ಬೋಳುತಲೆ ಅಂತಾ ಕೆಲಸದಿಂದ ವಜಾಗೊಳಿಸಿದ ಬಾಸ್ – ಉದ್ಯೋಗಿ ಮಾಡಿದ್ದೇನು ಗೊತ್ತಾ?

ಬೋಳುತಲೆ ಅಂತಾ ಕೆಲಸದಿಂದ ವಜಾಗೊಳಿಸಿದ ಬಾಸ್ – ಉದ್ಯೋಗಿ ಮಾಡಿದ್ದೇನು ಗೊತ್ತಾ?

ಕಂಪನಿಗಳಲ್ಲಿ ಉದ್ಯೋಗಿಗಳನ್ನು ತೆಗೆದು ಹಾಕಲು ಇಂತಹದ್ದೇ ಕಾರಣ ಬೇಕೆಂದಿಲ್ಲ. ಕೆಲವರು ಸರಿಯಾಗಿ ಕೆಲಸ ಮಾಡಿಲ್ಲ, ಉದ್ಯೋಗಿಯ ನಡತೆ ಸರಿ ಇಲ್ಲ. ಆತ ಬಾಸ್ ಹೇಳಿದ ರೀತಿ ನಡೆದುಕೊಳ್ಳುತ್ತಿಲ್ಲ ಅಂತಾ ಕೆಲಸದಿಂದ ವಜಾಗೊಳಿಸಲಾಗುತ್ತದೆ. ಇನ್ನೂ ಕೆಲ ಕಂಪನಿಗಳಲ್ಲಿ ನಷ್ಟ ಅಂತಾ ಈಗಾಗಲೇ ಸಾವಿರಾರು ಜನರನ್ನು ಉದ್ಯೋಗದಿಂದ ಕಡಿತಗೊಳಿಸಲಾಗಿದೆ. ಇದೀಗ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಉದ್ಯೋಗಿಗೆ ಬೋಳುತಲೆ ಇದೆ ಎಂದು ಆತನನ್ನು ಕಂಪನಿಯಿಂದ ಕಿಕ್ ಔಟ್ ಮಾಡಲಾಗಿದ್ಯಂತೆ.

ಇದನ್ನೂ ಓದಿ: ಪ್ರವಾಸಕ್ಕೆ ಕರೆದೊಯ್ದು ಪ್ರೇಯಸಿಯನ್ನೇ ಕೊಂದ ಪಾಪಿ – ಬಗೆದಷ್ಟೂ ಬಯಲಾಗ್ತಿದೆ ಕೊಲೆ ರಹಸ್ಯ..!

ಇತ್ತೀಚಿನ ದಿನಗಳಲ್ಲಿ ಬೋಳುತಲೆ ಎಂಬುವುದು ಎಲ್ಲರಿಗೂ ತಲೆನೋವಾಗಿ ಪರಿಣಮಿಸಿದೆ.  ಬೋಳುತಲೆಯಿಂದ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಅನ್ನೋದು ಹಲವರ ಗೋಳಾಗಿದೆ. ಇದರಿಂದಾಗಿ ಕೆಲವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದನ್ನು ಕೇಳಿದ್ದೇವೆ. ಇದೀಗ ಇಂಗ್ಲೆಂಡಿನ ವ್ಯಕ್ತಿಯೊಬ್ಬನಿಗೆ ಬೋಳುತಲೆ ಇದೆಯೆಂದು ಆತನ ಬಾಸ್ ಕೆಲಸದಿಂದ ವಜಾ ಮಾಡಿದ್ದಾರಂತೆ!

ಹೌದು, ಬ್ರಿಟನ್ ನ ಮಾರ್ಕ್ ಜೋನ್ಸ್ ಎಂಬಾತನಿಗೆ ತಲೆಯಲ್ಲಿ ಸ್ವಲ್ಪವೂ ಕೂದಲಿಲ್ಲ. ಇದು ಆತನ ವೃತ್ತಿ ಜೀವನಕ್ಕೆ  ಶಾಪವಾಗಿ ಪರಿಣಮಿಸಿದೆ. ಈತನ ಮೇಲೆ ಕಂಪನಿ ಬಾಸ್ ಫಿಲಿಪ್ ಗೆ ಏನು ಕೋಪ ಇತ್ತೋ ಗೊತ್ತಿಲ್ಲ. ಹಾಗಾಗಿ ತನ್ನ ಟೀಮ್ ಯಂಗ್ ಆ್ಯಂಡ್ ಆ್ಯಕ್ಟೀವ್ ಆಗಿರಬೇಕು. 50 ವರ್ಷ ಮೇಲ್ಪಟ್ಟ ಬೋಳು ಉದ್ಯೋಗಿಗಳು ತಮ್ಮ ತಂಡದಲ್ಲಿ ಇರಬಾರದು ಎಂದು ಈ ಆದೇಶ ಹೊರಡಿಸಿದ್ದನಂತೆ. ಬಾಸ್‌ನ ಈ ನಿರ್ಧಾರದಿಂದಾಗಿ ಜೋನ್ಸ್ ತನ್ನ ಕೆಲಸವನ್ನು ಕಳೆದುಕೊಂಡಿದ್ದಾನೆ.

ಈ ಘಟನೆಯಿಂದಾಗಿ ಮಾರ್ಕ್ ಜೋನ್ಸ್ ಕುಗ್ಗದೆ, ಬಾಸ್ ನಿರ್ಧಾರಕ್ಕೆ ಕೋಪಗೊಂಡಿದ್ದಾನೆ. ಇದೇ ಕಾರಣ ಮುಂದಿಟ್ಟುಕೊಂಡು ಕಾನೂನು ಹೋರಾಟ ಆರಂಭಿಸಿದ್ದಾನೆ. ಕೂಡಲೇ ಆತನ ಕಂಪನಿ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದಾನೆ.

ಈ ಕುರಿತು ಇತ್ತೀಚೆಗೆ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ಮಾರ್ಕ್ ಜೋನ್ಸ್ ಪರ ತೀರ್ಪು ನೀಡಿದೆ! ತಾರತಮ್ಯದ ನೀತಿ ಅನುಸರಿಸಲಾಗಿದ್ದು, ಸಕಾರಣವಿಲ್ಲದೆ ಜೋನ್ಸ್ ಅವರನ್ನು ವಜಾ ಮಾಡಲಾಗಿದೆ ಎಂದು ನ್ಯಾಯಾಲಯವು ತೀರ್ಮಾನಿಸಿದೆ. ಅಲ್ಲದೇ ಕಂಪನಿಗೆ ಭಾರಿ ದಂಡವನ್ನು ವಿಧಿಸಲಾಗಿದೆಯಂತೆ.

ಈ ಕಂಪನಿಗೆ ದಂಡ ವಿಧಿಸಿದ್ದು, ಒಂದೆರಡು ಸಾವಿರ ರೂಪಾಯಿ ಅಲ್ಲ. ಬರೋಬ್ಬರಿ 71 ಸಾವಿರ ಪೌಂಡ್. ಅಂದರೆ ನಮ್ಮ ಕರೆನ್ಸಿಯಲ್ಲಿ ಆ ಉದ್ಯೋಗಿಗೆ ರೂ. 71 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಆ ಮೊತ್ತವನ್ನು ಕಂಪನಿಯೇ ಈಗ ಪಾವತಿಸಬೇಕಾಗಿದೆ.

ಒಟ್ಟಾರೆ ಮಾರ್ಕ್ ಜೋನ್ಸ್ ಗೆ ತನ್ನ ಬೊಕ್ಕತಲೆ ಶಾಪವೋ ವರವೋ ಗೊತ್ತಿಲ್ಲ. ಅಷ್ಟೋ, ಇಷ್ಟೋ ಸಂಬಳ ನೀಡುತ್ತಿದ್ದ ಕಂಪನಿ ತನ್ನ ಈ ನಿರ್ಧಾರದಿಂದ ದೊಡ್ಡ ಮೊತ್ತದ ಬೆಲೆಯನ್ನೇ ಕಟ್ಟಬೇಕಾಯ್ತು.

suddiyaana