ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮೊದಲ ಟೆಸ್ಟ್ ಪಂದ್ಯ – ಸೆಂಚುರಿಯನ್ ಪಿಚ್ ಟೀಮ್ ಇಂಡಿಯಾಕ್ಕೆ ವರವಾಗುತ್ತಾ?

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮೊದಲ ಟೆಸ್ಟ್ ಪಂದ್ಯ – ಸೆಂಚುರಿಯನ್ ಪಿಚ್ ಟೀಮ್ ಇಂಡಿಯಾಕ್ಕೆ ವರವಾಗುತ್ತಾ?

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಟೀಮ್ ಇಂಡಿಯಾ ಬ್ಯಾಟರ್‌ಗಳು ಆಫ್ರಿಕಾದ ಸವಾಲಿಗೆ ಸಜ್ಜಾಗುತ್ತಿದ್ದಾರೆ. ಸೆಂಚುರಿಯನ್‌ನಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ಸೂಪರ್​​ ಸ್ಪೋರ್ಟ್ ಪಾರ್ಕ್ ಸ್ಟೇಡಿಯಂನಲ್ಲಿ ಫಸ್ಟ್ ಟೆಸ್ಟ್ ನಡೀತಿದೆ. ಇಲ್ಲಿನ ಪಿಚ್ ಹೇಗಿದೆ? ಏನೆಲ್ಲಾ ಚಾಲೆಂಜಸ್​​ಗಳು ಎದುರಾಗಬಹುದು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರುತುರಾಜ್ ಪ್ಲೇಸ್​ಗೆ ಮತ್ತೊಬ್ಬ ಬ್ಯಾಟ್ಸ್​ಮನ್! – ಮೂವರು ಬ್ಯಾಟ್ಸ್​​ಮನ್​ಗಳ ಪೈಕಿ ಯಾರನ್ನು ಆಯ್ಕೆ ಮಾಡ್ತಾರೆ ರೋಹಿತ್ ಶರ್ಮಾ?  

ಭಾರತ – ದಕ್ಷಿಣ ಆಫ್ರಿಕಾ ನಡುವಿನ ಫಸ್ಟ್ ಟೆಸ್ಟ್​ ಮ್ಯಾಚ್ ನಡೀತಿರೋ ಸೆಂಚೂರಿಯನ್ ಗ್ರೌಂಡ್​ನ ಪಿಚ್​ನ್ನ ಪೇಸ್ ಬೌಲರ್ಸ್​ಗಳು ನಿಜಕ್ಕೂ ಎಂಜಾಯ್ ಮಾಡಲಿದ್ದಾರೆ. ಸೌತ್ ಆಫ್ರಿಕಾ ಮತ್ತು ಟೀಂ ಇಂಡಿಯಾ ಎರಡೂ ತಂಡದ ಫಾಸ್ಟ್ ಬೌಲರ್ಸ್​ಗಳಿಗೆ ಈ ಪಿಚ್ ಫೇವರೇಟ್ ಆಗಬಹುದು. ಯಾಕಂದ್ರೆ ಇದು ಪೇಸ್ ಮತ್ತು ಬೌನ್ಸಿ ಪಿಚ್ ಆಗಿದ್ದು, ಬ್ಯಾಟ್ಸ್​​ಮನ್​​ಗಳಿಗೆ ನಿಜಕ್ಕೂ ಚಾಲೆಂಜಿಂಗ್ ಆಗಿರಲಿದೆ. ಬಟ್ ಹೇಳಿಕೊಳ್ಳುವಷ್ಟು ಸ್ವಿಂಗ್ ಆಗೋದಿಲ್ಲ. ಇಂಗ್ಲೆಂಡ್​, ಆಸ್ಟ್ರೇಲಿಯಾ ಪಿಚ್​​ಗಳಂತೆ ಇಲ್ಲಿ ಬಾಲ್ ಹೆಚ್ಚು ಸ್ವಿಂಗ್ ಆಗಲ್ಲ. ಸೌತ್ ಆಫ್ರಿಕಾ ಪರ ಕಗಿಸೊ ರಬಾಡ, ಲುಂಗಿ ನಿಂಗಿಡಿ ಮತ್ತು ಮಾರ್ಕೊ ಜಾನ್ಸನ್ ಭಾರತೀಯ ಬ್ಯಾಟ್ಸ್​​ಮನ್​ಗಳನ್ನ ಅಗ್ನಿಪರೀಕ್ಷೆಗೆ ಒಳಪಡಿಸಲಿದ್ದಾರೆ. ಇನ್ನು ಟೀಂ ಇಂಡಿಯಾದ ಪರ ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್​ಗೆ ಈ ಪಿಚ್ ಬೆನಿಫಿಟ್ ಆಗಬಹುದು. ಆದ್ರೆ ಟೀಂ ಇಂಡಿಯಾ ಇಲ್ಲಿ ನಿಜಕ್ಕೂ ಮಿಸ್ ಮಾಡಿಕೊಳ್ತಾ ಇರೋದು ಮೊಹಮ್ಮದ್ ಶಮಿಯನ್ನ. ಆ್ಯಕ್ಚುವಲಿ ಶಮಿಗೆ ಇದು ಹೇಳಿ ಮಾಡಿಸಿದಂಥಾ ಪಿಚ್. ಇಲ್ಲಿ ಬಾಲ್ ಹೆಚ್ಚು ಸ್ವಿಂಗ್ ಆಗಲ್ಲವಾದ್ರಿಂದ ಶಮಿಯಂಥಾ ಸೀಮ್ ಬೌಲರ್ಸ್​ಗೆ ತುಂಬಾನೆ ಅಡ್ವಾಂಟೇಜ್ ಇದೆ. ಆದ್ರೆ ಶಮಿ ಈ ಮ್ಯಾಚ್​​ನ್ನ ಆಡ್ತಿಲ್ಲ. ಹೀಗಾಗಿ ಟೀಂ ಇಂಡಿಯಾಗಂತೂ ಇದು ದೊಡ್ಡ ಲಾಸ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಮ್ಯಾಚ್​ನ ಫಸ್ಟ್ ಮತ್ತು ಸೆಕೆಂಡ್ ಡೇಯಂತೂ ಯಾರೇ ಫಸ್ಟ್ ಬ್ಯಾಟಿಂಗ್ ಮಾಡಿದ್ರೂ ತುಂಬಾ ಕೇರ್​ಫುಲ್ ಆಗಿ ಆಡಬೇಕಾಗುತ್ತೆ. ಬಾಲ್ ಹೆಚ್ಚು ಪೇಸ್ ಮತ್ತು ಎಕ್ಸ್​ಟ್ರಾ ಬೌನ್ಸ್ ಆಗೋದ್ರಿಂದ ಬ್ಯಾಟ್ಸ್​ಮನ್​ಗಳು ಆರಂಭದಲ್ಲಿ ಹೆಚ್ಚಿನ ಬಾಲ್​ನ್ನ ಬೀಟ್ ಮಾಡಬಹುದು. ಜೊತೆಗೆ ಡಿಫೆನ್ಸ್ ಮಾಡ್ತಾ ಇರಬಹುದು. ಬಾಲ್​ ಹಳೆಯದಾದ ಮೇಲೆ ನಂತರ ಬ್ಯಾಟ್ಸ್​​ಮನ್​ಗಳಿಗೂ ಸ್ಕೋರ್ ಮಾಡಲು ಸಹಾಯವಾಗಲಿದೆ.

ಇನ್ನು ಟಾಸ್ ವಿಚಾರ ಅಷ್ಟೊಂದು ಮಹತ್ವ ಪಡೆಯುವುದಿಲ್ಲ. ಇದುವರೆಗೆ ಸೆಂಚೂರಿಯನ್ ಗ್ರೌಂಡ್​ನಲ್ಲಿ ಒಟ್ಟು 28 ಟೆಸ್ಟ್ ಮ್ಯಾಚ್​ಗಳಾಗಿದ್ದು, ಫಸ್ಟ್​ ಬ್ಯಾಟಿಂಗ್ ಮಾಡಿದ ಟೀಮ್ 13 ಪಂದ್ಯಗಳನ್ನ ಗೆದ್ದಿದೆ. ಫಸ್ಟ್ ಬೌಲಿಂಗ್ ಮಾಡಿದ ಟೀಂ 11 ಮ್ಯಾಚ್​ಗಳನ್ನ ಗೆದ್ದಿದೆ. ಫಸ್ಟ್ ಇನ್ನಿಂಗ್ಸ್ ಎವರೇಜ್ ಸ್ಕೋರ್ 329 ರನ್. ಇನ್ನು ಟೀಂ ಇಂಡಿಯಾ ಇದುವರೆಗೆ ದಕ್ಷಿಣ ಆಫ್ರಿಕಾದಲ್ಲಿ 23 ಟೆಸ್ಟ್ ಮ್ಯಾಚ್​ಗಳನ್ನಾಡಿದೆ. ಆದ್ರೆ ಗೆದ್ದಿರೋದು ಕೇವಲ 4 ಪಂದ್ಯಗಳನ್ನ ಮಾತ್ರ. ಆದ್ರೆ 2021ರಲ್ಲಿ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಟೂರ್ ಕೈಗೊಂಡಿದ್ದಾಗ ಇದೇ ಗ್ರೌಂಡ್​ನಲ್ಲಿ ನಡೆದ ಮ್ಯಾಚ್​ನ್ನ ಭಾರತ ಗೆದ್ದಿತ್ತು.

 

Sulekha