ಫಿಶ್ ಸ್ಪಾ ಮಾಡಿಸೋದು ಒಳ್ಳೆಯದಲ್ವಾ? – ಮೀನಿನಿಂದ ಪಾದಕ್ಕೆ ಕಚ್ಚಿಸಿಕೊಳ್ಳೋದು ತಪ್ಪಾ?

ಫಿಶ್ ಸ್ಪಾ ಮಾಡಿಸೋದು ಒಳ್ಳೆಯದಲ್ವಾ? – ಮೀನಿನಿಂದ ಪಾದಕ್ಕೆ ಕಚ್ಚಿಸಿಕೊಳ್ಳೋದು ತಪ್ಪಾ?

ಸುಂದರವಾಗಿ ಕಾಣ್ಬೇಕು ಎನ್ನುವುದು ಎಲ್ಲರ ಆಸೆ. ಮಹಿಳೆಯರು ಇದ್ರಲ್ಲಿ ನೂರು ಹೆಜ್ಜೆ ಮುಂದಿರುತ್ತಾರೆ. ಮುಖ, ಕಣ್ಣು, ಕೂದಲು ಮಾತ್ರವಲ್ಲ ಕೈ, ಕಾಲಿನ ಸೌಂದರ್ಯಕ್ಕೂ ಹೆಚ್ಚಿನ ಮಹತ್ವ ನೀಡ್ತಾರೆ. ಚೆಂದದ ಡ್ರೆಸ್ ಧರಿಸಿ, ಮೇಕಪ್ ಮಾಡಿ, ಹೈ ಹೀಲ್ಡ್ ಧರಿಸಿ ಹೋಗೋವಾಗ ಕಾಲು, ಪಾದ  ಕೊಳಕಾಗಿದ್ರೆ, ಡೆಡ್ ಸ್ಕಿನ್ ಇದ್ರೆ ನೋಡಿದವರು ಏನ್ ಅಂದ್ಕೊಳ್ಳೋದಿಲ್ಲ ಅಲ್ವಾ?. ಈ ಡೆಡ್ ಸ್ಕಿನ್ ತೆಗೆದು, ಪಾದಗಳನ್ನು ಸುಂದರಗೊಳಿಸಲು ನಮ್ಮಲ್ಲಿ ಸಾಕಷ್ಟು ಬ್ಯೂಟಿ ಪ್ರಾಡಕ್ಟ್ಗಳು, ಥೆರಪಿಗಳು ಇವೆ.. ಇದ್ರಲ್ಲಿ ಫಿಶ್ ಪೆಡಿಕ್ಯೂರ್ ಒಂದು.

ಇದನ್ನೂ ಓದಿ: ಮೊದಲ ಬಾರಿಗೆ ಮಾನವನ ಮೆದುಳಿಗೆ ರೋಬೋಟ್ ಚಿಪ್ ಅಳವಡಿಕೆ ಯಶಸ್ವಿ! – ಎಲಾನ್ ಮಸ್ಕ್

ಮೊದಲೆಲ್ಲಾ ದೊಡ್ಡ ದೊಡ್ಡ ಮಾಲ್ ಸೇರಿದಂತೆ ಅಲ್ಲೋ ಇಲ್ಲೋ ಒಂದೆರಡು ಫಿಶ್ ಸ್ಪಾ ನಿಮಗೆ ಕಾಣಿಸ್ತಿತ್ತು. ಆದ್ರೀಗ ಅನೇಕ ಕಡೆ ನೀವು ಫಿಶ್ ಸ್ಪಾ ನೋಡ್ಬಹುದು. ಮೀನುಗಳು ಪಾದಕ್ಕೆ ಕಚ್ಚೋದ್ರಿಂದ ಒಂದು ರೀತಿಯ ಮಸಾಜ್ ಜೊತೆಗೆ ಪಾದಗಳ ಡೆಸ್ ಸ್ಕಿನ್ ತೆಗೆದು ಕ್ಲೀನ್ ಮಾಡುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಅನೇಕರು ಮೀನು ಬಂದು ಕಾಲು ಕಚ್ಚೋದನ್ನು ಎಂಜಾಯ್ ಮಾಡ್ತಾರೆ. ಇದನ್ನು ಮನರಂಜನೆ ರೀತಿಯಲ್ಲಿ ನೋಡ್ತಾರೆ. ಆದ್ರೆ ಫಿಶ್ ಸ್ಪಾ ಒಳ್ಳೆಯದಲ್ಲ. ಕೆಲವೊಮ್ಮೆ ಇದು ನಿಮಗೆ ಅಪಾಯತರುವ ಸಾಧ್ಯತೆ ಇರುತ್ತದೆ.

ಫಿಶ್ ಪೆಡಿಕ್ಯೂರ್ ಮೇಲಿಂದ ನೋಡಿದಾಗ ನಿಮಗೆ ಹಿತವೆನ್ನಿಸಿದ್ರೂ ಇದನ್ನು ಮಾಡಿಸೋದ್ರಿಂದ ಸೋರಿಯಾಸಿಸ್, ಎಸ್ಜಿಮಾ,ದಂತಹ ಮಾರಕ ಕಾಯಿಲೆ ಕಾಡುವ ಅಪಾಯವಿದೆ. ಈ ಸಮಸ್ಯೆಯಿಂದ ಬಳಲುವ ವ್ಯಕ್ತಿಗೆ ಕಚ್ಚಿದ ಮೀನು ಇನ್ನೊಬ್ಬ ವ್ಯಕ್ತಿಗೆ ಕಚ್ಚಿದಾಗ ಸೋಂಕು ಹರಡುತ್ತದೆ.

ಇನ್ನು ಅಲ್ಲದೆ ಈ ಬ್ಯೂಟಿ ಟ್ರೀಟ್ ಮೆಂಟ್ ನಿಂದ ನಿಮ್ಮ ಸ್ಕಿನ್ ಟೋನ್ ಹಾಳಾಗುವ ಅಪಾಯವಿದೆ. ಫಿಶ್ ಪೆಡಿಕ್ಯೂರ್ ಸರಿಯಾಗಿ ಆಗದೆ ಹೋದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.  ಫಿಶ್ ಸ್ಪಾ ಮಾಡಿದಾಗ ಮೀನುಗಳು ಬರೀ ನಿಮ್ಮ ಪಾದದಡಿಯ ಚರ್ಮವನ್ನು ಮಾತ್ರ ಕಚ್ಚೋದಿಲ್ಲ. ನಿಮ್ಮ ಉಗುರು ಹಾಗೂ ಉಗುರಿನ ಸುತ್ತಲೂ ಕಚ್ಚುತ್ತವೆ. ಇದ್ರಿಂದ ನಿಮ್ಮ ಉಗುರು ಹಾಳಾಗುತ್ತದೆ. ಇನ್ನು ಫಿಶ್ ಪೆಡಿಕ್ಯೂರ್ ಮಾಡಿಸುವಾಗ ಕೆಲವೊಂದು ಅಂಶಗಳನ್ನು ಗಮದಲ್ಲಿಟ್ಟುಕೊಳ್ಳಬೇಕು. ನೀವು  ಫಿಶ್ ಪೆಡಿಕ್ಯೂರ್ ಗೆ ಒಳಗಾಗ್ತಿದ್ದರೆ ಮೊದಲು ಅಲ್ಲಿ ಹಾಕಲಾಗಿರುವ ನೀರು ಫ್ರೆಶ್ ಆಗಿದೆಯೇ ಎಂಬುದನ್ನು ಪರಿಶೀಲಿಸಿ. ಅನೇಕರು ಬಳಸಿದ ನೀರಿನಲ್ಲೇ ನೀವು ಕಾಲಿಡ್ತಿದ್ದರೆ ಅದ್ರಿಂದ ಅನೇಕ ಸೋಂಕು ನಿಮ್ಮನ್ನು ಕಾಡುವ ಅಪಾಯವಿರುತ್ತದೆ. ಹಾಗೆಯೇ ಫಿಶ್ ಸ್ಪಾ ಮಾಡಿಸಿಕೊಳ್ಳುವಾಗ ಸಂಪೂರ್ಣ ಗಮನ ನಿಮ್ಮ ಕಾಲಿನ ಮೇಲಿರಲಿ. ಮೀನು ಕಚ್ಚಿದಾಗ ನೋವಾದ್ರೆ ಅಥವಾ ನೀವು ಕಿರಿಕಿರಿ ಅನುಭವಿಸಿದ್ರೆ ತಕ್ಷಣ ಕಾಲನ್ನು ಹೊರಗೆ ತೆಗೆಯಿರಿ. ಯಾವುದೇ ಕಾರಣಕ್ಕೂ ಮಕ್ಕಳಿಗೆ ಈ ಫಿಶ್ ಪೆಡಿಕ್ಯೂರ್ ಮಾಡಿಸಬೇಡಿ. ಮಕ್ಕಳ ಚರ್ಮ ತುಂಬಾ ಮೃದುವಾಗಿರುವ ಕಾರಣ, ಮೀನುಗಳು ಅವುಗಳನ್ನು ಕಚ್ಚಿ ತಿನ್ನುವ ಅಪಾಯವಿರುತ್ತದೆ.

Shwetha M