ಪಂಚರಾಜ್ಯಗಳ ಮತದಾನ ಪೂರ್ವ ಸಮೀಕ್ಷೆ ಫಲಿತಾಂಶ – ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಗೆಲುವು..?
ಪಂಚರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ರಂಗು ಪಡೆದುಕೊಳ್ಳುತ್ತಿದೆ. 2024ರ ಲೋಕಸಭಾ ಚುನಾವಣೆಗೆ ಈ ಐದು ರಾಜ್ಯಗಳ ಫಲಿತಾಂಶ ದಿಕ್ಸೂಚಿ ಎಂದೇ ಪರಿಗಣಿಸಲಾಗುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರಾನೇರ ಫೈಟ್ ಏರ್ಪಟ್ಟಿದ್ದು, ಗೆಲುವಿನ ತಂತ್ರಗಾರಿಕೆಯೂ ಜೋರಾಗಿದೆ. ಇದರ ನಡುವೆಯೇ ಮತದಾನ ಪೂರ್ವ ಸಮೀಕ್ಷೆಗಳು ಫಲಿತಾಂಶ ಹೊರಬಿದ್ದಿದ್ದು ಭಾರೀ ಕುತೂಹಲಕ್ಕೂ ಕಾರಣವಾಗಿದೆ. ಸರ್ವೇ ರಿಸಲ್ಟ್ ರಾಷ್ಟ್ರ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ. ಅದರಲ್ಲೂ ಬಿಜೆಪಿ ಪಾಳಯದಲ್ಲಿ ಹಲವು ಲೆಕ್ಕಾಚಾರಗಳು ಶುರುವಾಗಿದೆ.
ಮಿಜೋರಾಂ
ಎಬಿಪಿ ಸಿ-ವೋಟರ್ ಸಮೀಕ್ಷೆ ಪ್ರಕಾರ 40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಬಹುದು ಅಂತಾ ಸಮೀಕ್ಷಾ ವರದಿಯಲ್ಲಿ ಉಲ್ಲೇಖವಾಗಿದೆ. ಆಡಳಿತರೂಢ ಮಿಜೋರಾಂ ನ್ಯಾಷನಲ್ ಫ್ರಂಟ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು. MNF : 13-17, ಕಾಂಗ್ರೆಸ್: 10-14, ZPM: 9-13 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದ್ಯಂತೆ.
ತೆಲಂಗಾಣ
ಇನ್ನು ಸಮೀಕ್ಷೆ ಪ್ರಕಾರ ತೆಲಂಗಾಣದಲ್ಲಿ ಕಾಂಗ್ರೆಸ್ & ಬಿಆರ್ಎಸ್ ನಡುವೆ ನೇರಾನೇರ ಫೈಟ್ ನಡೆಯಬಹುದು. 119 ಸದಸ್ಯ ಬಲದ ತೆಲಂಗಣಾ ವಿಧಾನಸಭೆಯಲ್ಲಿ ಕಾಂಗ್ರೆಸ್: 48-60 ಸ್ಥಾನ ಪಡೆತಯಬುದು. ಬಿಆರ್ಎಸ್: 43-55, ಬಿಜೆಪಿ: 5-11, ಇತರರು: 5-11 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ.
ಛತ್ತೀಸ್ಗಢ
90 ಸದಸ್ಯಬಲದ ಛತ್ತೀಡ್ಗಢದಲ್ಲಿ ಸದ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡುವ ಸಾಧ್ಯತೆ ಇದೆ. ಕಾಂಗ್ರೆಸ್: 45-51, ಬಿಜೆಪಿ: 39-45, ಇತರರು: 0-2 ಸ್ಥಾನ ಗೆಲ್ಲಬಹುದು.
ಮಧ್ಯಪ್ರದೇಶ
230 ಸದಸ್ಯಬಲದ ಮಧ್ಯಪ್ರದೇಶಯಲ್ಲಿ ಸದ್ಯ ಬಿಜೆಪಿ ಸರ್ಕಾರದ ಆಡಳಿತವಿದೆ. ವಿಪಕ್ಷವಾಗಿರುವ ಕಾಂಗ್ರೆಸ್ ಈ ಬಾರಿ ಗೆದ್ದು ಸರ್ಕಾರ ರಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಾಂಗ್ರೆಸ್: 113-125, ಬಿಜೆಪಿ: 104-116, ಇತರರು: 0-4 ಗೆಲ್ಲುವ ನಿರೀಕ್ಷೆ ಇದೆ ಎನ್ನಲಾಗಿದೆ.
ರಾಜಸ್ಥಾನ
200 ಸದಸ್ಯಬಲದ ರಾಜಸ್ಥಾನದಲ್ಲಿ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಆಡಳಿತವಿದೆ. ಚುನಾವಣೆಯಲ್ಲಿ ಬಿಜೆಪಿ 125-137 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸುವ ನಿರೀಕ್ಷೆ ಇದೆ. ಆಡಳಿತರೂಢ ಕಾಂಗ್ರೆಸ್ 59-69 ಸ್ಥಾನಗಳಲ್ಲಷ್ಟೇ ಗೆಲ್ಲುತ್ತದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ಹೀಗೆ ಐದು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ಗೆ ಬಹುಮತ ಸಿಗುವ ಸಾಧ್ಯತೆ ಇದ್ದು ಸರ್ಕಾರ ರಚನೆ ಮಾಡಬಹುದು ಎಂದು ಎಬಿಪಿ ಸಿ-ವೋಟರ್ ಸಮೀಕ್ಷೆ ತಿಳಿಸಿದೆ. ಆದರೆ ಈ ಸಮೀಕ್ಷೆ ಬಳಿಕ ಕರ್ನಾಟಕದ ಚುನಾವಣೆಯಂತೆಯೇ ಈ ಐದು ರಾಜ್ಯಗಳಲ್ಲಿ ಬಿಜೆಪಿ ಸಂಕಷ್ಟ ಎದುರಿಸಬಹುದು ಎನ್ನಲಾಗಿದೆ.