ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾಮಗಾರಿಗೆ ಅಡ್ಡಿ – ಮೊದಲ ಯತ್ನ ವಿಫಲ!

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾಮಗಾರಿಗೆ ಅಡ್ಡಿ – ಮೊದಲ ಯತ್ನ ವಿಫಲ!

ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್ ಗೇಟ್ ಮುರಿದು ಬಿದ್ದಿದೆ. ಇದೀಗ ಗೇಟ್‌ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಮೊದಲ ಪ್ರಯತ್ನ ವಿಫಲವಾಗಿದೆ. ಎರಡನೇ ಪ್ಲಾನ್‌ ಮಾಡಿಕೊಂಡಿರುವ ತಜ್ಞರು ಇಂದು ಗೇಟ್‌ ಅಳವಡಿಸುವ ಕಾರ್ಯ ನಡೆಸಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: 2 ಸೋಲು.. 3ನೇ ಪರೀಕ್ಷೆಗೆ ನಿಖಿಲ್ ರೆಡಿ – HDKಗೆ ಮೈತ್ರಿಯೇ ಮುಳ್ಳು?

1,625 ಅಡಿ ಎತ್ತರದಲ್ಲಿ ಡ್ಯಾಂ ನೀರು ಇರುವಾಗ ಸ್ಟಾಪ್ ಲಾಗ್ ಅಳವಡಿಸಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ತಾಂತ್ರಿಕ ತೊಂದರೆಯಿಂದಾಗಿ ಗುರುವಾರ ಸ್ಪಾಪ್ ಲಾಗ್‌ನ ಒಂದು ಎಲಿಮೆಂಟ್ ಅಳವಡಿಸಲು ಆಗಲಿಲ್ಲ. ಮೊದಲ ಪ್ರಯತ್ನದಲ್ಲಿ ಜಿಂದಾಲ್‌ ಕಂಪನಿಯ ಗೇಟ್‌ ಎಲಿಮೆಂಟ್‌ನ ಕೊಂಡಿಗಳು 19ನೇ ಗೇಟ್‌ ಕಲ್ಲಿನ ಪಿಲ್ಲರ್‌ನ ಕೊಂಡಿಗಳಿಗೆ ಸರಿಯಾಗಿ ಹೊಂದಾಣಿಕೆ ಆಗಿಲ್ಲ. ಹೀಗಾಗಿ ಹೊಸಳ್ಳಿಯಲ್ಲಿ ಸಿದ್ಧಪಡಿಸಲಾದ ಗೇಟ್‌ ಎಲಿಮೆಂಟ್‌ ತಂದಿರಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲು ಎರಡು ಹಂತದಲ್ಲಿ ಪ್ರಯತ್ನಿಸಲು ತಜ್ಞರು ಚಿಂತಿಸಿದ್ದರು. ಈ ಕುರಿತು ಟಿಬಿ ಬೋರ್ಡ್‌ನಿಂದ ಸಿಎಂಗೆ ನೀಡಿದ ಮಾಹಿತಿಯಲ್ಲಿ ನಮೂದಿಸಲಾಗಿದೆ. ಶುಕ್ರವಾರ ಮತ್ತೆ ಗೇಟ್ ಅಳವಡಿಕೆ ಯತ್ನ ನಡೆಸುವ ಸಾಧ್ಯತೆ ಇದ್ದು, ಮತ್ತೆ 1,621 ಅಡಿಗೆ ನೀರಿನ ಮಟ್ಟ ಬಂದಾಗ ಸ್ಟಾಪ್ ಲಾಗ್ ಅಳವಡಿಸಲು ಚಿಂತನೆ ನಡೆಸಲಾಗಿದೆ.

Shwetha M

Leave a Reply

Your email address will not be published. Required fields are marked *