ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಮೊದಲ ಪಂದ್ಯ – ಬ್ಯಾಟ್ಸ್‌ಮನ್‌ಗಳಿಗೆ ಸಹಕಾರಿಯಾಗುತ್ತಾ ಪಿಚ್?

ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಮೊದಲ ಪಂದ್ಯ – ಬ್ಯಾಟ್ಸ್‌ಮನ್‌ಗಳಿಗೆ ಸಹಕಾರಿಯಾಗುತ್ತಾ ಪಿಚ್?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಗುರುವಾರ, ಜನವರಿ 11 ರಂದು ನಡೆಯಲಿದೆ. ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಮೊಹಾಲಿಯ ಐಎಸ್ ಬಿಂದ್ರಾ ಕ್ರಿಕೆಟ್ ಸ್ಟೇಡಿಯಂನಲ್ಲಿರುವ ಪಿಚ್ ಬ್ಯಾಟ್ಸಮನ್‌ಗಳಿಗೆ ಸಹಾಯಕವಾಗಿದೆ. ಬೌನ್ಸಿ ಪಿಚ್‌ನಿಂದಾಗಿ ಬ್ಯಾಟರ್‌ಗಳಿಗೆ ಇಲ್ಲಿ ಆಡಲು ತುಂಬಾ ಸುಲಭವಾಗುತ್ತದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ರಿಜೆಕ್ಟ್ ಮಾಡಿದ್ದು ಕೊಹ್ಲಿ? – ವಿರಾಟ್ ಕೊಹ್ಲಿಗಾಗಿ ರೋಹಿತ್ ಶರ್ಮಾ ಬ್ಯಾಟಿಂಗ್ ? – ಇದಪ್ಪಾ ಸ್ನೇಹ ಅಂದ್ರೆ..!

ಅಫ್ಘಾನಿಸ್ತಾನ ವಿರುದ್ಧದ ಈ ಟಿ20 ಸರಣಿಯ ಮೊದಲ ಪಂದ್ಯ ಪಂಜಾಬ್‌ನ ಮೊಹಾಲಿಯಲ್ಲಿರುವ ಸ್ಟೇಡಿಯಂನಲ್ಲಿ ನಡೀತಾ ಇದೆ. ಇದು ಕಂಪ್ಲೀಟ್ ಬ್ಯಾಟಿಂಗ್ ಪಿಚ್. ಬ್ಯಾಟ್ಸ್‌ಮನ್‌ಗಳ ಪಾಲಿನ ಸ್ವರ್ಗ ಅಂತಾನೆ ಹೇಳಬಹುದು. ಹಾಗಂತಾ ಬೌಲರ್ಸ್ಗಳು ಸ್ವಲ್ಪವೂ ಫೇವರ್ ಆಗಿಲ್ಲ ಅಂತೇನಲ್ಲ. ಆರಂಭದಲ್ಲಿ ಪೇಸ್ ಬೌಲರ್ಸ್ಗಳಿಗೆ ಸ್ವಲ್ಪ ಹೆಲ್ಪ್ ಆಗಬಹುದು. ಮ್ಯಾಚ್ ಕಂಟಿನ್ಯೂ ಆದಂತೆ ಬಳಿಕ ಸ್ಪಿನ್ನರ್ಸ್ಗಳಿಗೂ ಒಂದಷ್ಟು ಅಡ್ವಾಂಟೇಜ್ ಸಿಗಬಹುದು. ಆದ್ರೆ ಈ ಗ್ರೌಂಡ್ನಲ್ಲಿ ಒಂದು ಚಾಲೆಂಜ್ ಇದೆ. ಅದು ಡ್ಯೂ ಫ್ಯಾಕ್ಟರ್.

ಮ್ಯಾಚ್ ಶುರುವಾಗೋದೆ ರಾತ್ರಿ 7 ಗಂಟೆಗೆ. ಆಗಲೇ ಡ್ಯೂ ಇರುತ್ತೆ. ಸೆಕೆಂಡ್ ಇನ್ನಿಂಗ್ಸ್ ವೇಳೆಗಂತೂ ಕೇಳೋದೇ ಬೇಡ. ಸೋ ಡ್ಯೂ ಇದ್ದಾಗ ಬೌಲರ್ಸ್ಗಳು ನಿಜಕ್ಕೂ ಅಗ್ನಿಪರೀಕ್ಷೆಗೆ ಒಳಗಾಗ್ತಾರೆ. ಈ ಮ್ಯಾಚ್ನಲ್ಲಿ ಟಾಸ್ ಕೂಡ ಮ್ಯಾಟರ್ ಆಗುತ್ತೆ. ಟಾಸ್ ಗೆದ್ರೆ ಮೊದಲು ಬ್ಯಾಲಿಂಗ್ ಮಾಡೋದೆ ಬೆಸ್ಟ್ ಆಪ್ಷನ್. ಯಾಕಂದ್ರೆ ಸ್ಟಾರ್ಟಿಂಗ್ನಲ್ಲಿ ಡ್ಯೂ ಪ್ರಮಾಣ ಸ್ವಲ್ಪ ಕಡಿಮೆ ಇರುತ್ತೆ. ಸೋ ಸ್ವಲ್ಪ ಎಫೆಕ್ಟಿವ್ ಆಗಿ ಬೌಲಿಂಗ್ ಮಾಡಬಹುದು. ಹಾಗೆಯೇ ಚೇಸಿಂಗ್ ಮಾಡಿದ ತಂಡವೇ ಇಲ್ಲಿ ಹೆಚ್ಚಿನ ಮ್ಯಾಚ್ಗಳನ್ನ ಗೆದ್ದಿರೋದು. ಹಾಗಿದ್ರೆ ಮೊಹಾಲಿ ಪಿಚ್ ಟ್ರ್ಯಾಕ್ ರೆಕಾರ್ಡ್ ಹೇಗಿದೆ ಅನ್ನೋದನ್ನ ಕೂಡ ನೋಡೋಣ.

ಮೊಹಾಲಿ ಟ್ರ್ಯಾಕ್ ರೆಕಾರ್ಡ್

ಮೊಹಾಲಿಯಲ್ಲಿ ಒಟ್ಟು 6 ಟಿ-20 ಮ್ಯಾಚ್‌ಗಳಾಗಿವೆ. ಫಸ್ಟ್ ಬ್ಯಾಟಿಂಗ್ ಮಾಡಿದ ಟೀಂ 2 ಮ್ಯಾಚ್ ಗೆದ್ದಿದೆ ಚೇಸಿಂಗ್ ಮಾಡಿದ ತಂಡ 4 ಮ್ಯಾಚ್‌ಗಳನ್ನು ಗೆದ್ದಿದೆ. ಮೊಹಾಲಿಯಲ್ಲಿ ಹೈಯೆಸ್ಟ್ ಸ್ಕೋರ್ 211 ರನ್ 2022ರಲ್ಲಿ 209 ರನ್ ಚೇಸ್ ಮಾಡಿ ಆಸ್ಟ್ರೇಲಿಯಾ ಗೆದ್ದಿತ್ತು. ಫಸ್ಟ್ ಇನ್ನಿಂಗ್ಸ್ ಎವರೇಜ್ ಸ್ಕೋರ್ 183 ರನ್ ಹೀಗಾಗಿ ಫಸ್ಟ್ ಬ್ಯಾಟಿಂಗ್ ಮಾಡೋ ಟೀಮ್ ದೊಡ್ಡ ಮೊತ್ತದ ಸ್ಕೋರ್ ಗಳಿಸಲೇಬೇಕು. 200ಕ್ಕೂ ಹೆಚ್ಚು ರನ್ ಮಾಡ್ಲೇಬೇಕಿದೆ. ಅಫ್ಘಾನಿಸ್ತಾನ ಟೀಂ ಅಂತಾ ಡಿ ಗ್ರೇಡ್ ಮಾಡೋ ಹಾಗೂ ಇಲ್ಲ. ಯಾಕಂದ್ರೆ ಏಕದಿನ ವಿಶ್ವಕಪ್‌ನಲ್ಲಿ ಅವರು ಯಾವ ರೀತಿ ಪರ್ಫಾಮ್ ಮಾಡಿದ್ರು ಅನ್ನೋದು ಎಲ್ಲರಿಗೂ ಗೊತ್ತು.

Sulekha