ರಾಮ ಭೂಮಿಯಲ್ಲಿ ಕಳ್ಳರ ಕಾಟ – ರಾಮಪಥ, ಭಕ್ತಿಪಥದಲ್ಲಿ 50 ಲಕ್ಷ ಮೌಲ್ಯದ ದೀಪಗಳು ಮಂಗಮಾಯ..!

ರಾಮ ಭೂಮಿಯಲ್ಲಿ ಕಳ್ಳರ ಕಾಟ – ರಾಮಪಥ, ಭಕ್ತಿಪಥದಲ್ಲಿ 50 ಲಕ್ಷ ಮೌಲ್ಯದ ದೀಪಗಳು ಮಂಗಮಾಯ..!

ಅಯೋಧ್ಯೆ ರಾಮಮಂದಿರ ಲೋಕಾರ್ಷಣೆಗೊಂಡು ಒಂದು ವರ್ಷವೇ ಆಗ್ತಾ ಬಂದಿದೆ. ಇದೀಗ ಅಯೋಧ್ಯೆಯಲ್ಲಿ ಕಳ್ಳರ ಕಾಟ ಶುರುವಾಗಿದೆ. ರಾಮಲಲ್ಲಾ ಮಂದಿರಕ್ಕೆ ಹೋಗುವ ರಾಮ್ ಪಥ್ ಮತ್ತು ಭಕ್ತಿ ಪಥದಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ.  ಭಕ್ತಿಪಥ ಮತ್ತು ರಾಮಪಥದಲ್ಲಿ ಲಕ್ಷಾಂತರ ಮೌಲ್ಯದ ದೀಪಗಳನ್ನು ಕದ್ದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ:  ವಾಲ್ಮೀಕಿ ಹಗರಣ ಕೇಸ್‌ ನ ದೋಷಾರೋಪ ಪಟ್ಟಿ ರೆಡಿ- ಎಸ್‌ಐಟಿ ಸಲ್ಲಿಸಿದ ಪಟ್ಟಿಯಲ್ಲಿ ನಾಗೇಂದ್ರ, ಬಸನಗೌಡ ದದ್ದಲ್ ಹೆಸರು ಮಿಸ್!

ಅಯೋಧ್ಯೆಯ ಪ್ರಮುಖ ಮಾರ್ಗವಾದ ರಾಮಪಥ ಹಾಗೂ ಭಕ್ತಿ ಪಥ, 13 ಕಿಮೀ ಉದ್ದದ ಹೆದ್ದಾರಿಯಾಗಿದೆ. ಈ ರಸ್ತೆಗೆ ಭದ್ರತೆಯ ವ್ಯವಸ್ಥೆ ಕೂಡ ಮಾಡಲಾಗಿದೆ. ಆದ್ರೂ ಕೂಡ ಕಳ್ಳರು ಕೈಚಳಕ ತೋರಿಸಿದ್ದಾರೆ.  ಭಕ್ತಿಪಥ ಮತ್ತು ರಾಮಪಥದಲ್ಲಿ ಅಳವಡಿಸಲಾದ 50 ಲಕ್ಷಕ್ಕೂ ಹೆಚ್ಚು ಮೌಲ್ಯದ 3,800 ಬಿದಿರು ಮತ್ತು 36 ಪ್ರೊಜೆಕ್ಟರ್ ಲೈಟ್‌ಗಳು ಕಳ್ಳತನವಾಗಿದೆ ಎಂದು ವರದಿಯಾಗಿದೆ.

ಖಾಸಗಿ ಸಂಸ್ಥೆಗಳಾದ ಯಶ್ ಎಂಟರ್‌ಪ್ರೈಸಸ್ ಮತ್ತು ಕೃಷ್ಣಾ ಆಟೋಮೊಬೈಲ್ಸ್ ರಾಮಪಥದಲ್ಲಿ 6,400 ಬಿದಿರಿನ ದೀಪಗಳು ಮತ್ತು ಭಕ್ತಿಪಥದಲ್ಲಿ 96 ಗೋಬೋ ಪ್ರೊಜೆಕ್ಟರ್ ದೀಪಗಳನ್ನು ಅಳವಡಿಸಿವೆ. ಭಕ್ತಿ ಪಥವು ಅಯೋಧ್ಯೆಯ ರಾಮಮಂದಿರಕ್ಕೆ ಹೋಗುವ ಮುಖ್ಯ ರಸ್ತೆಯಾಗಿದ್ದು, ಶೃಂಗಾರ್ ಘಾಟ್ ಅನ್ನು ಹನುಮಾನ್ ಗರ್ಹಿ ಮತ್ತು ಅಂತಿಮವಾಗಿ ದೇವಸ್ಥಾನಕ್ಕೆ ಸಂಪರ್ಕಿಸುತ್ತದೆ.

ಇದೀಗ ಮಾರ್ಗಗಳಲ್ಲಿ ದೀಪಗಳನ್ನು ಅಳವಡಿಸಿದ ಸಂಸ್ಥೆಗಳ ಪ್ರತಿನಿಧಿ, ರಾಮಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

Shwetha M

Leave a Reply

Your email address will not be published. Required fields are marked *