ವಿಶಾಖಪಟ್ಟಣಂ ಮೈದಾನದಲ್ಲಿ ಮೊದಲ ಟಿ20 ಪಂದ್ಯ – ಫೈನಲ್ ಪಂದ್ಯದ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ಟೀಮ್ ಇಂಡಿಯಾ?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನವೆಂಬರ್ 23 ರಂದು ಆರಂಭವಾಗಲಿದೆ. ವಿಶಾಖಪಟ್ಟಣಂ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟಿ-20 ಮ್ಯಾಚ್ ನಡೀತಿರೋ ವಿಶಾಖಪಟ್ಟಣಂ ಗ್ರೌಂಡ್ನ ಪಿಚ್ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸೆಂಚೂರಿಗಾಗಿ ಸ್ವಾರ್ಥಿಯಾದರಾ ವಿರಾಟ್ ಕೊಹ್ಲಿ?- SELFISH ಟ್ಯಾಗ್‌ಲೈನ್ ಕೊಹ್ಲಿಗೆ ಯಾಕೆ?
2023ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳುವ ಇರಾದೆಯೊಂದಿಗೆ ಟೀಂ ಇಂಡಿಯಾ ಅಖಾಡಕ್ಕಿಳಿಯಲ್ಲಿದೆ. ವಿಶಾಖಪಟ್ಟಣಂ ಮೈದಾನದಲ್ಲಿ ಪಂದ್ಯ ನಡೆಯಲಿದೆ.
ವಿಶಾಖಪಟ್ಟಣಂ ಮೈದಾನದ ಪಿಚ್ ಯಾವಾಗಲೂ ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎಂದು ಪರಿಗಣಿಸಲ್ಪಟ್ಟಿದೆ. ಇಲ್ಲಿ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ರನ್ ಗಳಿಸುತ್ತಾರೆ. ಹೀಗಿರುವಾಗ ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಹೆಚ್ಚಿನ ಸ್ಕೋರಿಂಗ್ ಕಾಣಬಹುದಾಗಿದೆ. ಎರಡೂ ತಂಡಗಳು ಅಂತಹ ಆಟಗಾರರನ್ನು ಹೊಂದಿದ್ದು, ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮಥ್ಯ್ರವನ್ನು ಉಭಯ ತಂಡಗಳ ಆಟಗಾರರು ಹೊಂದಿದ್ದಾರೆ.
ಪಿಚ್ ಮತ್ತು ಟಾಸ್ ಗೆಲ್ಲೋದು ಎಷ್ಟು ಇಂಪಾರ್ಟೆಂಟ್ ಅನ್ನೋದು ವರ್ಲ್ಡ್ಕಪ್ ಫೈನಲ್ನಲ್ಲಿ ಮತ್ತೊಮ್ಮೆ ಸ್ಪಷ್ಟವಾಗಿದೆ. ವಿಶಾಖಪಟ್ಟಣಂನದ್ದು ಅತ್ಯಂತ ಬ್ಯಾಲೆನ್ಸ್ಡ್ ಪಿಚ್. ಟಿ-20ಯಲ್ಲಿ ಕಳೆದ ಮ್ಯಾಚ್ಗಳಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಮ್ನ ಎವರೇಜ್ ಸ್ಕೋರ್ 132 ರನ್. ಹೀಗಾಗಿ ಈ ಪಿಚ್‌ನಲ್ಲಿ 160 ರನ್ ಉತ್ತಮ ಸ್ಕೋರ್ ಆಗಲಿದೆ. ಇಲ್ಲಿ ಟಾಸ್ ಗೆದ್ರೆ ಮೊದಲು ಬೌಲಿಂಗ್ ಮಾಡೋದು ಬೆಸ್ಟ್ ಆಪ್ಷನ್. ಯಾಕಂದ್ರೆ, ಚೇಸಿಂಗ್ ಮಾಡಿದವರ ವಿನ್ನಿಂಗ್ ಪರ್ಸೆಂಟೇಜ್ 67ರಷ್ಟಿದೆ. ಚೇಸಿಂಗ್ ಮಾಡಿದ ತಂಡವೇ ಹೆಚ್ಚಿನ ಪಂದ್ಯಗಳನ್ನ ಗೆದ್ದುಕೊಂಡಿದೆ. ಇನ್ನು ಬೌಲಿಂಗ್ ವಿಚಾರಕ್ಕೆ ಬರೋದಾದ್ರೆ, ಸ್ಪಿನ್ ಮತ್ತು ಪೇಸ್ ಬೌಲರ್ಸ್ಗಳಿಗೆ ಈ ಪಿಚ್ ಸಹಕಾರಿಯಾಗಿದೆ. ಟೋಟಲಿ ಇದೊಂದು ಬ್ಯಾಲೆನ್ಸ್ಟ್ ಪಿಚ್. ಬ್ಯಾಟ್ಸ್‌ಮನ್‌ಗಳು ಈ ಪಿಚ್‌ನಲ್ಲಿ ಎಚ್ಚರಿಕೆಯಿಂದ ಆಡಬೇಕು ಅಷ್ಟೇ.