ತಮಿಳು ಸಂಸ್ಕೃತಿ ಮೆರೆದ ನಿರ್ಮಲಾ ಸೀತಾರಾಮನ್ – ನೇರಳೆ ಸೀರೆಯಲ್ಲಿ ಮಿಂಚಿದ ಹಣಕಾಸು ಸಚಿವೆ

ತಮಿಳು ಸಂಸ್ಕೃತಿ ಮೆರೆದ ನಿರ್ಮಲಾ ಸೀತಾರಾಮನ್ – ನೇರಳೆ ಸೀರೆಯಲ್ಲಿ ಮಿಂಚಿದ ಹಣಕಾಸು ಸಚಿವೆ

ಸತತ 9ನೇ ಬಾರಿ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿದ್ದಾರೆ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್. ಪ್ರತಿ ಬಾರಿ ತಮ್ಮ ಸೀರೆಯ ಮೂಲಕ ಎಲ್ಲರ ಗಮನ ಸೆಳೆಯುವ ನಿರ್ಮಲ ಸೀತಾರಾಮನ್ ಈ ಬಾರಿ ತಮಿಳು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮೂಲಕ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:ಗೋಡಂಬಿ ಹಾಗೂ ತೆಂಗು ಬೆಳೆಗಾರರಿಗೆ ಬಂಪರ್ – ಕ್ಯಾನ್ಸರ್, ಮಧುಮೇಹ ಔಷಧಿ ಅಗ್ಗ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮಿಳುನಾಡಿನ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವ ಗಾಢ ನೇರಳೆ ಬಣ್ಣದ (ಮೆಜೆಂತಾ) ಕೈಮಗ್ಗದ ಕಾಂಜೀವರಂ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಿಂದ ನೇಯ್ದ ಕಂದು ಬಣ್ಣದ ಅಂಚು ಹೊಂದಿರುವ ಕೆನ್ನೇರಳೆ ಬಣ್ಣದ ಸೀರೆಯಲ್ಲಿ ಕೇಂದ್ರ ಸಚಿವೆ ಗಮನ ಸೆಳೆದಿದ್ದಾರೆ. ಈ ಮೂಲಕ ಭಾರತದ ಸಾಂಪ್ರದಾಯಿಕ ಕೈಮಗ್ಗ ನೇಕಾರಿಕೆಯನ್ನು ಪ್ರೋತ್ಸಾಹಿಸಿದ್ದಾರೆ.

ಕಳೆದ 8 ಬಜೆಟ್ ಮಂಡನೆ ಸಮಯದಲ್ಲೂ ನಿರ್ಮಲಾ ಸೀತಾರಾಮನ್ ಅವರು ಭಾರತದ ವಿವಿಧ ಪ್ರದೇಶಗಳ ಸಾಂಪ್ರದಾಯಿಕ ಸೀರೆ ತೊಟ್ಟು ಎಲ್ಲರ ಗಮನ ಸೆಳೆದಿದ್ದರು. ಇನ್ನೂ 2025ರಲ್ಲಿ ಕೆನೆ ಬಣ್ಣದ ಮಧುಬನಿ ಸೀರೆ, ಕೆಂಪು ಬಣ್ಣದ ರವಿಕೆ, ಶಾಲು ತೊಟ್ಟಿದ್ದರು. ಕಳೆದ ಬಾರಿ ಈ ಸೀರೆಯನ್ನು ಪದ್ಮ ಪ್ರಶಸ್ತಿ ವಿಜೇತೆ ಬಿಹಾರದ ದುಲಾರಿ ದೇವಿ ಉಡುಗೊರೆಯಾಗಿ ನೀಡಿದ್ದರು. 2019ರಲ್ಲಿ ಗೋಲ್ಡನ್ ಬಾರ್ಡರ್ ಹೊಂದಿರುವ ಗುಲಾಬಿ ಬಣ್ಣದ ರೇಷ್ಮೆ ಸೀರೆ, 2021ರಲ್ಲಿ ಕೆಂಪು ಮತ್ತು ಬಿಳಿ ಪೋಚಂಪಲ್ಲಿ ರೇಷ್ಮೆ ಸೀರೆ, 2022ರಲ್ಲಿ ಒಡಿಶಾದ ಕಂದು ಮತ್ತು ಮರೂನ್ ಬಣ್ಣದ ಬೊಮ್ಕೈ ಸೀರೆ, 2023ರಲ್ಲಿ ಕರ್ನಾಟಕದ ಸಾಂಪ್ರದಾಯಿಕ ಕಲೆಯಾದ ಕಪ್ಪು ಕಸೂತಿ ಬಣ್ಣದ  ಕೆಂಪು ರೇಷ್ಮೆ ಸೀರೆ, 2024ರ ಮಧ್ಯಂತರ ಬಜೆಟ್ನಲ್ಲಿ ಪಶ್ಚಿಮ ಬಂಗಾಳದ ಕಾಂತ ಕಸೂತಿ ಹೊಂದಿರುವ ನೀಲಿ ಟಸ್ಸರ್ ರೇಷ್ಮೆ ಸೀರೆಯನ್ನು ಧರಿಸಿದ್ದರು. ಈ ರೀತಿ ಪ್ರತಿ ಬಾರಿ ನಿರ್ಮಲ ಸೀತಾರಾಮನ್ ಅವರು ಧರಿಸುವ ಸೀರೆ ಟ್ರೆಂಡ್ ಆಗುತ್ತದೆ. ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ನಿರ್ಮಲಾ ಸೀತಾರಾಮನ್ ಅವರ ಈ ಸೀರೆಗಳು, ದೇಶದಲ್ಲಿನ ವಿವಿಧ ರಾಜ್ಯಗಳ ಶ್ರೀಮಂತ ಜವಳಿ ಕಲೆ ಮತ್ತು ಕರಕುಶಲತೆಯನ್ನು ಅನಾವರಣಗೊಳಿಸುತ್ತವೆ. ಮಂಗಳಗಿರಿ, ಪೋಚಂಪಳ್ಳಿ, ಇಳಕಲ್ನಂತಹ ಹೀಗೆ ಸಾಕಷ್ಟು ವಿಶಿಷ್ಟ ಸೀರೆಗಳ ಮೂಲಕ ಅವರು ದೇಶದ ಸಂಸ್ಕೃತಿಯನ್ನು ಪ್ರದರ್ಶಿಸುತ್ತಾರೆ.

Sulekha