4 ದಿನಗಳ ನಂತರ 276 ಭಾರತೀಯರು ಸ್ವದೇಶಕ್ಕೆ ವಾಪಸ್, 23 ಮಂದಿ ಫ್ರಾನ್ಸ್ ನಲ್ಲಿ ಉಳಿಯಲು ನಿರ್ಧಾರ

4 ದಿನಗಳ ನಂತರ 276 ಭಾರತೀಯರು ಸ್ವದೇಶಕ್ಕೆ ವಾಪಸ್, 23 ಮಂದಿ ಫ್ರಾನ್ಸ್ ನಲ್ಲಿ ಉಳಿಯಲು ನಿರ್ಧಾರ

ಮಾನವ ಕಳ್ಳಸಾಗಣೆ ಆರೋಪದ ಮೇಲೆ ಪ್ಯಾರಿಸ್ ವಶದಲ್ಲಿದ್ದ ಸುಮಾರು 276 ಭಾರತೀಯ ಪ್ರಯಾಣಿಕರೊಂದಿಗೆ ಬಂಧನಕ್ಕೊಳಗಾಗಿದ್ದ ವಿಮಾನ ಮುಂಬೈಗೆ ಬಂದಿಳಿದಿದೆ ಎಂದು ವರದಿಯಾಗಿದೆ.

ಭಾರತೀಯ ಪ್ರಯಾಣಿಕರನ್ನು ಹೊತ್ತು ನಿಕರಾಗುವಾಗೆ ಹೊರಟಿದ್ದ ವಿಮಾನವನ್ನು ಫ್ರಾನ್ಸ್‌ನಲ್ಲಿ ಶಂಕಿತ ಮಾನವ ಕಳ್ಳಸಾಗಣೆಯ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿತ್ತು. ಈ ವಿಮಾನದಲ್ಲಿ 303 ಭಾರತೀಯ ಪ್ರಯಾಣಿಕರಿದ್ದರು. ಇದೀಗ ವಿಮಾನದಲ್ಲಿದ್ದ 276 ಜನರು ಭಾರತಕ್ಕೆ ಮರಳಿದ್ದಾರೆ. ಇನ್ನೂ 23 ಜನರು ಫ್ರಾನ್ಸ್ ಗೆ ತೆರಳಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: 300 ಕ್ಕೂ ಹೆಚ್ಚು ಭಾರತೀಯರಿದ್ದ ವಿಮಾನ ಫ್ರಾನ್ಸ್​​ನಲ್ಲಿ ಲ್ಯಾಂಡ್ – ಮಾನವ ಕಳ್ಳಸಾಗಣೆ ಶಂಕೆ

ವಿಮಾನದಲ್ಲಿದ್ದ ಒಟ್ಟು 303 ಪ್ರಯಾಣಿಕರ ಪೈಕಿ ನಾಲ್ವರು ನೇಪಾಳದವರು. ಇಬ್ಬರು ಪ್ರಯಾಣಿಕರನ್ನು ಫ್ರೆಂಚ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಬಂಧಿತ ಇಬ್ಬರು ಪ್ರಯಾಣಿಕರನ್ನು ಮಾನವ ಕಳ್ಳಸಾಗಣೆಯಲ್ಲಿ ಅವರ ಪಾತ್ರ ಏನು ಎಂಬುವುದರ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಫ್ರಾನ್ಸ್‌ನಲ್ಲಿ ಮಾನವ ಕಳ್ಳಸಾಗಣೆ 20 ವರ್ಷಗಳವರೆಗೆ ಜೈಲು ಶಿಕ್ಷೆಗೆ ಕಾರಣವಾಗಬಹುದು.

Shwetha M