‘ಮೈ ಅಟಲ್ ಹು’ ಚಿತ್ರದ ಫಸ್ಟ್ ಲುಕ್ ಬಿಡುಗಡೆ – ಅಭಿಮಾನಿಗಳ ಮನಗೆದ್ದ ಪಂಕಜ್ ತ್ರಿಪಾಠಿ

‘ಮೈ ಅಟಲ್ ಹು’ ಚಿತ್ರದ ಫಸ್ಟ್ ಲುಕ್ ಬಿಡುಗಡೆ – ಅಭಿಮಾನಿಗಳ ಮನಗೆದ್ದ ಪಂಕಜ್ ತ್ರಿಪಾಠಿ

‘ಮೈ ಅಟಲ್ ಹು’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಯೋಪಿಕ್ ಚಿತ್ರ ‘ಮೈ ಅಟಲ್ ಹು’ ಸದ್ಯದಲ್ಲೇ ತೆರೆ ಮೇಲೆ ಬರಲಿದೆ. ವಾಜಪೇಯಿ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ನಟಿಸಿದ್ದಾರೆ. ವಾಜಪೇಯಿ ಅವರ ಜನ್ಮ ದಿನದ ಪ್ರಯುಕ್ತ ಡಿಸೆಂಬರ್ 25ರಂದು ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಲಾಗಿದೆ. ‘ಮೈ ಅಟಲ್ ಹು’ ಚಿತ್ರವನ್ನು ರವಿ ಜಾಧವ್ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ:   ತೆರೆ ಮೇಲೆ ಮ್ಯಾಜಿಕ್ ಮಾಡದ ‘ಸರ್ಕಸ್’- ರಣ್‌ವೀರ್ ಸಿಂಗ್ ಅಭಿಮಾನಿಗಳಿಗೆ ನಿರಾಶೆ

ರಾಜಕೀಯ ಜೀವನದಲ್ಲಿ ಮೇರು ವ್ಯಕ್ತಿತ್ವ ಹೊಂದಿದವರು ಅಟಲ್ ಬಿಹಾರಿ ವಾಜಪೇಯಿ. ಇವರ ವ್ಯಕ್ತಿತ್ವ ಕೋಟ್ಯಂತರ ಜನರಿಗೆ ಮಾದರಿಯಾಗಿದೆ. ಇದೀಗ ವಾಜಪೇಯಿಯವರ ಜೀವನಾಧಾರಿತ ಸಿನಿಮಾ ಬರುತ್ತಿದ್ದು, ವಾಜಪೇಯಿ ಪಾತ್ರಕ್ಕೆ ನಟ ಪಂಕಜ್ ತ್ರಿಪಾಠಿ ಜೀವತುಂಬಿದ್ದಾರೆ. ವಾಜಪೇಯಿ ಅವರು ಕೇವಲ ರಾಜಕಾರಣಿ ಆಗಿರಲಿಲ್ಲ. ಕವಿಯೂ ಹೌದು. ಅಟಲ್ ಅವರ ವಿಶೇಷ ವ್ಯಕ್ತಿತ್ವ ತೋರಿಸುವ ಪ್ರಯತ್ನವನ್ನು ‘ಮೈ ಅಟಲ್ ಹು’ ಸಿನಿಮಾದಲ್ಲಿ ಮಾಡಲಾಗಿದೆ. ಸದ್ಯ ಚಿತ್ರದಲ್ಲಿನ ಪಂಕಜ್ ತ್ರಿಪಾಠಿ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರದ ಪೋಸ್ಟರ್ ನೋಡಿದವರು, ವಾಜಪೇಯಿ ಪಾತ್ರಕ್ಕೆ ಇವರೇ ಸೂಕ್ತ ವ್ಯಕ್ತಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ನಟ ಪಂಕಜ್ ಅವರ ಲುಕ್ ಅಭಿಮಾನಿಗಳ ಮನಗೆದ್ದಿದೆ.

suddiyaana