ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧ – ಚೆನ್ನೈನಿಂದ ಬರಲಿದೆ ರಾಶಿ ರಾಶಿ ಮೀನು..!
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ಮೀನುಗಾರಿಕೆಯೇ ಪ್ರಮುಖ ಉದ್ಯಮ. ಜೊತೆಗೆ ಮೀನು ತಿನ್ನುವವರಿಗೆ ನಿತ್ಯ ಊಟದ ಜೊತೆ ಮೀನು ಬೇಕೇ ಬೇಕು. ಆದರೆ, ಕರಾವಳಿಯಲ್ಲಿ ಈಗ ಮೀನುಗಾರಿಕೆಗೆ ನಿಷೇಧವಿದೆ. ಜಿಲ್ಲೆಗಳಲ್ಲಿ ಜೂನ್ 1ರಿಂದ ಜುಲೈ 31ರವರೆಗೆ ಆಳಸಮುದ್ರ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಮೀನಿನ ದರ ಗಗನಕ್ಕೇರುವ ಸಾಧ್ಯತೆಗಳಿವೆ. ಜೊತೆಗೆ ತಾಜಾ ಮೀನು ಸಿಗುವುದು ಕೂಡಾ ಕಷ್ಟವೇ. ಹೀಗಾಗಿ ಕರಾವಳಿಗೆ ಈಗ ಚೆನ್ನೈನಿಂದ ಮೀನು ಬಂದಿವೆ.
ಇದನ್ನೂ ಓದಿ: ಜೂನ್1ರಿಂದ ಜುಲೈ 31ರವರೆಗೆ ಮೀನು ಹಿಡಿಯುವಂತಿಲ್ಲ..!- ಎರಡು ತಿಂಗಳು ಮೀನುಗಾರಿಕೆಗೆ ನಿಷೇಧ
ಚೆನ್ನೈನಲ್ಲಿ ಎಪ್ರಿಲ್ 15ರಿಂದ ಮೀನುಗಾರಿಕೆಗೆ ನಿಷೇಧವಿದೆ. ಜೂನ್ 15ರಿಂದ ಮೀನುಗಾರಿಕೆ ಪುನರಾರಂಭ ಆಗಬೇಕಿತ್ತು. ಆದರೆ, ಬಿಪರ್‌ಜಾಯ್ ಚಂಡಮಾರುತದ ಹೊಡೆತದ ಹಿನ್ನೆಲೆಯಲ್ಲಿ ಮೀನುಗಾರಿಕೆ ಅಸಾಧ್ಯವಾಗಿತ್ತು. ಎರಡು ತಿಂಗಳುಗಳ ನಿಷೇಧದ ನಂತರ ಆದರೆ, ಈಗ ಚೆನ್ನೈನಲ್ಲಿ ಮೀನುಗಾರಿಕೆ ಆರಂಭವಾಗಿದೆ. ಆಳ ಸಮುದ್ರಕ್ಕೆ ತೆರಳಿದ ಮೀನುಗಾರರು ರಾಶಿ ರಾಶಿ ಮೀನುಗಳೊಂದಿಗೆ ಹಿಂದಿರುಗಿದ್ದಾರೆ. ಈ ಮೀನುಗಳು ಕರಾವಳಿಗೂ ಬರಲಿದೆ. ಜೊತೆಗೆ ನಾಡದೋಣಿ ಮೀನುಗಾರಿಕೆ ಕೂಡಾ ಅಲ್ಲಲ್ಲಿ ಕಂಡು ಬಂದಿದ್ದು, ಮೀನುಪ್ರಿಯರು ಹೇಗಾದರೂ ಮಾಡಿ ಮೀನೂಟ ತಿನ್ನದೆ ಇರುವುದಿಲ್ಲ ಬಿಡಿ.