ಪ್ರಭಾಸ್ ನಟನೆಯ ಸ್ಪಿರಿಟ್ ಸಿನಿಮಾ ಸೆಟ್‌ನಲ್ಲಿ ಬೆಂಕಿ – ಅಗ್ನಿಅವಘಡದಲ್ಲಿ ಚಿತ್ರತಂಡದ ಹಲವರಿಗೆ ಗಾಯ

ಪ್ರಭಾಸ್ ನಟನೆಯ ಸ್ಪಿರಿಟ್ ಸಿನಿಮಾ ಸೆಟ್‌ನಲ್ಲಿ ಬೆಂಕಿ – ಅಗ್ನಿಅವಘಡದಲ್ಲಿ ಚಿತ್ರತಂಡದ ಹಲವರಿಗೆ ಗಾಯ

ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಸ್ಪಿರಿಟ್ ಸಿನಿಮಾ ಸೆಟ್‌ನಲ್ಲಿ ಅವಘಡ ಸಂಭವಿಸಿದೆ. ಸಿನಿಮಾ ಸೆಟ್‌ ಗೆ ಬೆಂಕಿ ತಗುಲಿದ್ದು, ಚಿತ್ರತಂಡದ ಹಲವರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಅತ್ಯುತ್ತಮ ಸಿನಿಮಾ ಕಾಂತಾರ, ನಟ ರಿಷಭ್ ಶೆಟ್ಟಿ – ರಶ್ಮಿಕಾಗೂ ಅವಾರ್ಡ್, ಮಿರಾಯಿ ಸಿನಿಮಾಗೂ ಪ್ರಶಸ್ತಿಯ ಗರಿ

ತೆಲುಗಿನ ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್ ಸಿನಿಮಾ ಸೆಟ್​​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ಸಂದರ್ಭದಲ್ಲಿ ಚಿತ್ರತಂಡದ ಕೆಲವರಿಗೆ ಬೆಂಕಿ ತಗುಲಿದ್ದು, ಕೆಲವರು ಗಾಯಗೊಂಡಿದ್ದಾರೆ. ಸಿನಿಮಾದ ಚಿತ್ರೀಕರಣ ಹೈದರಾಬಾದ್​​ನಲ್ಲಿ ನಡೆಯುತ್ತಿತ್ತು. ಹೈದರಾಬಾದ್​​ನ ಸೆಟ್​​ನಲ್ಲಿ ಈ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್​​ನಿಂದ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಸಿನಿಮಾದ ಸಿಬ್ಬಂದಿಗಾಗಿ ಹಾಕಲಾಗಿದ್ದ ಸೆಟ್​​ ಸಂಪೂರ್ಮ ಸುಟ್ಟ ಹೋಗಿದೆ. ಸಿನಿಮಾ ತಂಡದ ಕೆಲವು ವಸ್ತುಗಳು ಅಗ್ನಿಗೆ ಆಹುತಿಯಾಗಿವೆ.

ಈ ಬೆಂಕಿ ಅನಾಹುತದಲ್ಲಿ ಚಿತ್ರತಂಡದ ಕೆಲವರಿಗೆ ಸುಟ್ಟ ಗಾಯಗಳಾಗಿದೆ. ಈ ಘಟನೆ ನಡೆದಾಗ ನಟ ಪ್ರಭಾಸ್ ಅವರು ಸೆಟ್​​ನಲ್ಲಿ ಇರಲಿಲ್ಲ ಎನ್ನಲಾಗುತ್ತಿದೆ. ಶುಕ್ರವಾರ ಬೆಳಗ್ಗೆ (ಏಪ್ರಿಲ್ 10) ಈ ಘಟನೆ ನಡೆದಿದೆ. ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾದ ಸೆಟ್​ಗೂ ಸಹ ಬೆಂಕಿ ತಗುಲಿತ್ತು. ‘ಆದಿಪುರುಷ್’ ಸಿನಿಮಾಕ್ಕಾಗಿ ಮುಂಬೈನಲ್ಲಿ ಭಾರಿ ದೊಡ್ಡ ಸೆಟ್ ನಿರ್ಮಾಣ ಮಾಡಲಾಗಿತ್ತು. ಆದರೆ ಇಡೀ ಸೆಟ್ ಬೆಂಕಿಗೆ ಆಹುತಿಯಾಯ್ತು. ನಂತರ ಸಿನಿಮಾ ಬಿಡುಗಡೆ ಆದ ಬಳಿಕ ದೊಡ್ಡ ಫ್ಲಾಪ್ ಆಯ್ತು. ಇದೀಗ ‘ಸ್ಪಿರಿಟ್’ ಸಿನಿಮಾದ ಸೆಟ್​​ಗೂ ಬೆಂಕಿ ಬಿದ್ದಿರುವುದು ಪ್ರಭಾಸ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಗುರುವಾರವಷ್ಟೇ ಸಂದೀಪ್ ರೆಡ್ಡಿ ವಂಗಾ ತಮ್ಮ ಸಿನಿಮಾ ಸ್ಪಿರಿಟ್ ಬಗ್ಗೆ ಮಾತನಾಡಿದ್ದರು. ಸಿನಿಮಾದ ಚಿತ್ರೀಕರಣ ಬೇಗನೆ ಸಾಗುತ್ತಿದ್ದು, ಬೇಗನೆ ಚಿತ್ರೀಕರಣ ಮುಗಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಅಷ್ಟರಲ್ಲೇ ಈ ದುರ್ಘಟನೆ ನಡೆದಿದೆ.

Sulekha