ಕರ್ನಾಟಕದಲ್ಲಿ ಮೊದಲ ಝೀಕಾ ವೈರಸ್ ಪತ್ತೆ – ರಾಯಚೂರು ಜಿಲ್ಲಾಡಳಿತ ಹೈಅಲರ್ಟ್
ಬೆಂಗಳೂರು : ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಝೀಕಾ ವೈರಸ್ ಪತ್ತೆಯಾಗಿದೆ. ರಾಯಚೂರಿನಲ್ಲಿ ಐದು ವರ್ಷದ ಬಾಲಕಿಗೆ ಝೀಕಾ ಸೋಂಕು ತಗುಲಿರುವುದು ಖಚಿತವಾಗಿದೆ ಅಂತಾ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಕಳೆದ 15 ದಿನಗಳ ಹಿಂದೆ ಜ್ವರ, ವಾಂತಿ ಬೇಧಿಯಿಂದ ಬಾಲಕಿ ಬಳಲುತ್ತಿದ್ದಳು. ಆಕೆಯ ರಕ್ತದ ಸ್ಯಾಂಪಲ್ನ್ನ ಪುಣೆಯ ವೈರಾಲಜಿ ಲ್ಯಾಬ್ಗೆ ಕಳುಹಿಸಲಾಗಿತ್ತು. ಇದೀಗ ಆಕೆಗೆ ಝೀಕಾ ವೈರಸ್ ತಗುಲಿರೊದು ಖಚಿತವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು ಯಾರೂ ಆತಂಕ ಪಡೋ ಅಗತ್ಯ ಇಲ್ಲ ಅಂತಾ ಸಚಿವ ಸುಧಾಕರ್ ಹೇಳಿದ್ದಾರೆ.
ಇದನ್ನೂ ಓದಿ : ರಾಜಕೀಯ ಪಕ್ಷಗಳ ದಲಿತ ಪ್ರೀತಿ – ಕಾವೇರಿದ ಕಾಂಗ್ರೆಸ್ & ಬಿಜೆಪಿ ಟ್ವೀಟ್ ವಾರ್
ರಾಯಚೂರಿನ 5 ವರ್ಷದ ಮಗುವಿಗೆ ನವೆಂಬರ್ 13ರಂದು ಜ್ವರ ಕಾಣಿಸಿಕೊಂಡಿತ್ತು. ಮೊದಲು ಮಗುವಿಗೆ ಡೆಂಘೀ ಲಕ್ಷಣಗಳು ಕಂಡು ಬಂದಿತ್ತು. ಹೀಗಾಗಿ ಮೊದಲು ಸ್ಥಳೀಯ ಆಸ್ಪತ್ರೆಯಲ್ಲಿ ಮಗುವಿನ ತಪಾಸಣೆ ಮಾಡಲಾಗಿತ್ತು. ಇದೀಗ ಮಗುವಿಗೆ ಝೀಕಾ ವೈರಸ್ ತಗುಲಿರೊದು ಖಚಿತವಾಗಿದ್ದು, ಕುಟುಂಬಸ್ಥರಲ್ಲಿ ಐದು ಜನರ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಟೆಸ್ಟ್ಗೆ ಒಳಪಡಿಸಲಾದ ಐದು ಜನರ ವರದಿ ನೆಗೆಟಿವ್ ಬಂದಿದೆ. ಸದ್ಯ ಜಿಲ್ಲಾಡಳಿತ ಈ ವಿಚಾರದಲ್ಲಿ ಹೈ ಅಲರ್ಟ್ ಆಗಿದೆ. ಜೊತೆಗೆ ರಾಯಚೂರು ಹಾಗೂ ನೆರೆ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲು ಸಚಿವ ಸುಧಾಕರ್ ಸೂಚನೆ ನೀಡಿದ್ದಾರೆ.