ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ-20 ಪಂದ್ಯ – ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾದ ಕ್ಯಾಪ್ಟನ್

ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ-20 ಪಂದ್ಯ – ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾದ ಕ್ಯಾಪ್ಟನ್

ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್​​ ಮ್ಯಾಚ್​ನಲ್ಲಿ ಸೋತಿದ್ದಾಯ್ತು. ಈಗ ಟಿ-20 ಸೀರಿಸ್ ಶುರುವಾಗ್ತಿದೆ. ವಿಶಾಖಪಟ್ಟಣದಲ್ಲಿ ಫಸ್ಟ್​ ಮ್ಯಾಚ್​ ನಡೀತಿದೆ. ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿದ್ದಾರೆ. ವರ್ಲ್ಡ್​ಕಪ್​ನಲ್ಲಾಡಿದ ಬಹುತೇಕ ಎಲ್ಲಾ ಸೀನಿಯರ್ಸ್​ಗಳಿಗೂ ರೆಸ್ಟ್ ನೀಡಿ ಯಂಗ್​ಸ್ಟರ್ಸ್​ಗಳನ್ನೇ ಆಸ್ಟ್ರೇಲಿಯಾ ವಿರುದ್ಧ ಅಖಾಡಕ್ಕಿಳಿಸಲಾಗುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ-20 ಮ್ಯಾಚ್​​ ಕುರಿತು ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸೆಂಚೂರಿಗಾಗಿ ಸ್ವಾರ್ಥಿಯಾದರಾ ವಿರಾಟ್ ಕೊಹ್ಲಿ?- SELFISH ಟ್ಯಾಗ್‌ಲೈನ್ ಕೊಹ್ಲಿಗೆ ಯಾಕೆ?

ಟೀಂ ಇಂಡಿಯಾದ ಕ್ಯಾಪ್ಟನ್ ಆಗಿ ಸೂರ್ಯಕುಮಾರ್​ಗೆ ಇದು ಮೊದಲ ಮ್ಯಾಚ್. ಸೂರ್ಯಕುಮಾರ್​ಗೆ ಈಗ ಕ್ಯಾಪ್ಟನ್ಸಿ ಟೆಸ್ಟ್ ನಡೀತಿದೆ. ಅದು ಕೂಡ ಆಸ್ಟ್ರೇಲಿಯಾ ಟೀಂ ವಿರುದ್ಧ. ಈ ಸೀರಿಸ್ ಸೂರ್ಯಕುಮಾರ್ ಕ್ರಿಕೆಟ್ ಭವಿಷ್ಯದ ಪಾಲಿಗೆ ತುಂಬಾನೆ ಇಂಪಾರ್ಟೆಂಟ್ ಆಗಲಿದೆ. ಅತ್ತ ಮ್ಯಾಥ್ಯೂ ವೇಡ್ ಆಸ್ಟ್ರೇಲಿಯಾ ಟೀಂನ್ನ ಲೀಡ್ ಮಾಡ್ತಿದ್ದಾರೆ. ಸುಮಾರು ಒಂದು ವರ್ಷಗಳ ಬಳಿಕ ಮ್ಯಾಥ್ಯೂ ವೇಡ್ ಇಂಟರ್​ನ್ಯಾಷನಲ್ ಸೀರಿಸ್ ಆಡ್ತಿದ್ದಾರೆ.

ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ಟಿ-20ಯಲ್ಲಿ ಎಷ್ಟು ಬಾರಿ ಮುಖಾಮುಖಿಯಾಗಿವೆ. ಎರಡೂ ಟೀಂಗಳ ಟ್ರ್ಯಾಕ್ ರೆಕಾರ್ಡ್ ಏನು ಅನ್ನೋ ಬಗ್ಗೆಯೂ ಒಂದಷ್ಟು ಮಾಹಿತಿ ಇಲ್ಲಿದೆ.

  • ಭಾರತ-ಆಸ್ಟ್ರೇಲಿಯಾ 26 ಬಾರಿ ಮುಖಾಮುಖಿ
  • 15 ಮ್ಯಾಚ್​ಗಳಲ್ಲಿ ಟೀಂ ಇಂಡಿಯಾ ಗೆದ್ದಿದೆ
  • 10 ಮ್ಯಾಚ್​ಗಳಲ್ಲಿ ಆಸ್ಟ್ರೇಲಿಯಾ ಗೆಲುವು ದಾಖಲಿಸಿದೆ
  • ಭಾರತ-ಆಸ್ಟ್ರೇಲಿಯಾ ಮಧ್ಯೆ ಕಳೆದ 5 ಟಿ-20 ಮ್ಯಾಚ್​ಗಳಲ್ಲಿ
  • 3 ಮ್ಯಾಚ್​ಗಳನ್ನ ಭಾರತ ಗೆದ್ದಿದೆ, 2 ಮ್ಯಾಚ್​ಗಳನ್ನ ಆಸೀಸ್ ಗೆದ್ದಿದೆ

 

ಹೀಗಾಗಿ ಟ್ರ್ಯಾಕ್​ರೆಕಾರ್ಡ್​ ತೆಗೆದು ನೋಡಿದ್ರೆ ಟೀಂ ಇಂಡಿಯಾವೇ ಫೇವರೇಟ್ ಅಂತಾನೆ ಹೇಳಬಹುದು. ಆದ್ರೆ ಕ್ರಿಕೆಟ್​​ನಲ್ಲಿ ಯಾವಾಗ ಏನಾಗುತ್ತೆ ಅಂತಾ ಹೇಳೋಕೆ ಸಾಧ್ಯವೇ ಇಲ್ಲ. ಅದು ಕೂಟ ಆಸ್ಟ್ರೇಲಿಯಾ ಟೀಂನಂಥಾ ಎದುರಾಳಿ ಇರೋವಾಗ. ಹಾಗಿದ್ರೆ ಆಸ್ಟ್ರೇಲಿಯಾ ವಿರುದ್ಧದ ಫಸ್ಟ್ ಟಿ-20 ಮ್ಯಾಚ್​​ಗೆ ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿದೆ ಅನ್ನೋದನ್ನು ನೋಡೋಣ.

ಟೀಂ ಇಂಡಿಯಾ PLAYING-11?

  • ಯಶಸ್ವಿ ಜೈಸ್ವಾಲ್
  • ರುತುರಾಜ್ ಗಾಯಕ್ವಾಡ್
  • ಇಶಾನ್ ಕಿಶನ್
  • ಸೂರ್ಯಕುಮಾರ್ ಯಾದವ್
  • ತಿಲಕ್ ವರ್ಮಾ
  • ರಿಂಕು ಸಿಂಗ್
  • ಶಿವಮ್ ದುಬೆ
  • ವಾಷಿಂಗ್ಟನ್ ಸುಂದರ್
  • ರವಿ ಬಿಷ್ಣೋಯಿ
  • ಅರ್ಶ್​ದೀಪ್ ಸಿಂಗ್
  • ಪ್ರಸಿಧ್ ಕೃಷ್ಣ

ಇದು ಆಸ್ಟ್ರೇಲಿಯಾ ವಿರುದ್ಧಧ ಫಸ್ಟ್ ಟಿ-20 ಮ್ಯಾಚ್​​ಗೆ ಟೀಂ ಇಂಡಿಯಾದ ಸಂಭ್ಯಾವ್ಯ ತಂಡ. ಈ ಮ್ಯಾಚ್​​ನ ಸೆಂಟರ್ ಆಫ್ ಅಟ್ರಾಕ್ಷನ್ ಅಂದ್ರೆ ರಿಂಕು ಸಿಂಗ್. ಈ ಹಿಂದೆ ಐರ್ಲೆಂಡ್​ ವಿರುದ್ಧದ ಸೀರಿಸ್​​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ರಿಂಕು ಸಿಂಗ್ ಡೆಬ್ಯೂ ಮಾಡಿದ್ರು. ಇದಾದ ಬಳಿಕ ಈಗ ಆಸ್ಟ್ರೇಲಿಯಾ ವಿರುದ್ಧ ಅತ್ಯಂತ ಇಂಪಾರ್ಟೆಂಟ್ ಸೀರಿಸ್​ನಲ್ಲಿ ಆಡ್ತಿದ್ದಾರೆ. ಈಗ ನಿಜವಾಗಿಯೂ ರಿಂಕು ಸಿಂಗ್​ಗೆ ಅಗ್ನಿಪರೀಕ್ಷೆಯಾಗಲಿದೆ. ರಿಂಕು ಈಗಾಗ್ಲೇ ಟಿ-20 ಸ್ಪೆಷಲಿಸ್ಟ್ ಅಂತಾ ಗುರುತಿಸಿಕೊಂಡಿದ್ದಾರೆ. ಪಿನಿಷರ್​ ರೋಲ್​ನ್ನ ನಿಭಾಯಿಸ್ತಾ ಇದ್ದಾರೆ. ಈ ಸೀರಿಸ್​​ನಲ್ಲಿ ರಿಂಕು ಸಿಂಗ್ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ರೆ, ಟಿ-20 ಟೀಂನಲ್ಲಿ ಪರ್ಮನೆಂಟ್ ಸ್ಥಾನ ಪಡೆದುಕೊಳ್ಳೋದು ಅಲ್​ಮೋಸ್ಟ್ ಗ್ಯಾರಂಟಿ. 2024ರಲ್ಲಿ ನಡೆಯುವ ಟಿ-20 ವರ್ಲ್ಡ್​​ಕಪ್​​ನಲ್ಲಿ ರಿಂಕು ಸಿಂಗ್​​ನಂಥಾ ಪ್ಲೇಯರ್​ನ ಅವಶ್ಯಕತೆ ಟೀಂ ಇಂಡಿಯಾಗೆ ಇದೆ.

ಇನ್ನು ವರ್ಲ್ಡ್​ಕಪ್ ಚಾಂಪಿಯನ್ಸ್ ಆಸ್ಟ್ರೇಲಿಯಾ ಟೀಂ ಬಗ್ಗೆಯೂ ಒಂದಷ್ಟು ಹೇಳಲೇಬೇಕು. ಸದ್ಯ ಮಾರಲಿ ಟೀಂ ಇಂಡಿಯಾಗಿಂತ ಆಸ್ಟ್ರೇಲಿಯಾವೇ ಸ್ಟ್ರಾಂಗ್ ಟೀಂ. ಯಾಕಂದ್ರೆ ಈಗಷ್ಟೇ ವರ್ಲ್ಡ್​ಕಪ್​ ಗೆದ್ದಿದ್ದಾರೆ. ಹೀಗಾಗಿ ಆಸ್ಟ್ರೇಲಿಯನ್ ಪ್ಲೇಯರ್ಸ್​ಗಳ ಎನರ್ಜಿಯೇ ಈಗ ಡಿಫರೆಂಟ್ ಲೆವೆಲ್​​ನಲ್ಲಿರುತ್ತೆ. ಇನ್ನೊಂದು ವಿಚಾರ ಏನಂದ್ರೆ, ವರ್ಲ್ಡ್​ಕಪ್​ ವಿನ್ನಿಂಗ್ ಟೀಂನಲ್ಲಿದ್ದವರು ಕೂಡ ಈ ಟಿ-20 ಸೀರಿಸ್​ನಲ್ಲಿ ಆಡ್ತಿದ್ದಾರೆ. ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್​ವೆಲ್, ಮಾರ್ಕಸ್ ಸ್ಟೋನಿಸ್ ಮತ್ತು ಆ್ಯಡಮ್ ಜಾಂಪಾ ಈಗ ಟಿ-20ಯಲ್ಲೂ ಆಡ್ತಾರೆ. ಅದ್ರಲ್ಲೂ ಟ್ರಾವಿಸ್ ಹೆಡ್​ ವರ್ಲ್ಡ್​​ಕಪ್​​ ಫೈನಲ್​ನಲ್ಲಿ 140 ಕೋಟಿ ಭಾರತೀಯ ಕನಸನ್ನ ನುಚ್ಚು ನೂರು ಮಾಡಿದ್ದು ಹೇಗೆ ಅನ್ನೋದನ್ನ ಬಿಡಿಸಿ ಹೇಳಬೇಕಾದ ಅವಶ್ಯಕತೆಯೇ ಇಲ್ಲ ಬಿಡಿ. ಇನ್ನು ಗ್ಲೆನ್ ಮ್ಯಾಕ್ಸ್​​ವೆಲ್ ಬಗ್ಗೆಯಂತೂ ಹೇಳೋದೆ ಬೇಕಾಗಿಲ್ಲ. ಎಲ್ಲರೂ ಚಾಂಪಿಯನ್​ ಪ್ಲೇಯರ್ಸ್​ಗಳೇ. ಆದ್ರೆ ಟೀಂ ಇಂಡಿಯಾದ ಟಿ-20 ಸ್ಕ್ವಾಡ್​​ನಲ್ಲಿರುವ ಬಹುತೇಕ ಮಂದಿ ವರ್ಲ್ಡ್​​ಕಪ್​​ನಲ್ಲಿ ಆಡಿಲ್ಲ. ಸೂರ್ಯಕುಮಾರ್ ಯಾದವ್ ಬಿಟ್ರೆ ಮತ್ತಿನ್ಯಾರಿಗೂ ಚಾನ್ಸ್​ ಸಿಕ್ಕಿರಲಿಲ್ಲ. ಇಶಾನ್ ಕಿಶನ್ ಮತ್ತು ಪ್ರಸಿಧ್ ಕೃಷ್ಣ ಟೀಂನಲ್ಲಿದ್ರಷ್ಟೇ. ಒಂದೇ ಒಂದು ಮ್ಯಾಚ್ ಆಡಿರಲಿಲ್ಲ. ಹೀಗಾಗಿ ವರ್ಲ್ಡ್​ಕಪ್​ ವಿನ್ನಿಂಗ್ ಮೆಂಬರ್ಸ್​ಗಳನ್ನ ಹೊಂದಿರುವ ಆಸ್ಟ್ರೇಲಿಯಾ ಟೀಂ ಜೊತೆಗೆ ನಮ್ಮ ಯಂಗ್ ಟೀಂ ಯಾವ ರೀತಿ ಪರ್ಫಾಮ್ ಮಾಡುತ್ತೆ ಅನ್ನೋದನ್ನ ನೋಡಬೇಕಿದೆ.

Sulekha