ಪಠಾಣ್ ಸಿನಿಮಾ ಸಕ್ಸಸ್​ ನಲ್ಲಿ ಶಾರುಖ್ ಖಾನ್ – ಪತ್ನಿ ಗೌರಿ ಖಾನ್ ವಿರುದ್ಧ ಎಫ್​ಐಆರ್!

ಪಠಾಣ್ ಸಿನಿಮಾ ಸಕ್ಸಸ್​ ನಲ್ಲಿ ಶಾರುಖ್ ಖಾನ್ – ಪತ್ನಿ ಗೌರಿ ಖಾನ್ ವಿರುದ್ಧ ಎಫ್​ಐಆರ್!

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದು ಸಾವಿರ ಕೋಟಿ ಕಲೆಕ್ಷನ್ ಮಾಡಿದೆ. ಕಿಂಗ್ ಖಾನ್ ಫ್ಯಾಮಿಲಿಯವ್ರೆಲ್ಲಾ ಸಿನಿಮಾ ಸಕ್ಸಸ್ ಖುಷಿಯಲ್ಲಿದ್ರೆ ಶಾರುಖ್ ಪತ್ನಿ ಗೌರಿ ಖಾನ್ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿದೆ.

ಹೌದು. ಮುಂಬೈ ನಿವಾಸಿ ಜಶ್ವಂತ್ ಷಾ ಎಂಬುವವರು ಶಾರುಖ್ ಖಾನ್ ಪತ್ನಿ ಗೌರಿ ಖಾನ್ ವಿರುದ್ಧ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 409 ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ರಿಯಲ್​ ಎಸ್ಟೇಟ್​ ವ್ಯವಹಾರದಲ್ಲಿ ಮೋಸ ಮಾಡಿದ ಆರೋಪ ಗೌರಿಖಾನ್ ವಿರುದ್ಧ ಕೇಳಿ ಬಂದಿದೆ.  ಗೌರಿ ಖಾನ್​ ಅವರು ಇಂಟೀರಿಯರ್​ ಡಿಸೈನರ್​ ಆಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಕೆಲವು ರಿಯಲ್​ ಎಸ್ಟೇಟ್​ ಕಂಪನಿಗೆ ಅವರು ಬ್ರ್ಯಾಂಡ್​ ಅಂಬಾಸಡರ್​ ಆಗಿದ್ದಾರೆ. ಅವರು ಪ್ರಚಾರ ರಾಯಭಾರಿ ಆಗಿರುವ ಕಂಪನಿಯೊಂದರಿಂದ ತಮಗೆ ಮೋಸ ಆಗಿದೆ ಎಂದು ಗ್ರಾಹಕರೊಬ್ಬರು ಕೇಸ್​ ದಾಖಲಿಸಿದ್ದಾರೆ. ಮುಂಬೈ ನಿವಾಸಿ ಜಶ್ವಂತ್​ ಷಾ ಎಂಬುವವರು ಗೌರಿ ಖಾನ್​ ವಿರುದ್ಧ ದೂರು ನೀಡಿದ್ದಾರೆ.

ಇದನ್ನೂ ಓದಿ : ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಗೆ ಹೃದಯಾಘಾತ – ವೈದ್ಯರಿಂದ ಶಾಕಿಂಗ್ ಮಾಹಿತಿ..!

ಖಾಸಗಿ ರಿಯಲ್​ ಎಸ್ಟೇಟ್​ ಕಂಪನಿಯೊಂದರ ಮೂಲಕ ಜಶ್ವಂತ್​ ಅವರು ಫ್ಲಾಟ್​ ಖರೀದಿಸಿದ್ದರು. ಅದಕ್ಕಾಗಿ ಅವರು 86 ಲಕ್ಷ ರೂಪಾಯಿ ಪಾವತಿಸಿದ್ದರು. ಹಣ ಪಡೆದುಕೊಂಡರೂ ಕೂಡ ಆ ಕಂಪನಿಯವರು ತಮಗೆ ಫ್ಲಾಟ್​ ನೀಡಿಲ್ಲ ಎಂದು ಜಶ್ವಂತ್​ ಷಾ ಈಗ ಆರೋಪಿಸಿದ್ದಾರೆ. ಗೌರಿ ಖಾನ್​ ಅವರು ಬ್ರ್ಯಾಂಡ್​ ಅಂಬಾಸಡರ್​ ಆಗಿದ್ದರಿಂದಲೇ ತಾವು ಆ ಫ್ಲಾಟ್​ ಖರೀದಿಸಿದ್ದು ಎಂದು ಜಶ್ವಂತ್​ ಷಾ ದೂರಿನಲ್ಲಿ ತಿಳಿಸಿದ್ದಾರೆ.

ಶಾರುಖ್​ ಖಾನ್​ ಅವರಿಗೆ ಬಹುವರ್ಷಗಳ ಬಳಿಕ ಗೆಲುವು ಸಿಕ್ಕಿದೆ. ಅವರು ನಟಿಸಿದ ‘ಪಠಾಣ್​’ ಸಿನಿಮಾ ಬ್ಲಾಕ್​ಬಸ್ಟರ್ ಹಿಟ್​ ಆಗಿದೆ. ಆ ಗೆಲುವನ್ನು ಶಾರುಖ್​ ಕುಟುಂಬದವರು ಎಂಜಾಯ್​ ಮಾಡುತ್ತಿದ್ದಾರೆ. ಅದರ ನಡುವೆ ಈ ಚೀಟಿಂಗ್​ ಕೇಸ್​ ತಲೆಬಿಸಿ ಶುರುವಾಗಿದೆ. ಐಪಿಸಿ ಸೆಕ್ಷನ್​ 409 ಅಡಿಯಲ್ಲಿ ಗೌರಿ ಖಾನ್​ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ. ಗೌರಿ ಖಾನ್​ ಅವರು ಒಳಾಂಗಣ ವಿನ್ಯಾಸಕಿ ಆಗಿ ಸಾಕಷ್ಟು ಬೇಡಿಕೆ ಹೊಂದಿದ್ದಾರೆ. ಅನೇಕ ಸೆಲೆಬ್ರಿಟಿಗಳ ಮನೆ ಮತ್ತು ಕಚೇರಿಯ ಇಂಟೀರಿಯರ್​ ಡಿಸೈನ್​ ಮಾಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಅದರ ನಡುವೆ ಅವರು ಕೆಲವು ಕಿರಿಕ್​ಗಳನ್ನು ಎದುರಿಸುವಂತಾಗಿದೆ.

suddiyaana