ಮುತ್ತತ್ತಿಯಲ್ಲಿ ಒಂದೇ ಕುಟುಂಬದ ಐವರು ಕಾವೇರಿ ನದಿ ಪಾಲು – ಡೇಂಜರ್ ಅಂತಾ ಗೊತ್ತಿದ್ದರೂ ಯಾಕೆ ನೀರಿಗಿಳಿದಿದ್ದು ಯಾಕೆ?

ಮುತ್ತತ್ತಿಯಲ್ಲಿ ಒಂದೇ ಕುಟುಂಬದ ಐವರು ಕಾವೇರಿ ನದಿ ಪಾಲು – ಡೇಂಜರ್ ಅಂತಾ ಗೊತ್ತಿದ್ದರೂ ಯಾಕೆ ನೀರಿಗಿಳಿದಿದ್ದು ಯಾಕೆ?

ಆ ಜಾಗ ಪ್ರವಾಸಿಗರಿಗೆ ನೋಡಲು ಖುಷಿ ಕೊಡುತ್ತದೆ. ಆದರೆ, ಆ ಜಾಗ ನಿಜವಾಗಲೂ ಸೇಫ್ ಅಲ್ಲ. ಅಲ್ಲಿ ಕಾವೇರಿ ನದಿ ಪಾಲಾದವರು ಸಾಕಷ್ಟು ಪ್ರವಾಸಿಗರಿದ್ದಾರೆ. ಆದರೂ ಕೂಡಾ ಮತ್ತೆ ಮತ್ತೆ ಅದೇ ಜಾಗಕ್ಕೆ ಪ್ರವಾಸಿಗರು ಹೋಗುತ್ತಾರೆ. ಜೀವವನ್ನೇ ಬಲಿಕೊಡುತ್ತಾರೆ. ಬುಧವಾರ ಸಂಜೆ ಕೂಡಾ ಅಲ್ಲಾಗಿದ್ದು ಅದೆ. ಒಂದೇ ಕುಟಂಬದ ಐದು ಮಹಿಳೆಯರು ಕಾವೇರಿ ನದಿಗೆ ಬಲಿಯಾಗಿದ್ದಾರೆ.

ಇದನ್ನೂ ಓದಿ:32 ಲಕ್ಷ ಸಾಲ.. ಹೆತ್ತವರಿಗೆ 30 ಬಾರಿ ಚಾಕು ಇರಿತ – ಶ್ವೇತಾ ಕೆನತ್ ಮಾಡಿರುವ ಪಾಪ ಕೃತ್ಯ ಅತ್ಯಂತ ಭೀಕರ..!

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಬಳಿ ಕಾವೇರಿ ನದಿಯಲ್ಲಿ ಘೋರ ದುರಂತ ಸಂಭವಿಸಿದೆ. ಚನ್ನಪಟ್ಟಣ ಮೂಲದ ಒಂದೇ ಕುಟುಂಬದ ಐವರು ನೀರುಪಾಲಾಗಿರುವ ಘಟನೆ ನಡೆದಿದೆ. ಚೈತ್ರ(20), ಶ್ವೇತಾ (38), ವಿಜಯಮ್ಮ(50), ಪ್ರಿಯಾಂಕ(28) ಮತ್ತು ಮಹೇಶ್ ಮೃತರು. ಸದ್ಯ ಕಾರ್ಯಚರಣೆ ನಡೆಸಿ ಪೊಲೀಸರು ಮತ್ತು ಅಗ್ನಿಶಾಮಕದಳ ಸಿಬ್ಬಂದಿ ಐವರ ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ.

ಬುಧವಾರ ಸಂಜೆ 4.45ರ ಸಮಯ. ಮುತ್ತತ್ತಿಯ ಮುತ್ತೆತ್ತರಾಯ ದೇಗುಲಕ್ಕೆ ಚನ್ನಪಟ್ಟಣದ ಮೂಲದ ಒಂದೇ ಕುಟುಂಬದವರು ಆಗಮಿಸಿದ್ದರು. ಈ ವೇಳೆ ಕಾವೇರಿ ನದಿಗಿಳಿದು ಫೋಟೋ ತೆಗೆದುಕೊಳ್ಳಲು ಹೋದಾಗ ಈ  ದುರ್ಘಟನೆ ಸಂಭವಿಸಿದೆ. ಫೋಟೋ ತೆಗೆದುಕೊಳ್ಳುವ ಆತುರದಲ್ಲಿ ನದಿಯ ಆಳ ತಿಳಿಯದೆ ಒಬ್ಬರು ನೀರಿಗೆ ಜಾರಿದ್ದು, ಅವರನ್ನು ಉಳಿಸಲು ಹೋದ ಉಳಿದವರು ಕೂಡ ನೀರಿನ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಮುತ್ತತ್ತಿಯ ಕಾವೇರಿ ನದಿ ಸ್ಥಳದಲ್ಲಿ ಈ ಹಿಂದೆಯೂ ಇಂತಹ ಅನೇಕ ಅಪಾಯಕಾರಿ ಘಟನೆಗಳು ನಡೆದಿವೆ.  ಆದರೂ ಪ್ರವಾಸಿಗರು ಎಚ್ಚರಿಕೆ ಫಲಕಗಳನ್ನು ನಿರ್ಲಕ್ಷಿಸಿ ನೀರಿಗಿಳಿಯುವುದು ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ.

Sulekha