ಸಾವಿನ ನಾಟಕವಾಡಿದ್ದ ಪೂನಂ ಕಾನೂನು ಸಂಕಷ್ಟ! – ನಟಿ ವಿರುದ್ದ100 ಕೋಟಿ ರೂ. ಮಾನನಷ್ಟ ಮೊಕದ್ದಮೆ!

ಸಾವಿನ ನಾಟಕವಾಡಿದ್ದ ಪೂನಂ ಕಾನೂನು ಸಂಕಷ್ಟ! – ನಟಿ ವಿರುದ್ದ100 ಕೋಟಿ ರೂ. ಮಾನನಷ್ಟ ಮೊಕದ್ದಮೆ!

ಸಾವಿನ ನಾಟಕವಾಡಿದ್ದ ಬಾಲಿವುಡ್‌ ನಟಿ ಪೂನಂ ಪಾಂಡೆಗೆ ಈಗ ಕಾನೂನು ಸಂಕಷ್ಟು ಎದುರಾಗಿದೆ. ಆಕೆಯ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರೈತರ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆ ದೆಹಲಿಯತ್ತ – ರಸ್ತೆಗೆ ರಾಡ್​ ಹೊಡೆದು ಸನ್ನದ್ಧರಾದ ಪೊಲೀಸರು..!

ನಟಿ, ಮಾಡೆಲ್ ಪೂನಂ ಪಾಂಡೆ ಸಾವಿನ ನಾಟಕವಾಡಿ ಒಂದೇ ದಿನಕ್ಕೆ ಕೋಟ್ಯಂತರ ಜನರನ್ನು ಫೂಲ್ ಮಾಡಿದ್ದಾರೆ. ಪೂನಂ ಪಾಂಡೆ, ತಮ್ಮ ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಿದಾಡುವಂತೆ ಮಾಡಿದ್ದರು. ಬಳಿಕ ಸರ್ವಿಕಲ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ತಾನು ಹೀಗೆ ಮಾಡಿದೆನೆಂದು ಕತೆ ಹೇಳಿದರು. ಅದಾದ ಬಳಿಕ ಹಲವರು ಪೂನಂ ಪಾಂಡೆ ವಿರುದ್ಧ ಟೀಕೆ, ನಿಂದನೆಗಳನ್ನು ಮಾಡಿದರು. ಕೆಲವರು ದೂರು ಸಹ ಸಲ್ಲಿಸಿದ್ದಾರೆ. ಇದೀಗ ಕಾನ್ಪುರದಲ್ಲಿ ಪೋನಂ ಪಾಂಡೆ ಹಾಗೂ ಆಕೆಯ ಪತಿ ಸ್ಯಾಮ್ ಬಾಂಬೆ ವಿರುದ್ಧ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.  ಫೈಜರ್ ಅನ್ಸಾರಿ ಎನ್ನುವವರು ಕಾನ್ಪುರ ಪೊಲೀಸ್ ಕಮಿಷ್ನರ್ ಗೆ ದೂರು ಸಲ್ಲಿಸಿದ್ದಾರೆ.

ಈ ಪ್ರಕರಣದ ಕುರಿತಂತೆ ಪೂನಂ ಮೇಲೆ  ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ಔಷಧಿ ಕಂಪನಿಗಳು ಈಕೆಗೆ ಹಣ ನೀಡಿ, ಈ ರೀತಿ ನಾಟಕವಾಡುವಂತೆ ಮಾಡಿವೆ ಎನ್ನುವ ಆರೋಪವಿತ್ತು. ಈ ಕುರಿತಂತೆ ಸ್ವತಃ ಪೂನಂ ಸ್ಪಷ್ಟನೆ ನೀಡಿದ್ದಾರೆ. ತಾವು ಸತ್ತಿರುವುದಾಗಿ ಹೇಳಿಕೊಂಡಿದ್ದರ ಹಿಂದೆ ನಿಜವಾದ ಕಾಳಜಿ ಇತ್ತು. ಯಾವುದೇ ಔಷಧಿ ಕಂಪನಿಗಳು ತಮಗೆ ಹಣ ನೀಡಿಲ್ಲ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

Shwetha M