ಅಮರನಾಥ ಯಾತ್ರೆ ವೇಳೆ ಐವರು ಹೃದಯಾಘಾತದಿಂದ ಸಾವು – ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆ

ಅಮರನಾಥ ಯಾತ್ರೆ ವೇಳೆ ಐವರು ಹೃದಯಾಘಾತದಿಂದ ಸಾವು – ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆ

ಶ್ರೀನಗರ: ಉತ್ತರ ಭಾರತದಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆ ಸುರಿಯುತ್ತಿದೆ. ಜಮ್ಮು ಕಾಶ್ಮೀರದಲ್ಲೂ ಮಳೆ ಹಾಗೂ ಪ್ರತಿಕೂಲ ಹವಾಮಾನ ಮುಂದುವರಿದಿದೆ. ಅಮರನಾಥ ಯಾತ್ರೆ ವೇಳೆ ಕಳೆದ 24 ಗಂಟೆಗಳ ಅವಧಿಯಲ್ಲಿ ಐವರು ಯಾತ್ರಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಜಮ್ಮು ಕಾಶ್ಮೀರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಅಲ್ಲಲ್ಲಿ ಭೂಕುಸಿತ ಸಂಭವಿಸಿದೆ. ಹೀಗಾಗಿ ಅಮರನಾಥ ಯಾತ್ರೆಗೆ ಭಾರಿ ಹಿನ್ನೆಡೆ ಉಂಟಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಐವರು ಯಾತ್ರಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ವರ್ಷ ಯಾತ್ರೆಯಲ್ಲಿ ಸಾವಿಗೀಡಾದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮುಂದುವರಿದ ಮಳೆಯ ಅಬ್ಬರ – ದೆಹಲಿಯಲ್ಲಿ ಯಮುನಾ ನದಿ ಮಟ್ಟ ಮತ್ತಷ್ಟು ಏರಿಕೆ

ಪಹಲ್‌ಗಾಮ್‌ನಲ್ಲಿ ಮೂವರು ಸಾವಿಗೀಡಾಗಿದರೆ, ಇನ್ನಿಬ್ಬರು ಬಲ್‌ತಾಲ್ ಮಾರ್ಗದಲ್ಲಿ ಸಾವಿಗೀಡಾಗಿದ್ದಾರೆ. ಐದು ಮಂದಿಯೂ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಹಲ್‌ಗಾಮ್‌ನಲ್ಲಿ ಮೂವರು ಸಾವಿಗೀಡಾಗಿದರೆ, ಇನ್ನಿಬ್ಬರು ಬಲ್‌ತಾಲ್ ಮಾರ್ಗದಲ್ಲಿ ಸಾವಿಗೀಡಾಗಿದ್ದಾರೆ. ಐದು ಮಂದಿಯೂ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ . ಮೃತರಲ್ಲಿ ಒಬ್ಬರು ಉತ್ತರಪ್ರದೇಶದವರಾದರೆ, ಮತ್ತೊಬ್ಬರು ಮಧ್ಯಪ್ರದೇಶದವರು. ಇನ್ನುಳಿದ ಯಾತ್ರಿಗಳ ಗುರುತು ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

suddiyaana