ಶಾಲಾ ಮಕ್ಕಳ ಬಿಸಿಯೂಟದಲ್ಲಿ ಮೊಟ್ಟೆ ಜೊತೆಗೆ ಮೀನು ಸಾರು ನೀಡಲು ಸರ್ಕಾರದ ಚಿಂತನೆ?

ಶಾಲಾ ಮಕ್ಕಳ ಬಿಸಿಯೂಟದಲ್ಲಿ ಮೊಟ್ಟೆ ಜೊತೆಗೆ ಮೀನು ಸಾರು ನೀಡಲು ಸರ್ಕಾರದ ಚಿಂತನೆ?

ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟದ ವಿಚಾರ ಸದ್ಯಕ್ಕೆ ಭಾರಿ ಚರ್ಚೆಯಾಗುತ್ತಿದೆ. ಮಕ್ಕಳಿಗೆ ಪೌಷ್ಠಿಕಾಂಶವುಳ್ಳ ಆಹಾರ ನೀಡಬೇಕು ಎಂಬುವುದು ಸರ್ಕಾರದ ಯೋಜನೆಯಾದರೆ, ಕೆಲವು ಬಾರಿ ಸಸ್ಯಾಹಾರ, ಮಾಂಸಾಹಾರದ ವಿಚಾರದಲ್ಲೂ ಮಕ್ಕಳಿಗೆ ನೀಡುವ ಬಿಸಿಯೂಟ ಚರ್ಚೆಯಲ್ಲಿರುತ್ತದೆ. ಮಕ್ಕಳಿಗೆ ಮೊಟ್ಟೆ ನೀಡುವ ವಿಚಾರದಲ್ಲೂ ಭಾರಿ ವಿವಾದವಾಗಿತ್ತು. ಕಡೆಗೂ ವಾರದಲ್ಲಿ 2 ಬಾರಿ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ. ಇದೀಗ ಶಾಲಾ ಮಕ್ಕಳಿಗೆ ಮೀನು ಸಾರು ನೀಡಲು ಸರ್ಕಾರ ಚಿಂತನೆ ನಡೆಸಲಾಗುತ್ತಿದೆ ಅಂತಾ ಹೇಳಲಾಗುತ್ತಿದೆ.

ಇದನ್ನೂ ಓದಿ: ನಮ್ಮ ಮೆಟ್ರೋಗೆ ‘ಶಕ್ತಿ’ ತುಂಬಿದ ಫ್ರೀ ಬಸ್ ಯೋಜನೆ – ಬಿಎಂಆರ್‌ಸಿಎಲ್‌ಗೆ ಪ್ರತಿ ದಿನ 15 ಲಕ್ಷ ಆದಾಯ!

ಸರ್ಕಾರಿ ಶಾಲೆಗಳಿಗೆ ಅರ್ಧಕ್ಕಿಂತಲೂ ಹೆಚ್ಚು ಪಾಲು ಬಡವರು ಮತ್ತು ಮಧ್ಯಮ ವರ್ಗದ ಮಕ್ಕಳು ಬರುತ್ತಾರೆ. ಶಾಲಾ ಮಕ್ಕಳಿಗೆ ಬಾಳೆಹಣ್ಣು, ಚಿಕ್ಕಿ, ಮೊಟ್ಟೆ, ಬೇಳೆ ಸಾರು ಸೇರಿದಂತೆ ಇತರ ಪೌಷ್ಠಿಕಾಂಶಯುಕ್ತ ಆಹಾರವನ್ನು ಕರ್ನಾಟಕ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಶಾಲಾ ಮಕ್ಕಳಿಗೆ ಬಿಸಿಯೂಟದಲ್ಲಿ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ಹೆಚ್ಚಾಗಿ ಬರುವುದರಿಂದ ಆ ಮಕ್ಕಳ ದೇಹದಲ್ಲಿ ಪೌಷ್ಠಿಕಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಮೀನು ಸಾರು ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿದು ಬಂದಿದೆ. ಈ ಯೋಜನೆ ಸದ್ಯ ಚರ್ಚೆಯಲ್ಲಿ ಇರೋದು ಕರ್ನಾಟಕದಲ್ಲಿ ಅಲ್ಲ, ಬದಲಿಗೆ ತೆಲಂಗಾಣದಲ್ಲಿ.

ತೆಲಂಗಾಣದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮೀನು ಸಾರು ನೀಡಲು ಮೀನುಗಾರಿಕೆ ಮುಂದಾಗಿದೆ. ಇದಕ್ಕಾಗಿ ಪ್ರತಿ ವಿದ್ಯಾರ್ಥಿಗೆ ಎಷ್ಟು ಗ್ರಾಂ ಮಾಂಸ ಬೇಕು? ಎಷ್ಟು ಮೀನು ಬೇಕು? ವಾರದಲ್ಲಿ ಎಷ್ಟು ದಿನ ನೀಡಬೇಕು? ನಿಧಿ ಸಂಗ್ರಹಿಸುವ ಕುರಿತು ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಮಧ್ಯಾಹ್ನ ಶಾಲಾ ವಿದ್ಯಾರ್ಥಿಗಳಿಗೆ ಮೀನಿನ ಖಾದ್ಯ ನೀಡುವ ವಿಚಾರವನ್ನು ಸರ್ಕಾರದ ಮುಂದೆ ಪ್ರಸ್ತಾಪಿಸಿದೆ. ಅಧಿಕಾರಿಗಳಿಂದ ಅಂತಿಮ ವರದಿ ಬಂದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ತೆಲಂಗಾಣ ಸರ್ಕಾರ ಸಾರ್ವಜನಿಕ ಶಾಲೆಗಳನ್ನು ಕಾರ್ಪೊರೇಟ್ ಶಾಲೆಗಳಿಗೆ ಹೋಲಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಿದ್ದು, ಸಮವಸ್ತ್ರ, ನೋಟ್‌ಬುಕ್ ಮತ್ತು ಪುಸ್ತಕಗಳನ್ನು ಸಹ ನೀಡಲಾಗುತ್ತದೆ. ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಜೊತೆಗೆ ರಾಗಿ ಜಾವ, ಅನ್ನ ಮತ್ತು ಕೋಳಿ ಮೊಟ್ಟೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮೀನು ಸಾರು ನೀಡಲು ಗ್ರೀನ್‌ ಸಿಗ್ನಲ್‌ ಕೊಟ್ಟರೆ ಮಕ್ಕಳಿಗೆ ಮಧ್ಯಾಹ್ನ ಊಟದಲ್ಲಿ ಮೀನು ಸವಿಯುವ ಭಾಗ್ಯ ಸಿಗಲಿದೆ.

suddiyaana