11 ಗಂಟೆ ಆಕಾಶದಲ್ಲೇ ಸುತ್ತಾಟ – ಲ್ಯಾಂಡ್ ಆಗದೆ ವಾಪಸ್ ಆದ ಬೆಂಗಳೂರಿನಿಂದ ನೇಪಾಳಕ್ಕೆ ಹೋದ ವಿಮಾನ

11 ಗಂಟೆ ಆಕಾಶದಲ್ಲೇ ಸುತ್ತಾಟ – ಲ್ಯಾಂಡ್ ಆಗದೆ ವಾಪಸ್ ಆದ  ಬೆಂಗಳೂರಿನಿಂದ ನೇಪಾಳಕ್ಕೆ ಹೋದ ವಿಮಾನ

ಬೆಂಗಳೂರಿನಿಂದ ನೇಪಾಳಕ್ಕೆ ಹೋದ ವಿಮಾನ ಲ್ಯಾಂಡ್ ಆಗದೆ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದೆ. ಅಷ್ಟೇ ಪ್ರವಾಸ ಹೊರಟ್ಟಿದ್ದವರ ಕನಸು ಕೂಡ ಭಗ್ನವಾಗಿದೆ. ಅಂದಹಾಗೇ  ಏರ್​ ವಿಮಾನದಲ್ಲಿ ಬೆಂಗಳೂರಿನಿಂದ ನೇಪಾಳದ  ಕಠ್ಮಂಡು  ಹೊರಟಿದ್ದ ಕೋಲಾರ ಪ್ರಯಾಣಿಕರು ವಿಮಾನದಲ್ಲೇ ಪರದಾಟ ನಡೆಸಿದ್ದಾರೆ. ಸುಮಾರು 11 ಗಂಟೆಗಳ ಕಾಲ ವಿಮಾನ ಪ್ರಯಾಣ ಮಾಡಿದರೂ ವಿಮಾನ ಲ್ಯಾಂಡ್   ಆಗದೇ ವಾಪಸ್ ಬೆಂಗಳೂರಿಗೆ ​ ಮರಳಿದೆ. ನೇಪಾಳದ ಕಠ್ಮಂಡುವಿನಲ್ಲಿ ಹವಾಮಾನ ವೈಪರೀತ್ಯಗಳಿಂದ ಲ್ಯಾಂಡಿಂಗ್​ಗೆ ಅವಕಾಶ ಸಿಗದ ಹಿನ್ನೆಲೆ ಏರ್ ಇಂಡಿಯಾ   ವಿಮಾನ ಬೆಂಗಳೂರಿಗೆ ವಾಪಸ್​ ಆಗಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಟೀಮ್ ಇಂಡಿಯಾ ಬಿರುಗಾಳಿ ಬ್ಯಾಟಿಂಗ್‌ಗೆ ಜಿಂಬಾಬ್ವೆ ತತ್ತರ – ಭಾರತದ ವಿರುದ್ಧ ಕೊನೇ ತನಕ ಹೋರಾಡಿ ಸೋತ ಬೆನೆಟ್

ಅಂದಹಾಗೇ ಕೋಲಾರದ ಸಮೃದ್ದಿ ಹಾಲಿಡೇಸ್ ಟೂರ್ಸ್ ಆಯೋಜಿಸಿದ್ದ ಕಠ್ಮಂಡು ಪ್ರವಾಸಕ್ಕೆ ಕೋಲಾರದಿಂದ ಸುಮಾರು 29 ಪ್ರಯಾಣಿಕರು ಬೆಂಗಳೂರಿನಿಂದ ಏರ್ ಇಂಡಿಯಾ ವಿಮಾನದಲ್ಲಿ ಕಠ್ಮಂಡುಗೆ ನಿನ್ನೆ ಬೆಳಗ್ಗೆ 10.30 ಕ್ಕೆ ಪ್ರಯಾಣ ಬೆಳೆಸಿದ್ದರು. ಆದ್ರೆ ಹವಾಮಾನ ವೈಪರಿತ್ಯದಿಂದಾಗಿ ಕಠ್ಮಂಡುನಲ್ಲಿ ವಿಮಾನ ಲ್ಯಾಂಡಿಂಗ್​ಗೆ ಅನುಮತಿ ಸಿಗದ ಕಾರಣ ವಿಮಾನವನ್ನು ವಾರಣಾಸಿಯಲ್ಲಿ ಲ್ಯಾಂಡ್ ಮಾಡಲಾಗಿತ್ತು. ನಂತ್ರ ಬೆಂಗಳೂರಿಗೆ ಆ  ವಿಮಾನ್ ವಾಪಸ್ ಬಂದಿದೆ.

ಊಟ ತಿಂಡಿ ಇಲ್ಲದೇ ಪರದಾಟ

ಕೇವಲ ಇದರಲ್ಲಿ ಕೋಲಾರದ 29 ಪ್ರಯಾಣಿಕರು ಮಾತ್ರವಲ್ಲ, ಸುಮಾರು 180 ಪ್ರಯಾಣಿಕರು ಇದ್ದರು.  ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಠ್ಮಂಡುವಿಗೆ ಹೊರಟ್ಟಿದ್ದ ವಿಮಾನದಲ್ಲಿ ಸುಮಾರು 180 ಮಂದಿ ಪ್ರಯಾಣಿಕರಿದ್ದರು. 180 ಮಂದಿ ಪೈಕಿ ಕೋಲಾರದ 29 ಮಂದಿ ಸಹ ಏರ್​ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದರು. ಆದ್ರೆ ಲ್ಯಾಂಡಿಂಗ್​ ಅವಕಾಶ ಸಿಗದ ಹಿನ್ನೆಲೆ ವಿಮಾನ ಬೆಂಗಳೂರಿಗೆ ವಾಪಸ್​ ಆಗಿದ್ದು, ಸತತ 11 ಗಂಟೆಗಳ ಪ್ರಯಾಣಿಸಿದ ಪ್ರಯಾಣಿಕರು ಊಟ ತಿಂಡಿ ಇಲ್ಲದೇ ಪರದಾಡಿದ್ದಾರೆ.

Kishor KV

Leave a Reply

Your email address will not be published. Required fields are marked *