ಅಗಸದಿಂದ ಬಿತ್ತು ಒಂದೇ ಒಂದು ಮೀನು! – ಕೆಲವೇ ಹೊತ್ತಲ್ಲಿ ಭಾರಿ ಸ್ಟೋಟ.. ಇಡೀ ನಗರಕ್ಕೆ ಆವರಿಸಿತು ಕತ್ತಲು!

ಅಗಸದಿಂದ ಬಿತ್ತು ಒಂದೇ ಒಂದು ಮೀನು! – ಕೆಲವೇ ಹೊತ್ತಲ್ಲಿ ಭಾರಿ ಸ್ಟೋಟ.. ಇಡೀ ನಗರಕ್ಕೆ ಆವರಿಸಿತು ಕತ್ತಲು!

ಅಕಾಲಿಕ ಮಳೆ, ಬರಗಾಲ, ಪ್ರಾಕೃತಿಕ ವಿಕೋಷ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇದೆ. ಆಲಿಕಲ್ಲು ಮಳೆ, ಮೀನಿನ ಮಳೆಯಾಗುತ್ತಿದೆ. ಇದು ಸರ್ವನಾಶದ ಮುನ್ಸೂಚನೆ ಎಂದು ನಮ್ಮ ಹಿರಿಯರು ಹೇಳುವುದನ್ನು ನಾವು ಕೇಳಿದ್ದೇವೆ. ಈ ಊಹಾಪೋಹಗಳ ಮಧ್ಯೆಯೇ ಅಮೆರಿಕದಲ್ಲಿ ಆತಂಕಕಾರಿ ಬೆಳವಣಿಗೆಯೊಂದು ನಡೆದಿದೆ. ಆಕಾಶದಿಂದ ಒಂದೇ ಒಂದು ದೊಡ್ಡ ಗಾತ್ರದ ಮೀನು ಬಿದ್ದು, ಇಡೀ ನಗರದಲ್ಲಿ ಕತ್ತಲು ಆವರಿಸಿದೆ.

ಹೌದು, ಅಮೆರಿಕದ ನ್ಯೂಜರ್ಸಿಯಲ್ಲಿ ವಿಚಿತ್ರ ಘಟನೆ ನಡೆದಿದೆ. ನಗರದಲ್ಲಿ ಸಂಜೆ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇಡೀ ನಗರ ಕತ್ತಲಲ್ಲಿ ಮುಳುಗಿದಿದೆ. ಇಡೀ ನಗರದ ಜನರು ಭಯಗೊಂಡಿದ್ದರು. ಇದೇ ವೇಳೆ ಆಗಸದಿಂದ ಮೀನೊಂದು ಬಿದ್ದು ನಗರ ಕತ್ತಲಲ್ಲಿ ಮುಳುಗಿದೆ ಅನ್ನೋ ಸುದ್ದಿ ಹರಿದಾಡಿದೆ. ಇದು ನಿಜ ಕೂಡ. ಆಗಸದಿಂದ ಬಿದ್ದ ಮೀನಿನಿಂದ ನಗರ ಕತ್ತಲಲ್ಲಿ ಆವರಿಸಿದೆ ಎಂದು ನ್ಯೂಜರ್ಸಿ ಕೇಂದ್ರ ವಿದ್ಯುತ್ ಘಟಕದ ಅಧಿಕಾರಿಗಳು ಕೂಡ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಅಂತರ್‌ – ಧರ್ಮೀಯ ಮದುವೆಯಾದ ಮಗ – ಅಪ್ಪನನ್ನೇ ಉಚ್ಚಾಟನೆ ಮಾಡಿದ ಬಿಜೆಪಿ!

ಇಡೀ ನಗರ ಕತ್ತಲಾಗಿದ್ದು ಹೇಗೆ?

ನ್ಯೂಜರ್ಸಿಯ ಸೆಂಟ್ರಲ್ ಎಲೆಕ್ಟ್ರಿಸಿಟಿ ಆ್ಯಂಡ್ ಲೈಟ್ ಘಟಕದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದರು. ನೋಡ ನೋಡುತ್ತಿದ್ದಂತೆ ಆಗಸದಿಂದ ದೊಡ್ಡ ವಸ್ತುವೊಂದು ಭೂಮಿಗೆ ಅಪ್ಪಳಿಸುತ್ತಿರುವ ದೃಶ್ಯ ಕಂಡಿದೆ. ಸಿಬ್ಬಂದಿಯೊರ್ವ ಇದನ್ನು ಗಮನಿಸಿದ್ದಾನೆ. ದಿಟ್ಟಿಸಿ ನೋಡುತ್ತಿದ್ದಂತೆ ಅದು ದೊಡ್ಡ ಗಾತ್ರದ ಮೀನು. ಆಗಸದಿಂದ ಭೂಮಿಯತ್ತ ತೂರಿಬರುತ್ತಿದ್ದ ಮೀನು, ವಿದ್ಯುತ್ ಕೇಂದ್ರ ಘಟಕದ ಮುಖ್ಯ ಟ್ರಾನ್ಸ್‌ಫಾರ್ಮರ್ ಮೇಲೆ ಬಿದ್ದಿದೆ. ಈ ಮೀನು ಬಿದ್ದ ರಭಸದಿಂದ ಟ್ರಾನ್ಸ್‌ಫಾರ್ಮ್‌ ವಿದ್ಯುತ್ ಪ್ರವಹಿಸಿ ಸ್ಫೋಟಗೊಂಡಿದೆ. ಟ್ರಾನ್ಸ್‌ಫಾರ್ಮ್‌ಗೆ ಬಿದ್ದ ಮೀನು ಬಳಿಕ ಅರ್ಧ ಸುಟ್ಟು ಕೆಳಕ್ಕೆ ಬಿದ್ದರೆ, ಇತ್ತ ಮುಖ್ಯ ಟ್ರಾನ್ಸ್‌ಫಾರ್ಮರ್ ಸೇರಿದಂತೆ ಪಕ್ಕದಲ್ಲಿದ್ದ ವೈಯರ್, ಇತರ ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡಿದೆ. ವೈಯರ್‌ಗಳು ಸುಟ್ಟು ಹೋಗಿದೆ. ಈ ಕುರಿತು ನ್ಯೂಜರ್ಸಿ ಪೊಲೀಸ್ ಅದಿಕಾರಿಗಳು ಮಾಡಿದ ಪ್ರಕಟಣೆ ಮತ್ತಷ್ಟು ವೈರಲ್ ಆಗಿದೆ.  ಆಗಸದಿಂದ ಮೀನೊಂದು ಬಿದ್ದು ಟ್ರಾನ್ಸ್‌ಫಾರ್ಮ್ ಸುಟ್ಟು ಹೋಗಿದೆ.

ಮೀನು ಬಂದಿದ್ದು ಎಲ್ಲಿಂದ?

ಅಗಸದಿಂದ ಈ ಮೀನು ಹೇಗೆ ಬಿತ್ತು. ಅಗಸದಿಂದ ಮೀನನ್ನು ಕೆಳಕ್ಕೆ ಎಸೆದವರು ಯಾರು ಎಂಬ ಪ್ರಶ್ನೆಗಳು ಅಧಿಕಾರಿಗಳಲ್ಲಿ ಉದ್ಬವವಾಗಿದೆ. ಬಳಿಕ ಇದಕ್ಕೆ ಪ್ರಶ್ನಿಗೆ ಉತ್ತರವೂ ಸಿಕ್ಕಿದೆ. ಅಗಸದಿಂದ ಮೀನು ಕೆಳಗೆ ಬೀಳುವ ಸಂದರ್ಭದಲ್ಲಿ ದೊಡ್ಡ ಗಿಡುಗವೊಂದು ಹಾರಿಕೊಂಡು ಹೋಗಿದೆ. ಗಿಡುಗ ಮೀನು ಹಿಡಿದು ಹಾರಾಡುವಾಗ ಅದರ ಕಾಲಿನಿಂದ ಜಾರಿ ಟ್ರಾನ್ಸ್‌ಫಾರ್ಮ್ ಮೇಲೆ ಬಿದ್ದಿದೆ. ಹೀಗಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದೀಗ ಮೀನು ಕೆಳಕ್ಕೆ ಬೀಳಿಸಿದ ಗಿಡುಗನಿಗಾಗಿ ಹುಡುಕಾಟ ಆರಂಭಗೊಂಡಿದೆ. ಈ ಗಿಡುಗ ದಕ್ಷಿಣದತ್ತ ಹಾರಿರುವ ಮಾಹಿತಿಯೂ ಲಭ್ಯವಾಗಿದೆ. ಈ ಗಿಡುಗನ ಕುರಿತು ಯಾವುದೇ ಮಾಹಿತಿ ಸಿಕ್ಕರೆ, ನಮ್ಮ ಹಿರಿಯ ಅಧಿಕಾರಿ ಜಾನ್ ಸಿಲ್ವರ್‌ಗೆ ಮಾಹಿತಿ ನೀಡಿ. ಕಾರಣ ಈ ಮೀನಿನ ಪ್ರಕರಣವನ್ನು ಅವರೇ ತನಿಖೆ ಮಾಡುತ್ತಿದ್ದಾರೆ ಎಂದಿದೆ.

ಇದೀಗ ವಿದ್ಯುತ್‌ ದುರಸ್ಥಿ ಕಾರ್ಯಗಳು ನಡೆಯುತ್ತಿದೆ. ಮುಖ್ಯ ಟ್ರಾನ್ಸ್‌ಫಾರ್ಮ್ ಹಾಗೂ ಸಬ್ ಟ್ರಾನ್ಸ್‌ಫಾರ್ಮ್‌ಗಳು ಸುಟ್ಟು ಹೋಗಿರುವ ಕಾರಣ, ಎಲ್ಲಾ ವಿದ್ಯುತ್ ಸಂಪರ್ಕ ಸ್ಥಗಿತಗೊಳಿ ದುರಸ್ಥಿ ಕಾರ್ಯ ನಡೆಸಲಾಗುತ್ತಿದೆ. ಹೀಗಾಗಿ ಅಡಚಣೆಗಾಗಿ ಕ್ಷಮಿಸಿ ಎಂದು ನ್ಯೂಜರ್ಸಿ ವಿದ್ಯುತ್ ಘಟಕದ ಅಧಿಕಾರಿಗಳು ಹೇಳಿದ್ದಾರೆ.

suddiyaana