಕು ಸಿಂಗ್! – ನೋವಲ್ಲಿದ್ರೂ ತಂಡಕ್ಕೆ ಬೂಸ್ಟ್ ನೀಡಿದ ಫಿನಿಷರ್!
ಸಾಮಾನ್ಯವಾಗಿ ಒಂದು ಪ್ಲೇಟ್ ಇಡ್ಲಿ ಬೆಲೆ ಮೂವತ್ತರಿಂದ ಐವತ್ತು ರೂಪಾಯಿವರೆಗೆ ಇರ್ಬೋದು. ಇನ್ನು ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಹೆಚ್ಚಂದ್ರೆ ಒಂದು ಪ್ಲೇಟ್ ಇಡ್ಲಿ ಬೆಲೆ ನೂರು ರೂಪಾಯಿ ಇರ್ಬೋದು. ಆದ್ರೀಗ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಇಡ್ಲಿ ಮಾತ್ರ ಇಡೀ ದೇಶದ ಗಮನ ಸೆಳೆದಿದೆ. ಅದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಹೌದು ದುಬಾರಿ ಹಾಗೂ ರುಚಿಗೆ ಫೇಮಸ್ ಆಗಿರುವ ರಾಮೇಶ್ವರಂ ಕೆಫೆಐ ಇಡ್ಲಿ ಬೆಲೆ ಚರ್ಚೆಗೆ ಗ್ರಾಸವಾಗಿದೆ. 1 ಪ್ಲೇಟ್ ಇಡ್ಲಿಗೆ 300 ದರ ವಿಧಿಸಲಾಗಿದೆ. ಇದಿಷ್ಟೇ ಅಲ್ಲದೇ 15 ರೂಪಾಯಿಗಳ ಟ್ಯಾಕ್ಸ್ ಸೇರಿಸಿ 315 ರೂಪಾಯಿ ಮಾಡಿದ್ದಾರೆ! ಇದಕ್ಕೆ ತುಪ್ಪದ ಇಡ್ಲಿ ಎಂದು ಹೆಸರು ಕೊಡಲಾಗಿದೆ. ಇದ್ರ ಬಿಲ್ ಈಗ ವೈರಲ್ ಆಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಬ್ಬ ಪ್ರಯಾಣಿಕ ರಾಮೇಶ್ವರಂ ಕೆಫೆಯ ಟರ್ಮಿನಲ್ 1 ಔಟ್ಲೆಟ್ ನಲ್ಲಿ ಒಂದು ಪ್ಲೇಟ್ ತುಪ್ಪದ ಪೋಡಿ ಇಡ್ಲಿಗೆ 315 ರೂಪಾಯಿ ಪಾವತಿಸಿ ಆಘಾತಕ್ಕೊಳಗಾದರು ಎಂದು ಇದಕ್ಕೆ ಕ್ಯಾಪ್ಷನ್ ನೀಡಿದ್ದು, viralbhayani ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದೆ. ಗ್ರಾಹಕರು ಫೆಬ್ರವರಿ 23-24, 2026 ರ ಸುಮಾರಿಗೆ ರೆಡ್ಡಿಟ್ ನಲ್ಲಿ ಈ ರಶೀದಿಯನ್ನು ಹಂಚಿಕೊಂಡಿದ್ದಾರೆ. ಇವರದ್ದೇ ಹೋಟೆಲ್ನಲ್ಲಿ ಬೇರೆ ಕಡೆ ಇದೇ ಇಡ್ಲಿಗೆ 90 ರೂಪಾಯಿಗಳಿಗಿಂತಲೂ ಕಡಿಮೆ ಇದೆ. ಆದರೆ ಇಲ್ಲಿ ಇಷ್ಟು ದುಬಾರಿ. ಇದರ ಬಗ್ಗೆ ಗಮನ ಹರಿಸುವವರು ಯಾರೂ ಇಲ್ಲವೆ ಎಂದು ಪ್ರಶ್ನಿಸಲಾಗಿದೆ.
ಇದಕ್ಕೆ ಪರ-ವಿರೋಧದ ನಿಲುವು ವ್ಯಕ್ತವಾಗಿದೆ. ಹಲವರು ತಮಗೆ ಇದೇ ರೀತಿ ಮೋಸ ಆಗಿರುವುದಾಗಿ ಬರೆದುಕೊಂಡಿದ್ದಾರೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮೂರ್ನಾಲ್ಕು ಗಂಟೆ ಮೊದಲೇ ಹೋದಾಗ ಹಸಿವೆ ಆಗುವುದು ಸಹಜ. ಆದರೆ ಇಲ್ಲಿಯ ಔಟ್ಲೆಟ್ಗಳಲ್ಲಿ ಆಹಾರ ತೆಗೆದುಕೊಳ್ಳಲು ಹೋದರೆ ಶಾಕ್ ಆಗುವುದು ಖಂಡಿತ ಎಂದಿದ್ದರೆ, ಮತ್ತೆ ಕೆಲವರು ಇಲ್ಲಿಯ ಮಳಿಗೆಗಳ ಬಾಡಿಗೆ ಕೂಡ ಅಷ್ಟೇ ದುಬಾರಿಯಾಗಿರುತ್ತದೆ. ಆದ್ದರಿಂದ ಇಷ್ಟು ರೇಟ್ ಮಾಡುವುದು ಅನಿವಾರ್ಯ ಎಂದಿದ್ದಾರೆ. ಮತ್ತೆ ಕೆಲವರು ವಿಮಾನಗಳಲ್ಲಿ ಹಾರಾಡಲು ಶಕ್ಯ ಇರುವ ಯಾರಿಗೂ ಇದೇನು ದೊಡ್ಡ ದುಬಾರಿ ರೇಟ್ ಆಗಿರೋದಿಲ್ಲ ಬಿಡಿ ಎನ್ನುತ್ತಿದ್ದಾರೆ. ಅದೇನೇ ಇದ್ದರೂ ಸದ್ಯ ದೇಶಾದ್ಯಂತ ಇದು ಚರ್ಚೆಯಾಗುತ್ತಿದೆ.

ನೋಡಿರಿ

