ಆಧಾರ್​-ಪ್ಯಾನ್​ನಿಂದಾಗಿ ನಿಮಗೂ ಬೀಳಬಹುದು 6000 ರೂ. ದಂಡ!

ಆಧಾರ್​-ಪ್ಯಾನ್​ನಿಂದಾಗಿ ನಿಮಗೂ ಬೀಳಬಹುದು 6000 ರೂ. ದಂಡ!

ನವದೆಹಲಿ: ಆಧಾರ್‌ ಕಾರ್ಡ್‌ – ಪಾನ್‌ ಕಾರ್ಡ್‌ ಇನ್ನೂ ಲಿಂಕ್‌ ಮಾಡಿಲ್ವಾ? ಆಧಾರ್‌ – ಪಾನ್‌ ಲಿಂಕ್‌ ಮಾಡದೇ ಇದ್ದರೆ ನಿಮಗೊಂದು ಶಾಕಿಂಗ್‌ ಸುದ್ದಿಯಿದೆ. ಆಧಾರ್‌ ಮತ್ತು ಪ್ಯಾನ್​ನ್ನು ಲಿಂಕ್​ ಮಾಡದೇ ಐಟಿಆರ್​ ಫೈಲ್​ ಮಾಡಿದರೆ 6000ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಹಣಕಾಸು ಇಲಾಖೆ ಎಚ್ಚರಿಕೆ ನೀಡಿದೆ.

ಆದಾಯ ತೆರಿಗೆ ರಿಟರ್ನ್ ಫೈಲ್‌ ಮಾಡಲು ಈಗಾಗಲೇ ಅರ್ಜಿ ಸಲ್ಲಿಕೆ ಮಾಡಲು ಪ್ರಾರಂಭವಾಗಿದೆ. ಜು. 30 ವರೆಗೆ ಅರ್ಜಿ ಸಲ್ಲಿಕೆಗೆ ಹಣಕಾಸು ಇಲಾಖೆ ಅವಕಾಶ ನೀಡಿದೆ. ಇದೀಗ ಆದಾಯ ತೆರಿಗೆ ರಿಟರ್ನ್ ಫೈಲ್‌ ಮಾಡುವಾಗ ಆಧಾರ್‌ ಕಾರ್ಡ್‌ – ಪಾನ್‌ ಕಾರ್ಡ್‌ ಲಿಂಕ್‌ ಆಗದೇ ಇದ್ದರೆ ಆರು ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗುವುದು ಎಂದು ಹಣಕಾಸು ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಅನ್ನಭಾಗ್ಯದ ಜೊತೆ ಹಣದ ಭಾಗ್ಯಕ್ಕೆ ಷರತ್ತು ಅನ್ವಯ! – ಮತ್ತೊಂದು ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ

ಆಧಾರ್‌ನೊಂದಿಗೆ ಪಾನ್ ಲಿಂಕ್ ಮಾಡಲು ಈ ವರ್ಷದ ಜೂನ್ 30ರ ತನಕ ಗಡುವು ನೀಡಲಾಗಿತ್ತು. ಒಂದು ವೇಳೆ ಇದನ್ನು ಮಾಡಲು ವಿಫಲರಾದರೆ, ಜುಲೈ 1, 2023ರಂದು ಅವರ ಪಾನ್​ ಅಮಾನ್ಯವಾಗುತ್ತದೆ ಎಂದು ಹೇಳಲಾಗಿದೆ. ಒಂದು ವೇಳೆ ಪಾನ್​ ಕಾರ್ಡ್ ನಿಷ್ಕ್ರಿಯಗೊಂಡರೆ ಪಾನ್​ ಕಾರ್ಡ್​ ಆಧಾರಿತ ಕೆಲವು ಸೇವೆಗಳನ್ನು ಪಡೆಯಲು ತಮ್ಮ ಖಾತೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಸೂಚಿಲಾಗಿದೆ.

ಮೇಲಾಗಿ, 2023ರ ಜುಲೈ 31ರ ಮೊದಲು ನಿಮ್ಮ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ನಿಮಗೆ ಸಾಧ್ಯವಾಗದೇ ಇರಬಹುದು. ಏಕೆಂದರೆ ITR ಗಡುವು ಒಂದು ತಿಂಗಳಿಗಿಂತ ಕಡಿಮೆಯಿರುತ್ತದೆ. ಒಂದು ವೇಳೆ ಈಗಾಗಲೇ ನೀವೂ ದಂಡ ಪಾವತಿಸಿದ ನಂತರವೂ ಪಾನ್​ ನಿಷ್ಕ್ರಿಯವಾಗಿದ್ದರೆ, ಅದು ಮತ್ತೆ ಸಕ್ರಿಯವಾಗಲು 30 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.

ಇನ್ನು ಪಾನ್ ಕಾರ್ಡ್​ನಿಂದಾಗಿ ಐಟಿಆರ್​ ಫೈಲ್​ ಮಾಡುವುದು ತಡವಾದರೆ, ಇದಕ್ಕೂ ಕೂಡ ದಂಡವಿದ್ದು ಸುಮಾರು 5,000 ರೂ. ಕಟ್ಟಬೇಕಾಗುತ್ತದೆ. ಆದ್ದರಿಂದ, ನಿಮ್ಮ PAN ಪ್ರಸ್ತುತ ನಿಷ್ಕ್ರಿಯವಾಗಿದ್ದರೆ ನೀವು 5,000 ರೂಪಾಯಿಗಳ ತಡವಾದ ಫೈಲಿಂಗ್ ಶುಲ್ಕ ಜತೆಗೆ ಪ್ಯಾನ್ ಮತ್ತು ಆಧಾರ್​​ನ್ನು ಲಿಂಕ್​ಗಾಗಿ 1,000 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ತಮ್ಮ ಆಧಾರ್​​ನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡದ ತೆರಿಗೆದಾರರು ಆದಷ್ಟು ಬೇಗ ಮಾಡಬೇಕು. ತಮ್ಮ ಆದಾಯ ತೆರಿಗೆ ರಿಟರ್ನ್‌ಗಳನ್ನು ನಿಗದಿತ ದಿನಾಂಕದೊಳಗೆ ಅಂದರೆ 31 ಜುಲೈ 2023 ರೊಳಗೆ ಸಲ್ಲಿಸಬೇಕು ಎಂದು ಶಿಫಾರಸು ಮಾಡಲಾಗಿದೆ. ಜುಲೈ 31 ರೊಳಗೆ ತಮ್ಮ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಸಾಧ್ಯವಾಗದ ತೆರಿಗೆದಾರರು 31ನೇ ಡಿಸೆಂಬರ್ 2023ರವರೆಗೆ ತಡವಾದ ರಿಟರ್ನ್‌ಗಳನ್ನು ಸಲ್ಲಿಸಬಹುದು ಎಂದು ಹಣಕಾಸು ಇಲಾಖೆ ಸೂಚಿಸಿದೆ.

suddiyaana