ಸಸ್ಯಕಾಶಿಯಲ್ಲಿ ಹೂಗಳ ಹಬ್ಬಕ್ಕೆ ಕೌಂಟ್‌ಡೌನ್ – ಆಗಸ್ಟ್ 4 ರಿಂದ ಫ್ಲವರ್ ಶೋ

ಸಸ್ಯಕಾಶಿಯಲ್ಲಿ ಹೂಗಳ ಹಬ್ಬಕ್ಕೆ ಕೌಂಟ್‌ಡೌನ್ – ಆಗಸ್ಟ್ 4 ರಿಂದ ಫ್ಲವರ್ ಶೋ

ಸಿಲಿಕಾನ್ ಸಿಟಿಯ ಸಸ್ಯಕಾಶಿಯಲ್ಲಿ ಹೂಗಳ ಹಬ್ಬಕ್ಕೆ ಡೇಟ್ ಫಿಕ್ಸ್ ಆಗಿದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆಯಲಿರುವ ಫ್ಲವರ್ ಶೋ ಆಗಸ್ಟ್ 4 ರಿಂದ ಆರಂಭವಾಗಲಿದೆ. ಈ ಬಾರಿ ಫ್ಲವರ್ ಶೋನಲ್ಲಿ ಶಾಲಾ ಮಕ್ಕಳಿಗೆ ಕೆಲವು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಬೈಕ್, ಆಟೋ ಸೇರಿ ಕೆಲ ವಾಹನ ಸಂಚಾರಕ್ಕೆ‌ ಆ.1ರಿಂದ ನಿರ್ಬಂಧ

ಸ್ವಾತಂತ್ರೋತ್ಸವದ ಅಂಗವಾಗಿ ಈ ಬಾರಿ 214 ನೇ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಇದರಲ್ಲಿ ವಿಧಾನ ಸೌಧ ಹಾಗೂ ಕೆಂಗಲ್ ಹನುಮಂತಯ್ಯ  ಅವರ ಕಾನ್ಸೆಪ್ಟ್ ಇರಲಿದೆ ಎಂದು ಲಾಲ್ ಬಾಗ್ ನಿರ್ದೇಶಕರಾದ ರಮೇಶ್ ತಿಳಿಸಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯು ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. 10 ರಿಂದ 12 ಲಕ್ಷದಷ್ಟು ಜನರು ಬರುವ ಸಾಧ್ಯತೆ ಇದೆ. ಫಲಪುಷ್ಪ ಪ್ರದರ್ಶನದಲ್ಲಿ ಹಲವು ಕಲೆಗಳ ಸಾರುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಒಟ್ಟು 10 ದಿನಗಳ ಕಾಲ ಫ್ಲವರ್ ಶೋ ಇರಲಿದೆ. ಶಾಲಾ ಮಕ್ಕಳಿಗೆ ಪ್ರವೇಶ ಉಚಿತ. ಈ ಬಾರಿ ಫ್ಲವರ್ ಶೋನಲ್ಲಿ ಶಾಲಾ ಮಕ್ಕಳಿಗೆ ಕೆಲವು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತೆ. ಸಾರ್ವಜನಿಕರಿಗೆ ಟ್ರಾಫಿಕ್ ಸಮಸ್ಯೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತೆ. ಈ ಬಾರಿ ಟಿಕೆಟ್ ದರ ವೀಕ್ ಡೇಸ್‌ನಲ್ಲಿ ಹಿರಿಯರಿಗೆ 70 ರುಪಾಯಿ ಹಾಗೂ ಮಕ್ಕಳಿಗೆ 30 ರುಪಾಯಿ ನಿಗದಿ ಮಾಡಲಾಗಿದೆ. 200 ಸಿಸಿ ಟಿವಿ ಕ್ಯಾಮರಾಗಳನ್ನ ಅಳವಡಿಕೆ ಮಾಡಲಾಗಿದೆ. ಫ್ಲವರ್ ಶೋ ಗೆ ಕೊಲ್ಕತ್ತ, ಕೇರಳ, ತಮಿಳುನಾಡು, ಆಂಧ್ರ ಇತರ ರಾಜ್ಯಗಳಿಂದ ಹೂಗಳು ಬರುತ್ತಿದ್ದು ಒಟ್ಟು 15 ರಿಂದ 17 ಲಕ್ಷ ಹೂಗಳನ್ನ ಬಳಸಿಕೊಳ್ಳಲಾಗುತ್ತಿದೆ.

suddiyaana