ಲ್ಯಾಂಬೋರ್ಗಿನಿ ಕಾರ್‌ನಲ್ಲಿ ಹಿಟ್‌ಮ್ಯಾನ್ ವೇಗದ ಡ್ರೈವಿಂಗ್ – ರೋಹಿತ್ ಶರ್ಮಾಗೆ ಫೈನ್, ಮೂರು ನೋಟೀಸ್

ಲ್ಯಾಂಬೋರ್ಗಿನಿ ಕಾರ್‌ನಲ್ಲಿ ಹಿಟ್‌ಮ್ಯಾನ್ ವೇಗದ ಡ್ರೈವಿಂಗ್ – ರೋಹಿತ್ ಶರ್ಮಾಗೆ ಫೈನ್, ಮೂರು ನೋಟೀಸ್

ಈ ಬಾರಿಯ ವರ್ಲ್ಡ್​ಕಪ್​​ನಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ರಿಷಬ್ ಪಂತ್ ಯಾಕೆ ಆಡ್ತಿಲ್ಲ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಅತೀ ವೇಗವಾಗಿ ಕಾರು ಚಲಾಯಿಸಿ ಆ್ಯಕ್ಸಿಡೆಂಟ್ ಆಗಿ ಪಂತ್​ ಬದುಕುಳಿದಿದ್ದೇ ದೊಡ್ಡದು. ಅಂದು ಆಕ್ಸಿಡೆಂಟ್ ಆಗಿಲ್ಲದೇ ಇರ್ತಿದ್ರೆ ಇಂದು ಪಂತ್ ವರ್ಲ್ಡ್​ಕಪ್ ಆಡುತ್ತಿದ್ದರು. ಆದರೆ,  ಪಂತ್​ಗೆ ಏನಾಯ್ತು ಅನ್ನೋದನ್ನ ನಮ್ಮ ಕ್ಯಾಪ್ಟನ್ ರೋಹಿತ್ ಶರ್ಮಾ ಮರೆತಂತೆ ಕಾಣ್ತಿದೆ.

ಇದನ್ನೂ ಓದಿ: ಹರಿಣಗಳನ್ನು ಸೋಲಿಸಿದ ಡಚ್ಚರಿಗೆ ಕ್ರಿಕೆಟ್ ಮಾತ್ರ ಬದುಕಾಗಿತ್ತಾ ? – ನೆದರ್ಲೆಂಡ್ಸ್ ಟೀಮ್‌ನಲ್ಲಿರುವ ಕ್ರಿಕೆಟಿಗರ ರಿಯಲ್ ಸ್ಟೋರಿ ಇಲ್ಲಿದೆ

ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ರೋಹಿತ್​ ಶರ್ಮಾ ಮುಂಬೈನಿಂದ ತಮ್ಮ 4.2 ಕೋಟಿ ರೂಪಾಯಿ ಮೊತ್ತದ ಲ್ಯಾಂಬೋರ್ಗಿನಿ ಕಾರ್​​ನಲ್ಲಿ ಪುಣೆಗೆ ತೆರಳಿದ್ದರು. ಖುದ್ದು ರೋಹಿತ್ ಶರ್ಮಾ ಅವರೇ ಕಾರನ್ನು ಡ್ರೈವ್ ಮಾಡಿದ್ದಾರೆ. ಹೇಳಿಕೇಳಿ ಲ್ಯಾಂಬೋರ್ಗಿನಿ. ಹೈಸ್ಪೀಡ್ ಕಾರು. ಒಂದು ರೇಂಜಿಗೆ ಸ್ಪೀಡ್ ಹೋಗೋದೇನೊ ಸರಿ. ಆದರೆ, ರೋಹಿತ್​ ಶರ್ಮಾ 200 ರಿಂದ 215 ಕಿಲೋ ಮಿಟರ್​ ಸ್ಪೀಡ್​ನಲ್ಲಿ ಕಾರು ಡ್ರೈವ್ ಮಾಡಿದ್ದಾರೆ. ಇದು ಟ್ರ್ಯಾಫಿಕ್ ಪೊಲೀಸರ ಸ್ಪೀಡ್​ ಟ್ರ್ಯಾಕಿಂಗ್ ಸಿಸ್ಟಮ್​ನಲ್ಲಿ ದಾಖಲಾಗಿದ್ದು, ಇದೀಗ ರೋಹಿತ್​ಗೆ ಶರ್ಮಾ ಒಟ್ಟು ಒಟ್ಟು ಮೂರು ಫೈನ್ ಹಾಕಿ ನೋಟಿಸ್ ನೀಡಲಾಗಿದೆ. ಕಾರಿನ ನಂಬರ್​ ಪ್ಲೇಟ್ ಐಡೆಂಟಿಪೈ ಮಾಡಿದಾಗ ಈ ಕಾರು ರೋಹಿತ್​ ಶರ್ಮಾಗೆ ಸೇರಿದ್ದು ಅನ್ನೋದು ಗೊತ್ತಾಗಿದೆ. ಮುಂಬೈ-ಪುಣೆ ಎಕ್ಸ್​ಪ್ರೆಸ್​ ವೇ ಮಧ್ಯೆ ಒಟ್ಟು 3 ಕಡೆ ರೋಹಿತ್ ಅತೀ ವೇಗವಾಗಿ ಕಾರು ಚಲಾಯಿಸಿದ್ದಾರೆ. ಅಹ್ಮದಾಬಾದ್​ನಲ್ಲಿ ಪಾಕ್​ ವಿರುದ್ಧದ ಪಂದ್ಯದ ಬಳಿಕ ರೋಹಿತ್​ ಹೆಲಿಕಾಪ್ಟರ್​​ನಲ್ಲಿ ಮುಂಬೈಗೆ ತೆರಳಿದ್ರು. ಅಲ್ಲಿ ಎರಡು ದಿನ ಕುಟುಂಬಸ್ಥರ ಜೊತೆಗಿದ್ದು ಬಳಿಕ ಬಾಂಗ್ಲಾ ಮ್ಯಾಚ್​ಗೆ ತಮ್ಮ ಲ್ಯಾಂಬೋರ್ಗಿನಿ ಕಾರಿನಲ್ಲಿ ಪುಣೆಗೆ ಡ್ರೈವ್ ಮಾಡಿದ್ರು. ಇನ್ನು ರೋಹಿತ್​ ಕಾರಿನ ನಂಬರ್​​ ಪ್ಲೇಟ್​ನಲ್ಲಿ ಜೆರ್ಸಿ ನಂಬರೇ ಇದೆ.. ನಂಬರ್​-45.. ಈಗ ಟೀಂ ಇಂಡಿಯಾವನ್ನ ಮುನ್ನಡೆಸ್ತಿರೋ ಮಿಸ್ಟರ್​-45 ಈ ರೀತಿ ಅತಿ ವೇಗದಲ್ಲಿ ಕಾರು ಚಲಾಯಿಸಿರೋದಕ್ಕೆ ಭಾರಿ ಟೀಕೆ ಕೂಡ ಕೇಳಿ ಬರ್ತಿದೆ. ವರ್ಲ್ಡ್​ಕಪ್​​ ಟೈಮ್​ನಲ್ಲಿ ಯಾವುದೇ ಪೊಲೀಸ್ ಎಸ್ಕಾರ್ಟ್ ಕುಡ ಇಲ್ಲದೆ ರೋಹಿತ್​​ ಕಾರಿನಲ್ಲಿ ಪ್ರಯಾಣಿಸಿರೋದು ಒಂದಷ್ಟು ಚರ್ಚೆಗೆ ಗ್ರಾಸವಾಗಿದೆ. ರೋಹಿತ್ ಸೇಫ್ ಆಗಿ ಪುಣೆ ತಲುಪಿದ್ದಾರೆ ಅನ್ನೋದೇನೊ ನಿಜ. ಹಾಗಂತಾ ಈ ರೀತಿ ಹೈಸ್ಪೀಡ್​ನಲ್ಲಿ ಕಾರು ಚಲಾಯಿಸೋದು ಯಾವುದೇ ಕಾರಣಕ್ಕೂ ಸೇಫ್ ಅಲ್ಲ. ಅದಕ್ಕೆ ಸಾಕ್ಷಿ ನಮ್ಮ ರಿಷಬ್ ಪಂತ್. ತಮ್ಮ ಸಹ ಆಟಗಾರನ ಪರಿಸ್ಥಿತಿಯೇ ಹೀಗೆ ಆಗಿರೋವಾಗ ರೋಹಿತ್ ಅದನ್ನ ಸ್ವಲ್ಪ ಮನದಲ್ಲಿಟ್ಟುಕೊಳ್ಳಬೇಕಿತ್ತು. ಇದು ಕೇವಲ ರೋಹಿತ್ ಶರ್ಮಾಗಷ್ಟೇ ಅಲ್ಲ, ಎಲ್ಲರಿಗೂ ಅನ್ವಯವಾಗುತ್ತೆ.

 

Sulekha