ಮೀನುಗಾರರ ಬಲೆಗೆ ಬಿದ್ದ ವಿಷಕಾರಿ ಹಾವು – ತಪ್ಪಿದ ಭಾರಿ ಅನಾಹುತ

ಮೀನುಗಾರರ ಬಲೆಗೆ ಬಿದ್ದ ವಿಷಕಾರಿ ಹಾವು – ತಪ್ಪಿದ ಭಾರಿ ಅನಾಹುತ

ವಿಶಾಖಪಟ್ಟಣ: ಆಂಧ್ರ ಪ್ರದೇಶದ ವಿಶಾಖ ಸಾಗರ ನಗರ ಬೀಚ್ ನಲ್ಲಿ ಅಪಾಯಕಾರಿ ಹಾವೊಂದು ಸ್ಥಳೀಯ ಮೀನುಗಾರರ ಬಲೆಗೆ ಬಿದ್ದಿದೆ. ಇದು ಸುಮಾರು 5 ಅಡಿ ಉದ್ದವಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

ಬಲೆಗೆ ಬಿದ್ದ ಹಾವನ್ನು ಆರಂಭದಲ್ಲಿ ಮೀನು ಎಂದು ಅಂದುಕೊಂಡಿದ್ದರು. ಆದರೆ ಅದರ ಬಳಿ ಹೋದಾಗ ಬಲೆಬಿದ್ದಿರುವುದು ಮೀನಲ್ಲ, ಹಾವು ಎಂದು ತಿಳಿದುಬಂದಿದೆ. ಆ ಬಳಿಕ ಅಪಾಯಕಾರಿ ಹಾವನ್ನು ಸಮುದ್ರಕ್ಕೆ ಬಿಡಲಾಗಿದೆ.

ಕೂಡಲೇ ಬಲೆಗೆ ಬಿದ್ದ ಹಾವಿನ ಬಗ್ಗೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದು, ಇದೊಂದು ಅಪಾಯಕಾರಿ ಹಾವು. ಅದರ ವೈಜ್ಞಾನಿಕ ಹೆಸರು ‘ಹೈಡ್ರೋಫಿಸ್ ಗ್ರಾಸಿಲಿಸ್’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಹಿಮದೊಳಗೆ ಅಡಗಿದೆ ಭೀಕರ ವೈರಸ್ – ಮತ್ತೊಂದು ಮಹಾಮಾರಿ ಭೀತಿ?

ಈ ಹಾವು ಹೆಚ್ಚಾಗಿ ಆಳ ಸಮುದ್ರದಲ್ಲಿ ಸುತ್ತಾಡುತ್ತವೆ. ಇದನ್ನು ಸ್ಥಳೀಯರು ಸಮುದ್ರ ಹಾವೆಂದು ಕರೆಯುತ್ತಾರೆ. ಸಣ್ಣ ಸಣ್ಣ ಮೀನುಗಳನ್ನು ತಿಂದು ಬದುಕುತ್ತವೆ. ಆಹಾರ ಹುಡುಕುವ ವೇಳೆ ಈ ಹಾವು ಬಲೆಗೆ ಸಿಲುಕಿರಬಹುದು ಎನ್ನಲಾಗಿದೆ.

‘ಹೈಡ್ರೋಫಿಸ್ ಗ್ರಾಸಿಲಿಸ್’ ಹಾವುಗಳು ಸಮುದ್ರದಲ್ಲಿ ಅತೀ ವೇಗವಾಗಿ ಚಲಿಸುತ್ತವೆ. ಕಣ್ಣು ಮಿಟುಕಿಸುವಷ್ಟರಲ್ಲಿ ಮಾಯವಾಗಿ ಬಿಡುತ್ತದೆ. ಒಂದು ವೇಳೆ ಈ ಹಾವು ಮನುಷ್ಯನಿಗೆ ಕಚ್ಚಿದರೆ, ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯಬೇಕಾಗುತ್ತದೆ. ಇಲ್ಲವಾದಲ್ಲಿ ಕಡಿತಕ್ಕೊಳಗಾದ ವ್ಯಕ್ತಿ ಸಾವನ್ನಪ್ಪುತ್ತಾನೆ.

‘ಹೈಡ್ರೋಫಿಸ್ ಗ್ರಾಸಿಲಿಸ್’ ಹಾವು ಮುಂಜಾನೆ ವೇಳೆ ಮೀನುಗಾರರ ಬಲೆಗೆ ಬಿದ್ದಿದೆ. ರಾತ್ರಿ ವೇಳೆ ಬಲೆಗೆ ಸಿಲುಕಿರುತ್ತಿದ್ದರೆ ಕಾಣುತ್ತಿರಲಿಲ್ಲ. ಇದರಿಂದಾಗಿ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಾಗಿತ್ತು. ಆರಂಭದಲ್ಲೇ ಇದು ಮೀನಲ್ಲ. ಹಾವು ಎಂದು ಗೊತ್ತಾಗಿದ್ದು ಒಳ್ಳೆಯದಾಯ್ತು ಎಂದು ಮೀನುಗಾರರು ನಿಟ್ಟುಸಿರು ಬಿಟ್ಟಿದ್ದಾರೆ.

suddiyaana