ಟೀಂ ಇಂಡಿಯಾದ 5 ಆಟಗಾರರಿಗೆ ಮೊದಲ ಪಿಂಕ್ ಬಾಲ್ ಟೆಸ್ಟ್ – ಕೆ.ಎಲ್ ರಾಹುಲ್‌ಗಾಗಿ ರೋಹಿತ್ ಶರ್ಮಾ ಸ್ಥಾನ ತ್ಯಾಗ

ಟೀಂ ಇಂಡಿಯಾದ 5 ಆಟಗಾರರಿಗೆ ಮೊದಲ ಪಿಂಕ್ ಬಾಲ್ ಟೆಸ್ಟ್ – ಕೆ.ಎಲ್ ರಾಹುಲ್‌ಗಾಗಿ ರೋಹಿತ್ ಶರ್ಮಾ ಸ್ಥಾನ ತ್ಯಾಗ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊದಲ ಮ್ಯಾಚ್ ಗೆದ್ದು ಬೀಗಿರೋ ಟೀಂ ಇಂಡಿಯಾ ಎರಡನೇ ಫೈಟ್​ಗೆ ರೆಡಿಯಾಗಿದೆ. ಮತ್ತೊಂದೆಡೆ ತವರಿನಲ್ಲೇ ಮುಖಭಂಗ ಅನುಭವಿಸಿರೋ ಆಸ್ಟ್ರೇಲಿಯಾ ಕೂಡ ಕಮ್ ಬ್ಯಾಕ್ ಮಾಡೋ ಜೋಶ್​ನಲ್ಲಿದೆ. ಈ ಪಂದ್ಯ ಡೇ ಌಂಡ್ ನೈಟ್ ಮ್ಯಾಚ್ ಆಗಿರೋದ್ರಿಂದ ತುಂಬಾನೇ ಸ್ಪೆಷಲ್ ಆಗಿದೆ. ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿರೋ ಉಭಯ ತಂಡಗಳು ಭರ್ಜರಿ ಸ್ಟ್ರಾಟರ್ಜಿಯನ್ನೇ ಮಾಡಿವೆ. ಪ್ಲೇಯಿಂಗ್ 11ನಲ್ಲಿ ಒಂದಷ್ಟು ಬದಲಾವಣೆಗಳೂ ಆಗಲಿವೆ. ಸೋ ಏನೆಲ್ಲಾ ಚೇಂಜಸ್ ಆಗಲಿದೆ? ಭಾರತದ ಪರ ಯಾರೆಲ್ಲಾ ಕಣಕ್ಕಿಳಿಯಲಿದ್ದಾರೆ? ಆಸ್ಟ್ರೇಲಿಯಾ ಮಾಡಿರೋ ಗೇಮ್ ಪ್ಲ್ಯಾನ್ ಏನು? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪಾಕ್ ನಲ್ಲಿ 3 ತಂಡ.. 7 ಸೂತ್ರ!.. ಗೇಟ್ ಪಾಸ್ ಸ್ಟ್ರಾಟಜಿ ವರ್ಕೌಟ್ – ಅದಲಿ ಬದಲಿ ಆಟ ಬಿರುಗಾಳಿ ಎಬ್ಬಿಸ್ತಾ?

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 5 ಪಂದ್ಯಗಳ ಪೈಕಿ ಮೊದಲನೇ ಪಂದ್ಯವನ್ನ ಗೆದ್ದು ಭಾರತ ತಂಡ ಮುನ್ನಡೆ ಸಾಧಿಸಿದೆ. ಇದೀಗ ಸೆಕೆಂಡ್ ಮ್ಯಾಚ್ ಡಿಸೆಂಬರ್ 6ರಿಂದ ಶುರುವಾಗಲಿದೆ. ಅಡಿಲೇಡ್​​ನಲ್ಲಿ ನಡೆಯಲಿರುವ ಈ ಪಂದ್ಯ ಎರಡೂ ತಂಡಗಳಿಗೂ ತುಂಬಾನೇ ಮಹತ್ವದ್ದಾಗಿದೆ. ಸೋ ಎರಡೂ ತಂಡಗಳು ಬಲಿಷ್ಠ ಪ್ಲೇಯಿಂಗ್ 11 ಕಣಕ್ಕಿಳಿಸಲಿವೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಮೇಲೆ ಕಣ್ಣಿಟ್ಟಿರೋ ಭಾರತ ಈ ಪಂದ್ಯಕ್ಕೂ ಮುನ್ನ ತಂಡದಲ್ಲಿ ಎರಡು ಬದಲಾವಣೆ ಮಾಡಲಿದೆ.

ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ 2 ಬದಲಾವಣೆಗಳನ್ನ ಮಾಡಲಿದೆ. ಪರ್ತ್ ಟೆಸ್ಟ್ ಪಂದ್ಯಕ್ಕೆ ಗೈರಾಗಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಯಂಗ್ ಬ್ಯಾಟರ್ ಶುಭ್​ಮನ್ ಗಿಲ್ ಸೆಕೆಂಡ್ ಟೆಸ್ಟ್ ಪಂದ್ಯ ಆಡಲಿದ್ದಾರೆ. ಹೀಗಾಗಿ ಪ್ಲೇಯಿಂಗ್ 11ನಿಂದ ಇಬ್ಬರನ್ನ ಡ್ರಾಪ್ ಮಾಡಲಾಗುತ್ತೆ. ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ದೇವದತ್ ಪಡಿಕ್ಕಲ್ ಹಾಗೂ ಧ್ರುವ್ ಜುರೇಲ್ ಅಡಿಲೇಡ್ ಟೆಸ್ಟ್ ಪಂದ್ಯದಿಂದ ಹೊರಬೀಳಲಿದ್ದಾರೆ. ಇವರಿಬ್ಬರ ಸ್ಥಾನಗಳಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ರಿಪ್ಲೇಸ್ ಆಗಲಿದ್ದಾರೆ.

ಫಸ್ಟ್ ಮ್ಯಾಚ್​ನಲ್ಲಿ ರೋಹಿತ್ ಆಬ್ಸೆನ್ಸ್​ನಲ್ಲಿ ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ಕನ್ನಡಿಗ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿದ್ರು. ಬಟ್ ಸೆಕೆಂಡ್ ಮ್ಯಾಚ್​ನಲ್ಲಿ ಓಪನರ್ಸ್ ಆಗಿ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಮೂರನೇ ಕ್ರಮಾಂಕದಲ್ಲಿ ಶುಭ್​ಮನ್ ಗಿಲ್ ಆಡಿದರೆ, ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಬೀಸಲಿದ್ದಾರೆ. ಇನ್ನು ಐದನೇ ಸ್ಲಾಟ್​ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮತ್ತು ಆರನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಮೈದಾನಕ್ಕಿಳಿಯಲಿದ್ದಾರೆ.  ಆಲ್​ರೌಂಡರ್ ಗಳಾಗಿ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ಗೆ ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚು. ಇನ್ನು ವೇಗಿಗಳಾಗಿ ಜಸ್​ಪ್ರೀತ್ ಬುಮ್ರಾ ಜೊತೆ ಮೊಹಮ್ಮದ್ ಸಿರಾಜ್ ಹಾಗೂ ಹರ್ಷಿತ್ ರಾಣಾ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆಯಲಿದ್ದಾರೆ. ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಈ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. ಸೋ ಫೈನಲ್ಲಾಗಿ ಸೆಕೆಂಡ್ ಪಂದ್ಯಕ್ಕೆ ರೋಹಿತ್ ಶರ್ಮಾ,  ಯಶಸ್ವಿ ಜೈಸ್ವಾಲ್ , ಶುಭ್​​ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆಎಲ್ ರಾಹುಲ್, ಧ್ರುವ್ ಜುರೆಲ್ , ನಿತೀಶ್ ರೆಡ್ಡಿ , ವಾಷಿಂಗ್ಟನ್ ಸುಂದರ್ , ಹರ್ಷಿತ್ ರಾಣಾ , ಜಸ್​​ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್ ಪ್ಲೇಯಿಂಗ್ 11ನಲ್ಲಿ ಕಣಕ್ಕಿಳಿಯಬಹುದು.

ಅಷ್ಟಕ್ಕೂ ಡೇ-ಆಂಡ್‌ ನೈಟ್‌ ಟೆಸ್ಟ್ ಮ್ಯಾಚ್​ಗಳಿಗೆ ದೊಡ್ಡ ಇತಿಹಾಸವೇನೂ ಇಲ್ಲ. 2015ರಲ್ಲಿ ಟೆಸ್ಟ್‌ ಮ್ಯಾಚ್ ಆರಂಭಿಸಲಾಗಿತ್ತು. ಟೆಸ್ಟ್‌ ಕ್ರಿಕೆಟ್​ಗೆ ಉತ್ತೇಜಿಸಲು ಈ ಪ್ರಯೋಗ ಮಾಡಲಾಯಿತು. ಮೊದಲ ಪಿಂಕ್ ಬಾಲ್‌ ಟೆಸ್ಟ್‌ನಲ್ಲಿ ಆಸೀಸ್ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಿದ್ದವು. ಭಾರತ ಸಹ ನಾಲ್ಕು ಡೇ ಆಂಡ್‌ ನೈಟ್‌ ಟೆಸ್ಟ್‌ ಆಡಿದೆ. ಹಾಗೇ ನೋಡಿದ್ರೆ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಆಸೀಸ್‌ ಹೆಚ್ಚು ಪಂದ್ಯಗಳನ್ನು ಆಡಿದೆ., ಗೆಲುವಿನ ಶೇಕಡಾವಾರು ಸಹ ಹೆಚ್ಚಾಗಿದೆ. ಅಲ್ದೇ ಟೀಮ್ ಇಂಡಿಯಾದ ಐವರು ಆಟಗಾರರಿಗೆ ಆಡಿಲೇಡ್‌ನಲ್ಲಿ ನಡೆಯಲಿರುವ ಡೇ ಆಂಡ್‌ ನೈಟ್ ಟೆಸ್ಟ್‌ ಮೊದಲ ಅನುಭವ. ಮೊಹಮ್ಮದ್ ಸಿರಾಜ್‌, ಕೆಎಲ್ ರಾಹುಲ್ ಸಹ ಇನ್ನೂವರೆಗೂ ಒಂದೇ ಒಂದು ಡೇ-ಆಂಡ್ ನೈಟ್‌ ಟೆಸ್ಟ್‌ ಪಂದ್ಯವನ್ನು ಆಡಿಲ್ಲ. ಹೀಗಾಗಿ ಈ ಆಟಗಾರರಿಗೆ ಇದು ಹೊಸ ಅನುಭವ ಆಗಿರಲಿದೆ.  ಇನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡುವ ಅವಕಾಶವನ್ನು ಪಡೆದಿರುವ ನಿತೀಶ್ ಕುಮಾರ್ ರೆಡ್ಡಿ ಹಾಗೂ ಹರ್ಷಿತ್ ರಾಣಾ ಅವರಿಗೂ ಹೊಸ ಅನುಭವ. ಭಾರತ ತಂಡದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಭರವಸೆ ಮೂಡಿಸಿರುವ ಆಟಗಾರ ಯಶಸ್ವಿ ಜೈಸ್ವಾಲ್‌ ಗೂ ಇದು ಮೊದಲ ಡೇ-ಆಂಡ್ ನೈಟ್‌ ಟೆಸ್ಟ್‌.

ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಹಿನ್ನೆಲೆಯಲ್ಲಿ ಈ ಸರಣಿ ಉಭಯ ತಂಡಗಳಿಗೂ ಮಹತ್ವದಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದೆ. ಇನ್ನು ಆಸೀಸ್‌ ಸಹ ಎರಡನೇ ಟೆಸ್ಟ್‌ ಗೆದ್ದು ಗೆಲುವಿನ ಟ್ರ್ಯಾಕ್‌ಗೆ ಮರಳಲು ಸಕಲ ರೀತಿಯಲ್ಲಿ ಸಿದ್ಧವಾಗಿದೆ. ಇದ್ರ ನಡುವೆಯೇ ಅಡಿಲೇಡ್​ನ ಓವಲ್ ಮೈದಾನದಲ್ಲಿ ಶುಕ್ರವಾರದಿಂದ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡ ಪ್ಲೇಯಿಂಗ್ ಇಲೆವೆನ್ ಘೋಷಿಸಿದೆ. ಟೆಸ್ಟ್ ಕ್ರಿಕೆಟ್ ನ ಇತಿಹಾಸದಲ್ಲಿ ಈವರೆಗೂ 23 ಬಾರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳು ನಡೆದಿದ್ದು ಆಸ್ಟ್ರೇಲಿಯಾ ಒಟ್ಟು 12 ಪಿಂಕ್ ಬಾಲ್ ಹಗಲು ರಾತ್ರಿ ಪಂದ್ಯಗಳನ್ನು ಆಡಿದ್ದು ಅದರಲ್ಲಿ 11ರಲ್ಲಿ ಜಯಿಸಿದ ದಾಖಲೆ ಹೊಂದಿದೆ. ಇಷ್ಟು ಪಂದ್ಯಗಳನ್ನು ಯಾರೂ ಗೆದ್ದ ಉದಾಹರಣೆಯಿಲ್ಲ. ಅಲ್ದೇ 2022ರ ಪ್ರವಾಸದ ವೇಳೆ ಭಾರತ ಅಡಿಲೇಡ್ ನಲ್ಲಿ ದ್ವಿತೀಯ ಇನ್ನಿಂಗ್ಸ್ ನಲ್ಲಿ ಕೇವಲ 36 ರನ್ ಗಳಿಗೆ ಆಲೌಟ್ ಆಗಿತ್ತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಮೊತ್ತವಾಗಿದ್ದು, ಇಂತಹ ಕೆಟ್ಟ ದಾಖಲೆ ಭಾರತ ತಂಡದ ಹೆಸರಿನಲ್ಲಿ ಇದೆ. ಹೀಗಾಗಿ ಆಡಿಲೇನ್​ನಲ್ಲಿ ಭಾರತ ಮತ್ತದೇ ಕಳಪೆ ಪ್ರದರ್ಶನ ನೀಡುತ್ತಾ ಅನ್ನೋ ಆತಂಕವೂ ಇದೆ.

suddiyaana