ಹೂವುಗಳಿಂದ ಅರಳಲಿದೆ ದಸರಾ ಜಂಬೂ ಸವಾರಿ – ಮೈಸೂರಲ್ಲಿ ನಾಡಹಬ್ಬಕ್ಕೆ ಕಳೆ ನೀಡಲಿದೆ ಫ್ಲವರ್ ಶೋ

ನಾಡಹಬ್ಬ ನೋಡುಬಾರಾ ಎಂದು ಅರಮನೆ ನಗರಿ ಮೈಸೂರು ತನ್ನತ್ತ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ದಸರಾ ಸಂಭ್ರಮಕ್ಕೆ ಮೈಸೂರು ಸಿದ್ಧವಾಗಿದೆ. ದಸರಾ ವೈಭವಕ್ಕೆ ಈ ಬಾರಿ ಫ್ಲವರ್ ಶೋ ಮತ್ತಷ್ಟು ಸೊಬಗು ಕಟ್ಟಿಕೊಡಲಿದೆ. ಅದರಲ್ಲೂ ಈ ಬಾರಿ ಫ್ಲವರ್ ಶೋ ಒಡೆಯರ್ ಆಡಳಿತದ ವೈಖರಿಯನ್ನ ತೋರಿಸಲಿದೆ.
ಇದನ್ನೂ ಓದಿ: 8 ದಿನಗಳ ಕಾಲ ದಸರಾ ಯುವ ಸಂಭ್ರಮ – ದೊಡ್ಮನೆ ಯುವರಾಜನಿಂದ ಉದ್ಘಾಟನೆ
ಮೈಸೂರು ಕುಪ್ಪಣ್ಣ ಪಾರ್ಕ್‍ನಲ್ಲಿ ಪ್ರತಿ ವರ್ಷ ದಸರಾ ಮಹೋತ್ಸವದ ಅಂಗವಾಗಿ ಫಲ ಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಮೈಸೂರು ಅರಮನೆ ಆಡಳಿತ ಮಂಡಳಿ ವತಿಯಿಂದ, ವಿವಿಧ ಕಲಾತ್ಮಕ ಆಕೃತಿಗಳು ಹೂವುಗಳಿಂದ ಮೂಡಿಬರಲಿದೆ. ಈ ಬಾರಿ ವಿಶೇಷ ಆಕರ್ಷಣೆಯಾಗಿ ಅಂಬಾರಿ ಆನೆ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ವೈಖರಿಯನ್ನು ಹೂವಿನ ಕಲಾಕೃತಿಗಳ ಮೂಲಕ ಅರಳಿಸಲಾಗುತ್ತಿದೆ.
ದಸರಾ ಫಲಪುಷ್ಪ ಪ್ರದರ್ಶನ ಪ್ರವಾಸಿಗರನ್ನು ಆಕರ್ಷಿಸಲಿದೆ. ಹೂವಿನ ಅಲಂಕಾರದಲ್ಲಿ ಅಂಬಾರಿ ಆನೆಗೆ ನೀಡಲಾದ ವೈಶಿಷ್ಟ್ಯತೆ, ಮೈಸೂರು ದಸರಾ ಜಂಬೂಸವಾರಿ ಸಂಭ್ರಮವನ್ನು ನೆನಪಿಸಲಿದೆ. ಜೊತೆಗೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಗತಿಪರ ಆಡಳಿತ ಶೈಲಿಯನ್ನು ಪ್ರತಿಬಿಂಬಿಸುವ ಕಲಾತ್ಮಕ ವಿನ್ಯಾಸಗಳು ಜನರನ್ನು ಸೆಳೆಯಲಿವೆ. ತೋಟಗಾರಿಕೆ ಇಲಾಖೆ ವತಿಯಿಂದ ಬೆಳೆಯುತ್ತಿರುವ ವಿವಿಧ ಬಗೆಯ ಗುಲಾಬಿ ಹೂವುಗಳು, ಚೆಂಡು ಹೂವು, ಸೇವಂತಿಗೆ, ತಾವರೆ ಹೂವು, ಅಸ್ಟರ್, ಜಾಸ್ಮಿನ್, ಹೀಗೆ ವಿವಿಧ ರೀತಿಯ ಹೂವುಗಳು ಬೆಳಸಲಾಗಿದೆ. ಪ್ರತಿ ವರ್ಷ ವಿಭಿನ್ನ ವಿಷಯಗಳನ್ನು ಆಧಾರ ಮಾಡಿಕೊಂಡು ಹೂವಿನ ಕಲಾಕೃತಿಗಳನ್ನು ರೂಪಿಸುವ ಈ ಪ್ರದರ್ಶನವು, ಮೈಸೂರಿನ ದಸರಾ ಸಂಭ್ರಮಕ್ಕೆ ಮತ್ತಷ್ಟು ಕಳೆ ಹೆಚ್ಚಿಸುವ ನಿರೀಕ್ಷೆ ಇದೆ.

ನೋಡಿರಿ

