ಮಹಾಮಳೆಗೆ ತತ್ತರಿಸಿದ ಕರಾವಳಿ ಜಿಲ್ಲೆ: ಉಡುಪಿಯಲ್ಲಿ ಅಪಾಯದಲ್ಲಿದ್ದ ಕುಟುಂಬಗಳ ರಕ್ಷಣೆ

ಮಹಾಮಳೆಗೆ ತತ್ತರಿಸಿದ ಕರಾವಳಿ ಜಿಲ್ಲೆ: ಉಡುಪಿಯಲ್ಲಿ ಅಪಾಯದಲ್ಲಿದ್ದ ಕುಟುಂಬಗಳ ರಕ್ಷಣೆ

ಜೂನ್‌ ತಿಂಗಳಲ್ಲಿ ಕ್ಷೀಣವಾಗಿದ್ದ ಮುಂಗಾರು ಜುಲೈನಲ್ಲಿ ಬಡ್ಡಿ ಸಮೇತ ಲೆಕ್ಕ ಚುಕ್ತಾ ಮಾಡುತ್ತಿದೆ. ಕಳೆದ ನಾಲ್ಕು ದಿನದಿಂದ ಕರಾವಳಿ ಜಿಲ್ಲೆಗಳಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ. ತಗ್ಗು ಪ್ರದೇಶಗಳು ಜಲಾವೃತವಾಗುತ್ತಿತ್ತು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ.

ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಮಳೆ ಮುಂದುವರಿದಿರುವ ಕಾರಣ ಶಾಲಾ – ಕಾಲೇಜುಗಳಿಗೆ ಗುರುವಾರ ಕೂಡ ರಜೆ ನೀಡಲಾಗಿದೆ.

ಇದನ್ನೂ ಓದಿ: ಗೃಹಜ್ಯೋತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್‌ – ಒಂದು ಕೋಟಿಗೂ ಅಧಿಕ ಗ್ರಾಹಕರಿಂದ ನೋಂದಣಿ!

ಭಾರಿ ಮಳೆಗೆ ಉಡುಪಿ ಜಿಲ್ಲೆಯ ಬಹುತೇಕ ಪ್ರದೇಶಗಳು ನೀರಿನಿಂದ ಜಲಾವೃತವಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗುತ್ತಿದೆ. ಈ ಹಿನ್ನಲೆ ಜನರಿಗೆ ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಸೂಚಿಸಿದೆ. ಇನ್ನು ರಾತ್ರೋ ರಾತ್ರಿ ಇಂದ್ರಾಣಿ ನದಿ ಉಕ್ಕಿ ಹರಿದಿದ್ದು, ಕಾಲುವೆಗಳು ನದಿಯ ರೂಪ ಪಡೆದುಕೊಂಡಿದೆ. ಜೊತೆಗೆ ನಗರ ಸಭಾ ವ್ಯಾಪ್ತಿಯ ಕೊಡಂಕೂರು ಭಾಗದಲ್ಲಿ ಅಪಾಯದಲ್ಲಿದ್ದ ಹಲವು ಕುಟುಂಬಗಳನ್ನ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿ, ಸುರಕ್ಷಿತ ಪದೇಶಗಳಿಗೆ ಸ್ಥಳಾಂತರ ಮಾಡಿದ್ದಾರೆ.

suddiyaana