ಮದುವೆಯಾಗಲು ಹೆಣ್ಣು ಹುಡುಕಿ ಕೊಡಿ : ವರನ ಉಡುಗೆ ಧರಿಸಿ ಯುವಕರ ಮೆರವಣಿಗೆ
ವಧು ಹುಡುಕಿ ಕೊಡಿ ಎಂದು ಸರ್ಕಾರಕ್ಕೆ ಯುವಕರ ಮನವಿ

ಮದುವೆಯಾಗಲು ಹೆಣ್ಣು ಹುಡುಕಿ ಕೊಡಿ : ವರನ ಉಡುಗೆ ಧರಿಸಿ ಯುವಕರ ಮೆರವಣಿಗೆವಧು ಹುಡುಕಿ ಕೊಡಿ ಎಂದು ಸರ್ಕಾರಕ್ಕೆ ಯುವಕರ ಮನವಿ

ಸೋಲಾಪುರ: ಇತ್ತೀಚಿನ ದಿನಗಳಲ್ಲಿ ಹೆಣ್ಣು ಸಿಗುತ್ತಿಲ್ಲ ಎನ್ನುವುದು ಯುವಕರ ಗೋಳಾಗಿದೆ. ಅದಕ್ಕಾಗಿ ಮ್ಯಾಟ್ರಿಮೋನಿ ಆ್ಯಪ್ ಗಳ ಮೊರೆ ಹೋಗುತ್ತಿರುವುದು ಸಾಮಾನ್ಯ. ಆದರೆ ಮಹಾರಾಷ್ಟ್ರದ ಸೋಲಾಪುರದ ಯುವರಕರು ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಸರ್ಕಾರದ ಬಳಿಯೇ ವಧು ಹುಡುಕಿ ಕೊಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ‘ಮೋದಿ ಧರಿಸಿರುವ ಉಡುಪು ಹೆಣ್ಣಿದ್ದೂ ಅಲ್ಲ, ಗಂಡಿದ್ದೂ ಅಲ್ಲ’ – ಕೀರ್ತಿ ಆಜಾದ್ ವಿವಾದಾತ್ಮಕ ಹೇಳಿಕೆ

ಮಹಾರಾಷ್ಟ್ರದ ಸೋಲಾಪುರದ “ವಧು-ವರ” ಮೋರ್ಚಾ ಎಂಬ ಸಂಘಟನೆಯ ಸದಸ್ಯರು ವರನ ದಿರಿಸು ಧರಿಸಿ ಮೆರವಣಿಗೆ ಮಾಡಿದ್ದಾರೆ. ಬಳಿಕ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಮಹಾರಾಷ್ಟ್ರದಲ್ಲಿ ಗಂಡು- ಹೆಣ್ಣಿನ ಅನುಪಾತ ಹೆಚ್ಚಿಸಲು ಪ್ರಸವಪೂರ್ವ ಜಾಗೃತಿ ಮತ್ತು ಪ್ರಸವಪೂರ್ವ ರೋಗ ನಿರ್ಣಯ ತಂತ್ರಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು. ಅಲ್ಲದೇ ಈ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ವಿವಾಹವಾಗಲು ವಧುವಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಸರ್ಕಾರದ ಮುಂದೆ ಮನವಿ ಮಾಡಿದ್ದಾರೆ.

ಈ ಮೆರವಣಿಗೆಯಲ್ಲಿ ನೂರಾರು ಅವಿವಾಹಿತರು ಮದುವೆ ದಿರಿಸು ಧರಿಸಿ ಪಾಲ್ಗೊಂಡಿದ್ದರು. ಕೆಲವರು ಮದುಮಗನ ಹಾಗೆ ಕುದುರೆ ಏರಿ, ವಾದ್ಯ ತಂಡದೊಂದಿಗೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

‘ಈ ಮೆರವಣಿಗೆಯನ್ನು ಕಂಡು ಜನರು ತಮಾಷೆ ಮಾಡಬಹುದು. ಆದರೆ ಗಂಡು – ಹೆಣ್ಣು ಅನುಪಾತದಲ್ಲಿ ಇಳಿಕೆಯಾಗಿರುವುದರಿಂದ ವಿವಾಹವಾಗಲು ಬಯಸುವ ಗಂಡು ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ಗಂಡು ಹೆಣ್ಣು ಅನುಪಾತ 1000.889 ಇದೆ. ಸರ್ಕಾರವೇ ಇದಕ್ಕೆ ಜವಾಬ್ದಾರಿ ಎಂದು ಈ ಮೆರವಣಿಗೆಯನ್ನು ಆಯೋಜಿಸಿದ, ಜ್ಯೋತಿ ಕ್ರಾಂತಿ ಪರಿಷತ್ ನ ಸಂಸ್ಥಾಪಕ ರಮೇಶ್ ಬರಾಸ್ಕರ್ ಹೇಳಿದ್ದಾರೆ.

suddiyaana