ಅಥ್ಲೀಟ್ ಬಿಂದು ರಾಣಿ ಮೇಲೆ ಕೋಚ್ ಪತ್ನಿ ದೌರ್ಜನ್ಯ ಪ್ರಕರಣ – ಕೋಚ್ ಯತೀಶ್ ಹಾಗೂ ಪತ್ನಿ ಶ್ವೇತಾ ವಿರುದ್ಧ ಎಫ್‌ಐಆರ್

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯದ ಅಥ್ಲೀಟ್ ಬಿಂದುರಾಣಿ ಮೇಲೆ ಕೋಚ್ ಯತೀಶ್ ಅವರ ಪತ್ನಿ ಶ್ವೇತಾ ದೌರ್ಜನ್ಯ ನಡೆಸಿದ್ದಾರೆ. ಅಲ್ಲದೆ ಬಿಂದು ರಾಣಿಗೆ ಚಪ್ಪಲಿ ತೋರಿಸಿ ಆಕ್ರೋಶ ಹೊರಹಾಕಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಚ್ ಯತೀಶ್ ಹಾಗೂ ಪತ್ನಿ ಶ್ವೇತಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ದಾಖಲೆ ಕೊಡುತ್ತೇನೆ ತನಿಖೆ ಮಾಡೋ ಧಮ್ ನಿಮಗೆ ಇದ್ಯಾ ಎಂದ ಹೆಚ್‌ಡಿಕೆ – ಪಾಪ ಬೇಸರದಲ್ಲಿ ಇದ್ದಾರೆ ಎಂದು ಡಿಕೆಶಿ ತಿರುಗೇಟು!
ಜುಲೈ 3ರಂದು ಬೆಳಗಿನ ಜಾವ ಬಿಂದುರಾಣಿಯನ್ನು ಯತೀಶ್ ಅವರ ಪತ್ನಿ ಶ್ವೇತಾ ಕ್ರೀಡಾಂಗಣಕ್ಕೆ ಆಗಮಿಸಿ ಬಿಂದುರಾಣಿಗೆ ಅಡ್ಡಗಟ್ಟಿ ನಿಂದಿಸಿದ್ದಾರೆ. ನಿಮ್ಮಂತವರಿಂದ ಕರ್ನಾಟಕದ ಮರ್ಯಾದೆ ಹಾಳಾಗುತ್ತಿದೆ. ನಿನಗೆ ಖೇಲ್ ರತ್ನ ಪ್ರಶಸ್ತಿ ಸಿಕ್ಕಿದೆಯಾ ಎಂದು ಬೈದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಶ್ವೇತಾ ಬಿಂದುರಾಣಿಗೆ ಚಪ್ಪಲಿ ತೋರಿಸಿ ನೀನು ಕಳ್ಳಿ ಲಕ್ಷಾಂತರ ಮೌಲ್ಯದ ಕ್ರೀಡಾ ಸಾಮಗ್ರಿಯನ್ನು ಕದ್ದಿದ್ದೀಯ ಎಂದು ಆರೋಪ ಮಾಡಿದ್ದರು. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಕೋಚ್ ಯತೀಶ್ ಹಾಗೂ ಅವರ ಪತ್ನಿ ಶ್ವೇತ ವಿರುದ್ಧ ಸಂಪಂಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಸಂಬಂಧ ಬಿಂದುರಾಣಿ ಸಂಪಂಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ಶ್ವೇತಾ ಹಾಗೂ ಅವರ ಪತಿ ಯತೀಶ್ ವಿರುದ್ಧ ಮಾನಹಾನಿ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಬಿಂದುರಾಣಿ ಕೊಟ್ಟ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲು ಮಾಡಿಕೊಂಡಿರುವ ಸಂಪಂಗಿ ರಾಮನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.