ಇದು ಜಗತ್ತಿನಲ್ಲೇ ಅತ್ಯಂತ ಸಂತೋಷಭರಿತ ದೇಶ!

ಇದು ಜಗತ್ತಿನಲ್ಲೇ ಅತ್ಯಂತ ಸಂತೋಷಭರಿತ ದೇಶ!

ಜೀವನದಲ್ಲಿ ಸಂತೋಷಕ್ಕಿಂತ ಮುಖ್ಯ ಇನ್ಯಾವುದೂ ಕೂಡ ಇಲ್ಲ. ಪ್ರತಿಯೊಬ್ಬ ವ್ಯಕ್ತಿಯ ಅಂತಿಮ ಗುರಿ ನೆಮ್ಮದಿಂದ ಜೀವನ ಮಾಡೋದು. ಈ ನಡುವೆ ಜಗತ್ತಿನಲ್ಲಿ ಅತ್ಯಂತ ಸಂತೋಷದಿಂದ ಜನರು ಜೀವನ ಮಾಡುತ್ತಿರುವ ದೇಶಗಳ ಸಮೀಕ್ಷಾ ವರದಿ ಬಂದಿದೆ.

ಇದನ್ನೂ ಓದಿ: ಮತ್ತೆ 9,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ ಅಮೆಜಾನ್

ಯುನೈಟೆಡ್ ನೇಷನ್ಸ್ ಸಸ್ಟೈನೇಬಲ್ ಡೆವಲಪ್ ಮೆಂಟ್ ಸಲ್ಯೂಷನ್ಸ್ ನೆಟ್ ವರ್ಕ್ ಈ ವರದಿಯನ್ನು ಪ್ರಕಟಿಸಿದೆ. ಈ ವರದಿಯ ಪ್ರಕಾರ ಫಿನ್​​ಲ್ಯಾಂಡ್​ನ ಜನರು ಅತ್ಯಂತ ನೆಮ್ಮದಿಯಿಂದ ಜೀವನ ಮಾಡ್ತಿದ್ದಾರಂತೆ. ಕಳೆದ ಐದು ವರ್ಷಗಳಿಂದಲೂ ಈ ಪಟ್ಟಿಯಲ್ಲಿ ಫಿನ್​​ಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಇನ್ನು ಡೆನ್ಮಾರ್ಕ್ ಮತ್ತು ಐಸ್​ಲ್ಯಾಂಡ್​ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದು, ಸ್ವಿಜರ್​​​ಲ್ಯಾಂಡ್​ ಮತ್ತು ನೆದರ್​​​ಲ್ಯಾಂಡ್ ನೆಮ್ಮದಿಯ ಪಟ್ಟಿಯಲ್ಲಿ ನಾಲ್ಕು ಮತ್ತು ಐದನೇ ಸ್ಥಾನ ಗಳಿಸಿದೆ. ಆದ್ರೆ ಭಾರತ ಮಾತ್ರ ಈ ಪಟ್ಟಿಯಲ್ಲಿ 136ನೇ ಸ್ಥಾನದಲ್ಲಿದೆ. ಅಂದ್ರೆ ಕೊನೆಯಿಂದ ಟಾಪ್​​​ 10 ಲಿಸ್ಟ್​ನಲ್ಲಿ ಸ್ಥಾನ ಪಡೆದಿದೆ.

146 ದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.  ಜನರ ಆರೋಗ್ಯ, ಜಿಡಿಪಿ, ಜೀವನದಲ್ಲಿ ತಮ್ಮಚ್ಛೆಯಂತೆ ನಿರ್ಧಾರ ಕೈಗೊಳ್ಳಲು ಇರುವ ಸ್ವಾತಂತ್ರ್ಯ, ಸಾಮಾಜಿಕ ಬೆಂಬಲ ಇವೆಲ್ಲವನ್ನೂ ಪರಿಗಣಿಸಿ ಈ ಸಂತೋಷದ ಸಮೀಕ್ಷೆ ನಡೆಸಲಾಗಿದೆ.

ಫಿನ್ ಲ್ಯಾಂಡ್ ಸಂತೋಷದ ದೇಶವಾಗಲು ಕಾರಣವೇನು?

ಫಿನ್‌ಲ್ಯಾಂಡ್ ಸಂತೋಷವಾಗಿರಲು ಪ್ರಮುಖ ಅಂಶವೆಂದರೆ ಶಾಂತ ಜೀವನ . ಬಹಳಷ್ಟು ಪಾಶ್ಚಿಮಾತ್ಯ  ದೇಶಗಳಿಗೆ ಹೋಲಿಸಿದರೆ ಫಿನ್‌ಲ್ಯಾಂಡ್ ಹೆಚ್ಚು ಶಾಂತಿಯಿಂದ ಕೂಡಿದೆ. ಅಷ್ಟೇ ಅಲ್ಲದೇ ಜನರು ಇಲ್ಲಿ ಸುರಕ್ಷಿತ ಎಂದು ಭಾವಿಸುತ್ತಾರೆ. ಫಿನ್‌ಲ್ಯಾಂಡ್ ಈ ಪ್ಯಾರಾಮೀಟರ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಇದು ಕಡಿಮೆ ಅಪರಾಧ ಮಟ್ಟವನ್ನು ಹೊಂದಿದೆ. ನಾರ್ಡಿಕ್ ದೇಶವು  ಉತ್ತಮವಾದ ಶಾಲಾ ವ್ಯವಸ್ಥೆಗಳನ್ನ  ಹೊಂದಿದೆ ಮತ್ತು ಕೆಲವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ದೇಶವು ಸಾರ್ವತ್ರಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಸಹ ಹೊಂದಿದೆ. ಇದು ಅಲ್ಲಿಯ ನಾಗರಿಕರು ಎಷ್ಟು ಸಂತೋಷವನ್ನು ಅನುಭವಿಸುತ್ತಾರೆ ಎಂಬುದು ಗಮನಾರ್ಹ ಅಂಶವಾಗಿದೆ.

ಫಿನ್‌ಲ್ಯಾಂಡ್ ಇತರ  ಪಾಶ್ಚಿಮಾತ್ಯ ದೇಶಗಳಿಗಿಂತ ಭಿನ್ನವಾಗಿರಲು ಇನ್ನೊಂದು ಅಂಶವೆಂದರೆ ಸಮಾನತೆ, ಇಲ್ಲಿ ಜನರು ಯಾವುದೇ ಸಾಮಾಜಿಕ-ಆರ್ಥಿಕ ಹಿನ್ನೆಲೆಯಿಂದ ಬಂದವರಾಗಿದ್ದರೂ ಎಲ್ಲರಿಗೂ ಸಮಾನ ಅವಕಾಶಗಳಿರುತ್ತವೆ . ಫಿನ್‌ಲ್ಯಾಂಡ್ ಬಹಳ ದೊಡ್ಡ ಮಧ್ಯಮ ವರ್ಗವನ್ನು ಹೊಂದಿದೆ ಮತ್ತು ಕಡಿಮೆ ಬಡತನವನ್ನು ಹೊಂದಿದೆ. ಆದರೂ ಬಡ ಜನರು ಸಹ ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ.

suddiyaana