ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿಅಕ್ಷಯ್ ಕುಮಾರ್ – ಮರಾಠಿ ಸಿನಿಮಾದ ಫಸ್ಟ್ ಲುಕ್ ರಿಲೀಸ್

ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿಅಕ್ಷಯ್ ಕುಮಾರ್  – ಮರಾಠಿ ಸಿನಿಮಾದ ಫಸ್ಟ್ ಲುಕ್ ರಿಲೀಸ್

ಬಾಲಿವುಡ್‌ನಲ್ಲಿ ಸತತ ಸೋಲು ಕಂಡ ಬಳಿಕ ನಟ ಅಕ್ಷಯ್‌ಕುಮಾರ್ , ಮರಾಠಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ ವರ್ಷ ಅಕ್ಷಯ್ ಕುಮಾರ್ ಸಿನಿಮಾಗಳು ಹೇಳುವಂತಾ ಯಶಸ್ಸು ತಂದುಕೊಟ್ಟಿರಲಿಲ್ಲ. ಇದರ ಮಧ್ಯೆ ಮರಾಠಿ ಭಾಷೆಯ ಸಿನಿಮಾವೊಂದರಲ್ಲಿ ಬಾಲಿವುಡ್‌ನ ಲಕ್ಕಿ ಮ್ಯಾನ್ ಅಕ್ಕಿ ಬಾಯ್ ಸ್ಪೆಷಲ್ ರೋಲ್‌ನಲ್ಲಿ ಮಿಂಚಲಿದ್ದಾರೆ. ಮೊದಲ ಬಾರಿಗೆ ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟ ಅಕ್ಷಯ್ ಕುಮಾರ್ , ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಫಸ್ಟ್ ಲುಕ್ ರಿಲೀಸ್ ಆಗಿದೆ.

ಇದನ್ನೂ ಓದಿ :  ಸ್ಟೈಲ್ ಕಿಂಗ್ ಬರ್ತ್ ಡೇಗೆ ಸ್ಪೆಷಲ್ ಗಿಫ್ಟ್ – ರಜನಿಕಾಂತ್ ನಟನೆಯ ‘ಬಾಬಾ’ ಮರು ಬಿಡುಗಡೆ

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಟಿಸುತ್ತಿರುವ ಮರಾಠಿಯ ಹೊಸ ಚಿತ್ರಕ್ಕೆ ವೇಡಾತ್ ಮರಾಠೆ ವೀರ್ ದೌಡಲೆ ಸಾತ್ ಎಂದು ಹೆಸರಿಡಲಾಗಿದೆ.  ಇದು ಅಕ್ಷಯ್ ವೃತ್ತಿಜೀವನದ ವಿಭಿನ್ನ ರೀತಿಯ ಸಿನಿಮಾ. ಮಹೇಶ್ ಮಂಜ್ರೇಕರ್ ನಿರ್ದೇಶನದ ಈ ಸಿನಿಮಾದ ಚಿತ್ರೀಕರಣದಲ್ಲಿ ಅಕ್ಷಯ್ ಕುಮಾರ್ ಭಾಗಿಯಾಗಿದ್ದು, ಫಸ್ಟ್ ಲುಕ್  ನ್ನು ಬಿಡುಗಡೆ ಮಾಡಲಾಗಿದೆ. ಅಕ್ಷಯ್ ಕುಮಾರ್ ಕೂಡಾ ತನ್ನ ಫಸ್ಟ್ ಲುಕ್‌ನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಈ ಪಾತ್ರ ಸಿಕ್ಕಿರುವುದು ನನ್ನ ಸೌಭಾಗ್ಯ. ಶಿವಾಜಿ ಮಹಾರಾಜ್ ಅವರ ಜೀವನದಿಂದ ನಾನು ಸ್ಪೂರ್ತಿ ಪಡೆದಿದ್ದೇನೆ. ನಿಮ್ಮ ಶುಭ ಹಾರೈಕೆ ಇರಲಿ ಎಂದಿದ್ದಾರೆ.  ಶಿವಾಜಿ ಮಹಾರಾಜರ ಫೋಟೋ ಮುಂದೆ ಕೈ ಮುಗಿದಿರುವ ಫೋಟೋ ಹಾಗೂ ಛತ್ರಪತಿ ಶಿವಾಜಿಯಾಗಿ ನಡೆದುಕೊಂಡು ಬರುತ್ತಿರುವ ಲುಕ್ ಅಭಿಮಾನಿಗಳ ಮನಗೆದ್ದಿದೆ. ವಸೀಮ್ ಖುರೇಷಿ ನಿರ್ಮಾಣದ ಈ ಚಿತ್ರ ಮರಾಠಿ ಮತ್ತು ಹಿಂದಿ ಜೊತೆಗೆ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ತೆರೆ ಕಾಣಲಿದೆ. ಈ ಸಿನಿಮಾ 2023ರ ದೀಪಾವಳಿಯಂದು ತೆರೆಗೆ ಬರಲಿದೆ.

suddiyaana