ಶಾಲಾ ಬಸ್ ಆಟೋ ನಡುವೆ ಭೀಕರ ಅಪಘಾತ – ರಿಕ್ಷಾದಲ್ಲಿದ್ದ ಐವರ ದಾರುಣ ಸಾವು

ಶಾಲಾ ಬಸ್ ಆಟೋ ನಡುವೆ ಭೀಕರ ಅಪಘಾತ – ರಿಕ್ಷಾದಲ್ಲಿದ್ದ ಐವರ ದಾರುಣ ಸಾವು

ಶಾಲಾ ಬಸ್ ಹಾಗೂ ಆಟೋ ನಡುವೆ ಭೀಕರ ಅಪಘಾತ ಸಂಭವಿಸಿ ಐವರು ಸಾವನ್ನಪ್ಪಿರೋ ಘಟನೆ ನಡೆದಿದೆ. ಪೆರ್ಲ ಕಡೆಯಿಂದ ತೆರಳುತ್ತಿದ್ದ ಮಾನ್ಯದ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ ಬಸ್ ಮತ್ತು ಮೊಗ್ರಲ್ ಪುತ್ತೂರು ಮೂಲದ ರಿಕ್ಷಾ ಅಪಘಾತಕ್ಕಿಡಾಗಿದೆ. ಮಕ್ಕಳನ್ನು ಪೆರ್ಲ ಭಾಗದಲ್ಲಿ ಇಳಿಸಿದ ಶಾಲಾ ಬಸ್ ಖಾಲಿಯಾಗಿ ಸಂಚರಿಸುತ್ತಿದ್ದಾಗ ಪಳ್ಳತ್ತಡ್ಕದ ಗುಳಿಗ ಬನದ ಅನತಿ ದೂರದ ತಿರುವಿನಲ್ಲಿ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ : ಪಾತಾಳಕ್ಕೆ ಕುಸಿದ ಪಾಪಿ ಪಾಕಿಸ್ತಾನ! – ದೇಶದಲ್ಲಿ ಕಡುಬಡತನ ಶೇ. 39.4ಕ್ಕೆ ಏರಿಕೆ!

ಭೀಕರ ಅಪಘಾತದಲ್ಲಿ ಆಟೋದಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ. ಕೇರಳದ ಕಾಸರಗೋಡಿನ ಬದಿಯಡ್ಕ ಸಮೀಪದ ಪಳ್ಳತ್ತಡ್ಕ ಎಂಬಲ್ಲಿ ನಡೆದಿದೆ‌. ತಾಯಲಂಗಡಿ ನಿವಾಸಿ ಪ್ರಸ್ತುತ ಮೊಗ್ರಾಲಿನಲ್ಲಿ ವಾಸಿಸುವ ರಿಕ್ಷಾ ಡ್ರೈವರ್ ಅಬ್ದುಲ್ ರವೂಫ್‌ (58), ಪ್ರಯಾಣಿಕರಾದ ಮೊಗ್ರಾಲಿನ ಉಸ್ಮಾನ್ ಎಂಬವರ ಪತ್ನಿ ಭಿಪಾತಿಮ್ಮ (50), ಷೇಕ್ ಅಲಿ ಎಂಬವರ ಪತ್ನಿ ಭಿಪಾತಿಮ್ಮ (60), ಇಸ್ಮಾಯಿಲ್ ಅವರ ಪತ್ನಿ ಉಮ್ಮು ಅಲಿಮಾ, ಬೆಳ್ಳೂರು ಅಬ್ಬಾಸ್ ಎಂಬವರ ಪತ್ನಿ ನಫೀಸಾ ಮೃತಪಟ್ಟಿದ್ದಾರೆ. ಪೆರ್ಲ ಕಡೆಯಿಂದ ತೆರಳುತ್ತಿದ್ದ ಮಾನ್ಯದ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ ಬಸ್ ಮತ್ತು ಮೊಗ್ರಲ್ ಪುತ್ತೂರು ಮೂಲದ ರಿಕ್ಷಾ ಅಪಘಾತಕ್ಕಿಡಾಗಿ ಈ ಘಟನೆ ಸಂಭವಿಸಿದೆ. ಮಕ್ಕಳನ್ನು ಪೆರ್ಲ ಭಾಗದಲ್ಲಿ ಇಳಿಸಿದ ಶಾಲಾ ಬಸ್ ಖಾಲಿಯಾಗಿ ಸಂಚರಿಸುತ್ತಿದ್ದಾಗ ಪಳ್ಳತ್ತಡ್ಕದ ಗುಳಿಗ ಬನದ ಅನತಿ ದೂರದ ತಿರುವಿನಲ್ಲಿ ಈ ದುರ್ಘಟನೆ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾ ಸಂಪೂರ್ಣ ನುುಜ್ಜು ಗುಜ್ಜಾಗಿದೆ. ಮೃತದೇಹಗಳನ್ನು‌ ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ.

Shantha Kumari