SRH ತಂಡಕ್ಕೆ ಬಿಗ್‌ ಶಾಕ್‌ – ಆಟಗಾರರು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ

SRH ತಂಡಕ್ಕೆ ಬಿಗ್‌ ಶಾಕ್‌ – ಆಟಗಾರರು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ

ದೇಶದಲ್ಲಿ ಐಪಿಎಲ್‌ ಫಿವರ್‌ ಜೋರಾಗಿದೆ. ಯಾವ ತಂಡ ಫೈನಲ್‌ ಗೆ ತಲುಪಲಿದೆ. ಟ್ರೋಫಿ ಯಾರ ಪಾಲಾಗುತ್ತೆ ಅನ್ನೋ ಲೆಕ್ಕಾಚಾರ ಹಾಕ್ತಿದ್ದಾರೆ ಫ್ಯಾನ್ಸ್‌. ಈ ಹೊತ್ತಲ್ಲೇ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಎಸ್‌ಆರ್‌ಹೆಚ್‌ ಟೀಮ್‌ ಆಟಗಾರರು ಉಳಿದುಕೊಂಡಿದ್ದ ಹೋಟೇಲ್‌ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಇದನ್ನೂ ಓದಿ:  ಬೇಟೆಯಾಡಿದ ಕನ್ನಡದ ಹುಲಿ – ಕರುಣ್‌ ಗೆ ಕಾಡಿದ್ಯಾಕೆ ರನ್ ಹಸಿವು?

ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್ ಉಳಿದುಕೊಂಡ ಐಷಾರಾಮಿ ಹೋಟೆಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿರುವ ಪಾರ್ಕ್ ಹಯಾತ್ ಹೋಟೆಲ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಎಲ್ಲಾ ಆಟಗಾರರನ್ನು ಬೇರೆ ಹೋಟೆಲ್‌ ಗೆ ಸ್ಥಳಾಂತರಿಸಲಾಗಿದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿದ್ದಾರೆ.

Shwetha M

Leave a Reply

Your email address will not be published. Required fields are marked *