ಸೀತಾರಾಮನ್‌ಗೆ ಚುನಾವಣಾ ಬಾಂಡ್ ಸಂಕಷ್ಟ – 8 ಸಾವಿರ ಕೋಟಿ ಹಗರಣ ನಡೆದಿದ್ದು ಹೇಗೆ..?
ಚುನಾವಣಾ ಬಾಂಡ್ಗಳು ಎಂದರೇನು? ಆರಂಭವಾಗಿದ್ದು ಯಾವಾಗ?,

ಸೀತಾರಾಮನ್‌ಗೆ ಚುನಾವಣಾ ಬಾಂಡ್ ಸಂಕಷ್ಟ –   8 ಸಾವಿರ ಕೋಟಿ ಹಗರಣ ನಡೆದಿದ್ದು ಹೇಗೆ..?ಚುನಾವಣಾ ಬಾಂಡ್ಗಳು ಎಂದರೇನು? ಆರಂಭವಾಗಿದ್ದು ಯಾವಾಗ?,

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಮುಡಾ ಹಗರಣದ ಬಳಿಕ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಕಮಲ ನಾಯಕರು ಆಗ್ರಹಿಸುತ್ತಿದ್ದಾರೆ. ಈ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕೂಡ ಆರೋಪ ಕೇಳಿ ಬಂದಿದೆ.. ಚುನಾವಣಾ ಬಾಂಡ್ ಸದ್ದು ಜೋರಾಗಿದೆ. ಹಾಗಿದ್ರೆ  ಈ ಚುನಾವಣಾ ಬಾಂಡ್​ಗಳು ಎಂದರೇನು? ಆರಂಭವಾಗಿದ್ದು ಯಾವಾಗ?, ನಿರ್ಮಲಾ ಸೀತಾರಾಮನ್‌ ವಿರುದ್ಧ ಕೇಳಿ ಬಂದಿರೋ ಆರೋಪ ಎಷ್ಟರ ಮಟ್ಟಗೆ ಎಫೆಕ್ಟ್ ಆಗುತ್ತೆ  ನೋಡೋಣ ಬನ್ನಿ

ಇದನ್ನೂ ಓದಿ :ಏಷ್ಯಾ ಪೆಸಿಫಿಕ್‌ನಲ್ಲಿಭಾರತ – ನಂ.3- ಏಷ್ಯಾಕ್ಕೆ ಭಾರತ ಅತಿದೊಡ್ಡ ಶಕ್ತಿ

VOICE:  ಚುನಾವಣಾ ಬಾಂಡ್ ಹೆಸರಿನಲ್ಲಿ ನಡೆದಿದೆ ಎನ್ನಲಾದ 8 ಸಾವಿರ ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರು ಮತ್ತು ಇಡಿ ಅಧಿಕಾರಿಗಳ ವಿರುದ್ಧ ಎಫ್​ಐಆರ್​​ ದಾಖಲಾಗಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಮಾಯ್ಯ ರಾಜೀನಾಮೆಗೆ ಆಗ್ರಹಿಸುತ್ತಿದ್ದಂತೆ, ಇತ್ತಕೇಂದ್ರ ಸಚಿವೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಪಟ್ಟು ಹಿಡಿದಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ ಆದೇಶದಂತೆ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೇಶಾದ್ಯಂತ ದೊಡ್ಡ ಸದ್ದು ಮಾಡುತ್ತಿದೆ.

ಚುನಾವಣಾ ಬಾಂಡ್ ಎಂದರೇನು?

VOICE: ಭಾರತ ಸರ್ಕಾರ 2017ರಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಘೋಷಿಸಿತ್ತು. ಈ ಯೋಜನೆಯನ್ನು 2018ರ ಜನವರಿ 29ರಂದು ಕಾನೂನುಬದ್ಧವಾಗಿ ಜಾರಿಗೊಳಿಸಿತ್ತು. ಸಿಂಪಲ್ ಆಗಿ ಹೇಳುವುದಾದ್ರೆ ಚುನಾವಣಾ ಬಾಂಡ್ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಆರ್ಥಿಕ ಸಾಧನ. ಈ ಮೂಲಕ ರಾಜಕೀಯ ಪಕ್ಷಗಳಿಗೆ ಕಪ್ಪು ಹಣ ಹರಿದುಬರುವುದನ್ನು ತಡೆಯುವುದಾಗಿತ್ತು. ಇಂಥ ದೇಣಿಗೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿಸುವ ಉದ್ದೇಶಕ್ಕಾಗಿ ಚುನಾವಣಾ ಬಾಂಡ್​ಗಳನ್ನು ಜಾರಿ ಮಾಡಲಾಗಿತ್ತು. ಇದು ಪ್ರಾಮಿಸರಿ ನೋಟ್​ನಂತಿದ್ದು, ಭಾರತದ ಯಾವುದೇ ನಾಗರಿಕ ಅಥವಾ ಕಂಪನಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಯ್ದ ಶಾಖೆಗಳಿಂದ ಖರೀದಿಸುವ ಅವಕಾಶ ಇತ್ತು.

 ಚುನಾವಣಾ ಬಾಂಡ್‌ಗಳು ಹೇಗೆ ಕಾರ್ಯನಿರ್ವಹಿಸುತ್ತೆ..?

VOICE: ಕೆವೈಸಿ ವಿವರ ಲಭ್ಯವಿರುವ ಬ್ಯಾಂಕ್ ಖಾತೆ ಹೊಂದಿರುವ ಯಾವುದೇ ದಾನಿಯು ಚುನಾವಣಾ ಬಾಂಡ್‌ ಖರೀದಿಸಬಹುದಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದಿಷ್ಟ ಶಾಖೆಗಳಿಂದ 1,000 ರೂಪಾಯಿ, 10,000 ರೂಪಾಯಿ, 1 ಲಕ್ಷ ರೂಪಾಯಿ, 10 ಲಕ್ಷ ರೂಪಾಯಿ, 1 ಕೋಟಿ ರೂಪಾಯಿ ಮುಖಬೆಲೆಯ ಚುನಾವಣಾ ಬಾಂಡ್‌ ಖರೀದಿಸಬಹುದಿತ್ತು. ಇಂಥ ದೇಣಿಗೆ ನೀಡುವವರ ಹೆಸರು ಉಲ್ಲೇಖಿಸುವ ಅಗತ್ಯ ಇರಲಿಲ್ಲ. ಚುನಾವಣಾ ಬಾಂಡ್​ಗಳ ಮಾನ್ಯದ ಅವಧಿ 15 ದಿನಗಳು ಮಾತ್ರ. ಅವುಗಳನ್ನು ಪ್ರಜಾಪ್ರತಿನಿಧಿ ಕಾಯ್ದೆಯಡಿ ನೋಂದಾಯಿಸಲಾದ ರಾಜಕೀಯ ಪಕ್ಷಗಳಿಗೆ ದೇಣಿಗೆಗಾಗಿ ಮಾತ್ರ ಬಳಸಬೇಕಿತ್ತು. ಇದನ್ನು ಸ್ವೀಕರಿಸಿದವರು ನಗದು ರೂಪಕ್ಕೆ ಪರಿವರ್ತಿಸಬಹುದು.

 

ಸುಪ್ರೀಂ ಕೋರ್ಟ್‌ನಿಂದ ಚುನಾವಣಾ ಬಾಂಡ್ ರದ್ದು..!

 

ಚುನಾವಣಾ ಬಾಂಡ್​ಗಳ ವಿರುದ್ಧ ಕೇಳಿ ಬಂದ ಟೀಕೆ, ಆರೋಪಗಳು ಸುಪ್ರೀಂ ಕೋರ್ಟ್​ನಲ್ಲೂ ಪ್ರತಿಧ್ವನಿಸಿತ್ತು. ಕಾಂಗ್ರೆಸ್ ನಾಯಕಿ ಜಯಾ ಠಾಕೂರ್, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಮತ್ತು ಎನ್‌ಜಿಒ  ಎಡಿಆರ್  ಸೇರಿದಂತೆ ನಾಲ್ವರು ಚುನಾವಣಾ ಬಾಂಡ್‌ ರದ್ದುಪಡಿಸಲು ಅರ್ಜಿ ಹಾಕಿದ್ದರು. ವರ್ಷಗಳ ಕಾಲ ಈ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, 2024ರ ಫೆಬ್ರವರಿ 15ರಂದು ನಿಷೇಧಿಸಿತು. ಅಲ್ಲದೆ, ಇಲ್ಲಿಯವರೆಗೂ ಯಾವ ಪಕ್ಷಕ್ಕೆ ಎಷ್ಟು ಹಣ ಸಂದಾಯವಾಗಿದೆ ಎಂಬುದರ ವಿವರ ನೀಡುವಂತೆ ಮಾಹಿತಿ ಕೇಳಿತ್ತು.. ಸುಪ್ರೀಂಗೆ ಎಸ್​ಬಿಐ ಸಲ್ಲಿಸಿದ ದತ್ತಾಂಶದ ಮಾಹಿತಿಯಂತೆ, 2018ರಿಂದ 2022ರವರೆಗೆ ದೇಶಾದ್ಯಂತ 9,208 ಚುನಾವಣಾ ಬಾಂಡ್​ಗಳನ್ನು ಖರೀದಿಸಲಾಗಿತ್ತು. ಈ ಪೈಕಿ ಶೇ 58 ರಷ್ಟು ಹಣವು ಬಿಜೆಪಿ ಹರಿದು ಬಂದಿದೆ. ಇದು ಟೀಕಾಕಾರರ ಆರೋಪಕ್ಕೆ ಸಾಕ್ಷಿ ಎನ್ನುವಂತಿತ್ತು.

   

ಇಡಿ ಬಳಸಿಕೊಂಡು ದೇಶದ ಕಾರ್ಪೊರೇಟ್ ಕಂಪನಿಗಳ ಮೂಲಕ ದಾಳಿ ಮಾಡಿ, ಅವರಿಂದ ಚುನಾವಣಾ ಬಾಂಡ್ ಮೂಲಕ ಸುಮಾರು 8 ಸಾವಿರ ಕೋಟಿ ರೂ.ವರೆಗೂ ಹಣ ಸುಲಿಗೆ ಮಾಡಲಾಗಿದೆ. ರಾಜ್ಯದಲ್ಲಿ ನಳಿನ್ ಕುಮಾರ್ ಕಟೀಲ್ ರಹಸ್ಯ ಮಾರ್ಗವಾಗಿ ಹಣ ವರ್ಗಾವಣೆಗೆ ಸಹಕಾರಿಯಾಗಿದ್ದಾರೆ. ರಾಜಕೀಯ ಲಾಭಕ್ಕಾಗಿ ಇ.ಡಿ. ಬಳಸಿಕೊಂಡು ಕಂಪನಿಗಳ ಮೇಲೆ ದಾಳಿ ಮಾಡಿ, ಸಿಇಒ ಹಾಗೂ ಎಂ.ಡಿಯನ್ನು ಬಂಧಿಸಲಾಗಿತ್ತು. ಬಂಧನಕ್ಕೆ ಹೆದರಿದ ಕಂಪನಿ ಮಾಲೀಕರಿಗೆ ಚುನಾವಣಾ ಬಾಂಡ್ ಖರೀದಿಗೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಆದರ್ಶ ಆರ್. ಅಯ್ಯರ್ ವಿವರಿಸಿದ್ದಾರೆ. ಕಾರ್ಪೋರೇಟ್ ಅಲ್ಯೂಮಿನಿಯಂ ಮತ್ತು ಕಾಫರ್ ಜೈಂಟ್, ಎಂ.ಎಸ್.ಸ್ಕೇರ್ ಲೈಟ್, ವೇದಾಂತ ಕಂಪನಿಗಳಿಂದ 2019ನೇ ಸಾಲಿನ ಏಪ್ರಿಲ್​ನಿಂದ 2022ರ ಅಗಸ್ಟ್​​ವರೆಗೆ ಮತ್ತು 2023ರ ನವೆಂಬರ್​​ವರೆಗೆ ಒಟ್ಟು 230.15 ಕೋಟಿ ರೂ. ಪಡೆದುಕೊಂಡಿದ್ದಾರೆ.  ಅರವಿಂದ ಫಾರ್ಮಾ ಕಂಪನಿಯಿಂದ 2022 ಹಾಗೂ 2023ರವರೆಗೆ 49.5 ಕೋಟಿ ರೂ. ಸೇರಿ ರಹಸ್ಯವಾಗಿ ಸುಮಾರು 8 ಸಾವಿರ ಕೋಟಿ ರೂ.ಗಳನ್ನು ಎಲ್ಲ ಆರೋಪಿಗಳು ಚುನಾವಣಾ ಬಾಂಡ್​​ಗೆ ಪರಿವರ್ತಿಸಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಎ1 ಆರೋಪಿಯಾಗಿ, ಎ2 ಆರೋಪಿಯಾಗಿ ಇಡಿ ಅಧಿಕಾರಿಗಳು , ಎ3 ಆರೋಪಿಯಾಗಿ ಬಿಜೆಪಿ ಪದಾಧಿಕಾರಿಗಳು, ಎ4 ಆರೋಪಿಯಾಗಿ ನಳೀನ್ ಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಎ5 ಆರೋಪಿಯಾಗಿ ಮಾಡಿ ಎಫ್ಐಆರ್ ದಾಖಲಿಸಲಾಗಿದೆ.  ಐಪಿಸಿ ಸೆಕ್ಷನ್ 384, 120ಬಿ, 34ರಡಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಸಾಲು ಸಾಲು ಹಗರಣಗಳು ಹೊರ ಬರುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಕಚ್ಚಾಟಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ 3 ಕೋಟಿ ರೂಪಾಯಿಗೂ ಹೆಚ್ಚಿನ ಹಣದ ಕೇಸ್‌ಗಳನ್ನು ಸಿಐಡಿಗೆ ವರ್ಗಾಯಿಸಲಾಗುತ್ತದೆ. ಅದರಂತೆ ಈ ಪ್ರಕರಣವನ್ನು ಕೂಡ ಸಿಐಡಿಗೆ ವಹಿಸುವ ಸಂಬಂಧ ಚರ್ಚೆ ಆಗುತ್ತಿದೆ.  ಈ ಪ್ರಕರಣ ಸಿಐಡಿಗೆ ವರ್ಗಾಯಿಸಲು ಸಿದ್ಧತೆ ನಡೆದಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ರಾಜ್ಯ ಬಿಜೆಪಿ ನಾಯಕರಿಗೆ ಕಂಟಕ ಎದುರಾಗುವ ಸಾಧ್ಯತೆಯಿದೆ.

Kishor KV

Leave a Reply

Your email address will not be published. Required fields are marked *