ಸ್ಮಾರ್ಟ್ ಫೋನ್ ನಿಮ್ಮ ಮಾತು ಕೇಳಿಸಿಕೊಳ್ಳುತ್ತಾ? – ಫೋನ್ ನಲ್ಲಿ ಈ ಸೆಟಿಂಗ್ ಮೊದಲು ಆಫ್ ಮಾಡಿ!
ಸ್ಮಾರ್ಟ್‌ಫೋನ್‌ಗಳು ಇದೀಗ ವಾಯ್ಸ್ ಅಸಿಸ್ಟೆಂಟ್ ಎಐ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿವೆ. ಅದು ನಮ್ಮ ಧ್ವನಿ ಆಜ್ಞೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ನಾವು ಏನು ಕೇಳಿದರೂ ಅದು ಉತ್ತರಿಸುತ್ತದೆ. ಹೀಗೆ ಫೋನ್ ಆಲಿಸುವುದರಿಂದ ನಿಮ್ಮ ಚಟುವಟಿಕೆ ಹಾಗೂ ಗೌಪ್ಯತೆಯೂ ಸ್ಮಾರ್ಟ್ ಫೋನ್ ತಯಾರಕ ಕಂಪನಿಯ ಪಾಲಾಗುತ್ತದೆ. ಹೀಗಾಗಿ ನೀವು ಹೇಳುವ ಎಲ್ಲವನ್ನೂ ನಿಮ್ಮ ಫೋನ್ ಕೇಳಬಾರದು ಅಂತಾದ್ರೆ, ಕೆಲವು ಸೆಟ್ಟಿಂಗ್‌ಗಳನ್ನು ಆನ್ ಮತ್ತು ಆಫ್ ಮಾಡಿದ ನಂತರ, ಈ ಸಮಸ್ಯೆ ಉದ್ಭವಿಸುವುದಿಲ್ಲ.
ಇದನ್ನೂ ಓದಿ:ನಿಮ್ಮ ಫೋನ್ ಚಾರ್ಜರ್ ನ ಕಲರ್ ಚೇಂಜ್ ಆಗಿದ್ಯಾ? – ಚಾರ್ಜರ್ ಬಣ್ಣ ಬದಲಾದ್ರೆ ಏನ್ ಅರ್ಥ?
ನೀವು ಸೆಟ್ಟಿಂಗ್‌ಗಳಿಗೆ ಹೋಗಿ ಗೂಗಲ್ ಅಸಿಸ್ಟೆಂಟ್ ಅನ್ನು ಆಫ್ ಮಾಡಬೇಕು. ಮೊದಲು ಗೂಗಲ್ ಆಯ್ಕೆಯನ್ನು ಟ್ಯಾಪ್ ಮಾಡಿ. ಮುಂದಿನ ಹಂತದಲ್ಲಿ ನೀವು ಖಾತೆ ಮತ್ತು ಗೌಪ್ಯತೆಗೆ ಹೋಗಬೇಕು ಮತ್ತು ಗೂಗಲ್ ಖಾತೆಗೆ ಹೋಗಬೇಕು. ಇದಾದ ಬಳಿಕ ನೀವು ಡೇಟಾ ಮತ್ತು ವೈಯಕ್ತಿಕ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ. ನಿಮ್ಮ ಚಟುವಟಿಕೆ ನಿಯಂತ್ರಣಗಳನ್ನು ನಿರ್ವಹಿಸಿ ಎಂಬ ಆಯ್ಕೆಯು ಅಲ್ಲಿ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡುವ ಮೂಲಕ, ಧ್ವನಿ ಮತ್ತು ಆಡಿಯೊ ಚಟುವಟಿಕೆಯು ಗೋಚರಿಸುತ್ತದೆ, ಅದನ್ನು ಆಫ್ ಮಾಡಿ. ಇದಲ್ಲದೆ, ನೀವು ಗೂಗಲ್ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ಗೂಗಲ್ ಅಸಿಸ್ಟೆಂಟ್ ಅನ್ನು ಸಂಪೂರ್ಣವಾಗಿ ಆಫ್ ಮಾಡಬಹುದು.